ಸಂದೀಪ್ ಅಗರ್ ವಾಲ್ , ಸಂಸ್ಥಾಪಕ  ಮತ್ತು ಸಿಇಒ , ಡ್ರೂಮ್
(ಪ್ರಧಾನಿ)ಮೋದಿಯವರ ಆಡಳಿತದಲ್ಲಿ, ಭಾರತವನ್ನು ಇನ್ನೂ ತನ್ನ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕಿರುವ ಆರ್ಥಿಕ ಶಕ್ತಿ ಎಂದು ನೋಡಲಾಗುತ್ತಿದೆ. 2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶದ ಕಾರ್ಯನಿರ್ವಹಣೆಯನ್ನು ಜಗತ್ತು ಗಮನಿಸುತ್ತಿದೆ… ಪ್ರಧಾನಿಯವರು ಭಾರತದ ಐಟಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಹಲವಾರು ತಂತ್ರಜ್ಞಾನದ ಉಪಕ್ರಮಗಳನ್ನೂ ಆರಂಭಿಸಿದ್ದಾರೆ. ಅವರು ಕೆಂಪು ಕೋಟೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಗ್ರಾಮೀಣ-ನಗರದ ಅಂತರವನ್ನು ತುಂಬುವ ನಿಟ್ಟಿನಲ್ಲಿ ತಂತ್ರಜ್ಞಾನದ ಮಹತ್ವವನ್ನು ಒತ್ತಿಹೇಳಿದ್ದಾರೆ... ಅವರು ದೇಶಾದ್ಯಂತ 6 ಲಕ್ಷ ಕಿಲೋಮಿಟರ್ ಉದ್ದಕ್ಕೆ "ಬ್ರಾಡ್‍ಬ್ಯಾಂಡ್ ಹೆದ್ದಾರಿ"ಯನ್ನು ಹುಟ್ಟುಹಾಕುವ ಮತ್ತು ಸಂಪರ್ಕ ಕಲ್ಪಿಸುವ ಕುರಿತು ಮಾತನಾಡಿದ್ದಾರೆ. ಮೋದಿಯವರ ಉತ್ತಮ ಯೋಜನೆಗಳಲ್ಲಿ ಒಂದಾದ ಡಿಜಿಟಲ್ ಇಂಡಿಯಾ ಯೋಜನೆಯು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಹೈಸ್ಪೀಡ್ ಇಂಟರ್‍ನೆಟ್ ಜೊತೆಗೆ ಎಲ್ಲ ನಾಗರಿಕರಿಗೆ ಅಗತ್ಯ ಸೌಲಭ್ಯವಾಗಿ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸುವ ಗುರಿ ಹೊಂದಿದೆ. ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯು ಭಾರತ ಸರ್ಕಾರದ ಫ್ಲಾಗ್‍ಶಿಪ್ ಕಾರ್ಯಕ್ರಮವಾಗಿದ್ದು, ದೇಶದಲ್ಲಿ ಸ್ಟಾರ್ಟ್ ಅಪ್‍ಗಳಿಗೆ ಬಲವಾದ ಆರ್ಥಿಕ ಪರಿಸರ ನಿರ್ಮಿಸುವ ಗುರಿಯನ್ನು ಹೊಂದಿದೆ. "ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್‍ ಇಂಡಿಯಾ" ಯೋಜನೆಯಲ್ಲಿ ನರೇಂದ್ರ ಮೋದಿಯವರ ನೇರ ತೊಡಗಿಸಿಕೊಳ್ಳುವಿಕೆಯು ಸ್ಟಾರ್ಟ್ ಅಪ್‍ಗಳಿಗೆ ಒಳ್ಳೆಯ ಪ್ರೋತ್ಸಾಹವಾಗಿದ್ದು, ಇದರಿಂದ ಆರ್ಥಿಕ ಪರಿಸರದ ಮೇಲೆ ಒಳ್ಳೆಯ ಪರಿಣಾಮವನ್ನುನಿರೀಕ್ಷಿಸಬಹುದಾಗಿದೆ.