Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಸ್ರೇಲ್ ನ ಮಾಜಿ ಅಧ್ಯಕ್ಷ ಷಿಮೋನ್ ಪೆರೆಸ್ ಅವರ ನಿಧನದ ಹಿನ್ನೆಲೆಯಲ್ಲಿ ಇಸ್ರೇಲ್ ನ ಜನತೆಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋಲ್ ನ ಮಾಜಿ ಅಧ್ಯಕ್ಷ ಶ್ರೀ ಷಿಮೋನ್ ಪೆರೆಸ್ ಅವರ ನಿಧನದ ಹಿನ್ನೆಲೆಯಲ್ಲಿ ಇಸ್ರೇಲ್ ಜನತೆಗೆ ಸಂತಾಪ ಸೂಚಿಸಿದ್ದಾರೆ.

“ಮಾಜಿ ಅಧ್ಯಕ್ಷ ಷಿಮೋನ್ ಪೆರೆಸ್ ಅವರ ಅಗಲಿಕೆಯಿಂದ ನಾವು ಒಬ್ಬ ಪ್ರಮುಖ ವಿಶ್ವ ನಾಯಕ ಮತ್ತು ಭಾರತದ ಒಬ್ಬ ಗೆಳೆಯನನ್ನು ಕಳೆದುಕೊಂಡಿದ್ದೇವೆ. ಅವರ ನಿಧನದಿಂದ ನೋವಾಗಿದೆ. ಇಸ್ರೇಲ್ ಜನತೆಗೆ ನಮ್ಮ ಸಂತಾಪಗಳು “, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/AK