ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದರ ಏರಿಕೆಯನ್ನು ಸರಿದೂಗಿಸಲು ಪರಿಷ್ಕೃತ ಮೂಲ ವೇತನ/ಪಿಂಚಣಿಯ ಶೇ.2ರ ಹೆಚ್ಚಳಕ್ಕೆ ಅನುಗುಣವಾಗಿ 01.07.2016ರಿಂದ ಬಾಕಿ ಇರುವ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರ (ಡಿ.ಆರ್.) ನೀಡಿಕೆಗೆ ಒಂದು ಕಂತು ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಹೆಚ್ಚಳವು 7ನೇ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಒಪ್ಪಿತ ಸೂತ್ರಕ್ಕೆ ಅನುಗುಣವಾಗಿದೆ.
ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡೂ ಸೇರಿ ಖಜಾನೆಯ ಮೇಲೆ ಆಗುವ ಒಟ್ಟು ಪರಿಣಾಮ ವಾರ್ಷಿಕ ರೂ. 5622.10 ಕೋಟಿ ರೂಪಾಯಿ ಮತ್ತು 2016-17ನೇ ವಿತ್ತವರ್ಷದಲ್ಲಿ 8 ತಿಂಗಳುಗಳ ಅವಧಿಗೆ (ಅಂದರೆ 2016ರ ಜುಲೈನಿಂದ ಫೆಬ್ರವರಿ 2017ರವರೆಗೆ) ರೂ. 3748.06 ಕೋಟಿ ರೂಪಾಯಿ ಆಗಿದೆ. ಸುಮಾರು 50.68 ಲಕ್ಷ ಸರ್ಕಾರಿ ನೌಕರರು ಮತ್ತು 54.24 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ.
AKT/VBA/SH