Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನ

ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನ

ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುಗ್ರಾಮದಲ್ಲಿಂದು ಹರಿಯಾಣ ಸ್ವರ್ಣ ಜಯಂತಿ ಆಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹರಿಯಾಣ ರಚನೆಯಾದ ಮತ್ತು ರಾಜ್ಯ ರಚನೆಯ ಗುರಿಗಳತ್ತ ತಿರುಗಿ ನೋಡುವ ದಿನ ಇದಾಗಿದೆ ಎಂದು ಹೇಳಿದರು.

ಹರಿಯಾಣ ತುಲನಾತ್ಮಕವಾಗಿ ಒಂದು ಪುಟ್ಟ ರಾಜ್ಯ, ಆದರೆ, ಇದು ಹಲವು ಕ್ಷೇತ್ರಗಳಲ್ಲಿ ಕೊಡುಗೆ ನೀಡಿದೆ ಎಂದು ಹೇಳಿದರು. ಹರಿಯಾಣದಲ್ಲಿ ಕೇವಲ ರೈತರಿದ್ದಾರೆ ಎಂದು ನಂಬಲಾಗಿದೆ. ಆದರೆ, ಈ ರಾಜ್ಯದಿಂದ ಬಂದ ವ್ಯಾಪಾರಿಗಳು ಕೂಡ ಅದ್ಭುತ ಯಶಸ್ಸು ಕಂಡಿದ್ದಾರೆ ಎಂದರು.

ಹರಿಯಾಣದ ಜನರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನವನ್ನೇ ದೇಶಕ್ಕೆ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಇಂಥ ಗೌರವಾನ್ವಿತ ರಾಜ್ಯದಲ್ಲಿ, ಹೆಣ್ಣು ಭ್ರೂಣ ಹತ್ಯೆ ಇರಲೇಬಾರದು ಎಂದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ಹೆಣ್ಣು ಭ್ರೂಣ ಹತ್ಯೆ ಆಗದಂತೆ ಖಾತ್ರಿ ಪಡಿಸಲು ಹರಿಯಾಣ ಈಗ ಪ್ರಯತ್ನ ಕೈಗೊಂಡಿದೆ ಎಂದರು. ಹರಿಯಾಣದ ಪ್ರತಿಯೊಬ್ಬ ಪ್ರಜೆಯೂ ಹೆಣ್ಣು ಮಗುವಿನ ರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಹೇಳಿದರು.

ಈ ಸುವರ್ಣ ಮಹೋತ್ಸವ ವರ್ಷದಲ್ಲಿ ಇಡೀ ರಾಜ್ಯವನ್ನು ಬಯಲು ಶೌಚಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಹರಿಯಾಣ ಜನತೆ ಚಿಂತಿಸಬೇಕು ಎಂದರು. ಇಂಥ ಪರಿವರ್ತನೆಯ ಪ್ರಕ್ರಿಯೆಗಳು ನಮ್ಮ ಹಳ್ಳಿಗಳಲ್ಲಿ ಆರಂಭವಾಗಬೇಕು ಮತ್ತು ಇದು ಆದಾಗ, ಹರಿಯಾಣದ ಅಭಿವೃದ್ಧಿಗೆ ವೇಗ ದೊರಕುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

AKT/AK