ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮುಂಬೈ ನಗರ ಸಾರಿಗೆ ಯೋಜನೆ (ಎಂಯುಟಿಪಿ) – 3ನೇ ಹಂತಕ್ಕೆ ತನ್ನ ಅನುಮೋದನೆ ನೀಡಿದೆ.
ಪೂರ್ಣಗೊಳ್ಳುವ ವೆಚ್ಚ 10,947 ಕೋಟಿ ರೂಪಾಯಿಯೊಂದಿಗೆ ಯೋಜನೆಯ ಅಂದಾಜು ವೆಚ್ಚ 8679 ಕೋಟಿ ರೂಪಾಯಿಯಾಗಿದೆ. ಯೋಜನೆಯು ಮುಂದಿನ 5 ವರ್ಷಗಳ ಅವಧಿಯಲ್ಲಿ 13ನೇ ಯೋಜನಾ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಪಶ್ಚಿಮ ರೈಲ್ವೆ ಪ್ರಸ್ತುತ ಇರುವ ಜನದಟ್ಟಣೆಯ ಜೋಡಿ ಮಾರ್ಗದಲ್ಲಿ ವಿರಾರ್-ದಹನು ರಸ್ತೆ ನಡುವೆ ಉಪ ನಗರ ಸೇವೆ ಒದಗಿಸುತ್ತಿದೆ ಇದು ಮುಂಬೈ-ಅಹಮದಾಬಾದ್ /ದೆಹಲಿ ಮಾರ್ಗದ ಮುಖ್ಯ ಲೈನ್ ನ ಭಾಗವಾಗಿದೆ. ಪ್ರಮುಖ ಮಾರ್ಗ ಈಗಾಗಲೇ ಭರ್ತಿಯಾಗಿಹೋಗಿದೆ ಮತ್ತು ಈ ಮಾರ್ಗದಲ್ಲಿ ಉಪ ನಗರ ಸೇವೆಯನ್ನು ಹೆಚ್ಚುವರಿಯಾಗಿ ನೀಡಲು ಅವಕಾಶವಿಲ್ಲ. ವಿರಾರ್-ದಹನು ರಸ್ತೆ ನಡುವೆ ಹೆಚ್ಚುವರಿ ಜೋಡಿ ಮಾರ್ಗ ನಿರ್ಮಾಣ ಈ ವಲಯದ ಪ್ರಯಾಣಿಕರ ಬೇಡಿಕೆ ಈಡೇರಿಸಲು ಸಾಧ್ಯ. ಇದು ಚರ್ಚ್ ಗೇಟ್ ನಿಂದ ದಹನು ರೋಡ್ ವರೆಗೆ ಉಪನಗರ ಸೇವೆಯನ್ನು ವಿಸ್ತರಿಸುತ್ತದೆ. ಪನ್ವೆಲ್ –ಕರ್ಜಟ್ ಜೋಡಿ ಮಾರ್ಗದ ಉಪನಗರ ಕಾರಿಡಾರ್ ಗಣನೀಯ ನಗರೀಕರಣ ಮತ್ತು ಇತ್ತೀಚಿನ ದಿನಗಳಲ್ಲಿ ವಲಯದಲ್ಲಿ ಹೆಚ್ಚಳವಾಗಿರುವ ಜನಸಂಖ್ಯೆಯ ಅಗತ್ಯ ಪೂರೈಸಬಲ್ಲುದಾಗಿದೆ. ಅಲ್ಲದೆ ಇದು ಕರ್ಜತ್ ನಿಂದ ಸಿ.ಎಸ್.ಟಿ.ವರೆಗೆ ಪನ್ವೆಲ್ ಮಾರ್ಗವಾಗಿ ಪರ್ಯಾಯ ಮಾರ್ಗವನ್ನು ಒದಗಿಸಲಿದ್ದು, ಹಾಲಿ ಕಲ್ಯಾಣ್ ಮೂಲಕ ಹಾದುಹೋಗುವ ಮಾರ್ಗಕ್ಕಿಂತ 23 ಕಿಲೋ ಮೀಟರ್ ಕಡಿಮೆ ಆಗಲಿದೆ ಮತ್ತು ಇದು ಸಿ.ಎಸ್.ಟಿ.ಯಿಂದ ಕರ್ಜತ್ ನಡುವಿನ ನಿಧಾನ ರೈಲುಗಳ ಪ್ರಯಾಣದ ಅವಧಿಯನ್ನು 35ರಿಂದ 40 ನಿಮಿಷಗಳ ಕಾಲ ಉಳಿಸಲಿದೆ.
ಪ್ರಸ್ತುತ, ಕಲ್ಯಾಣ್ ನಿಂದ ವಾಶಿ/ಪನ್ವೆಲ್ ಅಥವಾ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುವವರು, ಥಾಣೆಯಲ್ಲಿ ಇಳಿದು ಟ್ರಾನ್ಸ್ ಬಂದರು ಮೂಲಕ ಪ್ರಯಾಣಿಸಬೇಕಾಗುತ್ತಿದೆ. ಇದು ಮಧ್ಯ ರೈಲ್ವೆಯ ಹೆಚ್ಚು ಪ್ರಯಾಣಿಕರ ನಿಲ್ದಾಣಗಳಲ್ಲಿ ಒಂದಾದ ಥಾಣೆಯಲ್ಲಿ ಜನದಟ್ಟಣೆಗೆ ಕಾರಣವಾಗಿದೆ.
ಐರೋಲಿ-ಕಲ್ವಾ ಕಾರಿಡಾರ್ ಥಾಣೆ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲಿದೆ ಮತ್ತು ಪ್ರಯಾಣಿಕರು ಥಾಣೆ ಬೈಪಾಸ್ ಮೂಲಕ ಸಾಗುವುದರಿಂದ ಅವರ ಸಮಯವನ್ನೂ ಉಳಿಸಲಿದೆ. ಹೊಸ ಬೋಗಿಗಳ ಸಂಗ್ರಹಣೆ ಸೇವೆಯ ಗುಣಮಟ್ಟ ಹೆಚ್ಚಿಸುತ್ತದೆ ಮತ್ತು ಜನದಟ್ಟಣೆ ಕಡಿಮೆ ಮಾಡುತ್ತದೆ. ಅತಿಕ್ರಮ ಪ್ರವೇಶ ನಿಯಂತ್ರಣಕ್ಕಾಗಿ 22 ಸ್ಥಳಗಳಲ್ಲಿ ಕೈಗೊಳ್ಳಲುದ್ದೇಶಿಸಿರುವ ಕಾಮಗಾರಿಗಳು ಗಣನೀಯವಾಗಿ ಅತಿಕ್ರಮ ಪ್ರವೇಶ ತಡೆಯುತ್ತವೆ ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಪರಿಸರವನ್ನು ಒದಗಿಸುತ್ತದೆ.
ಈ ಯೋಜನೆಯಡಿ ಬರುವ ಪ್ರದೇಶಗಳು ಮಹಾರಾಷ್ಟ್ರದ ಮುಂಬೈ ,ಥಾಣೆ, ಪಾಲ್ಘರ್ ಮತ್ತು ರಾಯ್ಗಡ್ ಜಿಲ್ಲೆ.
ಹಿನ್ನೆಲೆ:
ಮಧ್ಯ ಮತ್ತು ಪಶ್ಚಿಮ ರೈಲ್ವೆಯ ವ್ಯಾಪ್ತಿಯ ಮುಂಬೈ ಉಪನಗರ ರೈಲ್ವೆ ಜಾಲ 376 ಕಿಲೋ ಮೀಟರ್ ಆಗಿದೆ. ಇದರಲ್ಲಿ ಐದು ಕಾರಿಡಾರ್ ಗಳಿದ್ದು ಎರಡು ಪಶ್ಚಿಮ ರೈಲ್ವೆಯಲ್ಲಿ, ಎರಡು ಮಧ್ಯರೈಲ್ವೆಯಲ್ಲಿ ಮತ್ತು ಒಂದು ಮಧ್ಯರೈಲ್ವೆಯ ಬಂದರು ಮಾರ್ಗದಲ್ಲಿ ಬರುತ್ತದೆ. ಪ್ರತಿದಿನ ಸುಮಾರು 80 ಲಕ್ಷ ಜನರು ಉಪನಗರ ವಲಯದಲ್ಲಿನ 2900ಕ್ಕೂ ಹೆಚ್ಚು ರೈಲು ಸೇವೆಗಳಲ್ಲಿ ಪ್ರಯಾಣ ಮಾಡುತ್ತಾರೆ. ಉಪ ನಗರ ರೈಲುಗಳಲ್ಲಿ ಅದರಲ್ಲೂ ಕಚೇರಿಯ ವೇಳೆಯಲ್ಲಿ ಅತಿ ಹೆಚ್ಚು ಜನರಿಂದ ಕಿಕ್ಕಿರಿದಿರುತ್ತದೆ. ಭೌಗೋಳಿಕ ತೊಡಕು, ಚದುರಿದ ಜನಸಂಖ್ಯೆ ಮತ್ತು ವಾಣಿಜ್ಯ ಪ್ರದೇಶದಿಂದಾಗಿ ರೈಲು ಜಾಲದ ಸೇವೆ ಮುಂಬೈನಲ್ಲಿ ಪ್ರಧಾನ ಸಾಮೂಹಿಕ ಸಾರಿಗೆ ಮಾಧ್ಯಮವಾಗಿದೆ. ಹೆಚ್ಚುತ್ತಲೇ ಇರುವ ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸಲು, ಹೊಸ ಉಪನಗರ ಕಾರಿಡಾರ್ ಅನ್ನು ಪನ್ವೆಲ್ –ಕರ್ಜತ್ (28 ಮಾರ್ಗ ಕಿ.ಮೀ), ಐರೋಲಿ –ಕಲ್ವಾ ನಡುವೆ (3 ಮಾರ್ಗದ ಕಿ.ಮೀ.) ಹೊಸ ಮೇಲ್ಸೇತುವೆ ಕಾರಿಡಾರ್, ವಿರಾರ್ –ದಹನು ರಸ್ತೆ (63 ರೂಟ್ ಕಿ.ಮೀ) ನಾಲ್ಕು ಪಟ್ಟು ಹೆಚ್ಚಳ, 565 ಹೊಸ ಬೋಗಿಗಳ ದಾಸ್ತಾನು ಮತ್ತು ಮಧ್ಯದ ವಲಯಗಳಲ್ಲಿ ಅತಿಕ್ರಮ ಪ್ರವೇಶ ನಿಯಂತ್ರಣ ಕ್ರಮಗಳನ್ನು ಮುಂಬೈ ನಗರ ಸಾರಿಗೆ ಯೋಜನೆ (ಎಂಯುಟಿಪಿ) 3ನೇ ಹಂತದಲ್ಲಿ ಸೇರಿಸಲಾಗಿದೆ.
AKT/VBA/SH