ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇಂದು 2025-26ನೇ ಹಣಕಾಸು ವರ್ಷಕ್ಕೆ ಮಾರ್ಪಡಿಸಿದ ಬಡ್ಡಿ ಸಹಾಯಧನ ಯೋಜನೆ (ಎಂ.ಐ.ಎಸ್.ಎಸ್.) ಅಡಿಯಲ್ಲಿ ಬಡ್ಡಿಸಹಾಯಧನ (ಐ.ಎಸ್.)ವನ್ನು ಮುಂದುವರಿಸಲು ಅನುಮೋದನೆ ನೀಡಿತು ಮತ್ತು ಅಗತ್ಯವಿರುವ ಸಹಾಯನಿಧಿ ವ್ಯವಸ್ಥೆಗಳನ್ನು ಅನುಮೋದಿಸಿತು.
ಎಂ.ಐ.ಎಸ್.ಎಸ್ ಎಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.)ಮೂಲಕ ರೈತರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಕೇಂದ್ರ ವಲಯದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ:
ಯೋಜನೆಯ ರಚನೆ ಅಥವಾ ಇತರ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಪ್ರಸ್ತಾಪವು ಆಗಿಲ್ಲ.
ದೇಶದಲ್ಲಿ 7.75 ಕೋಟಿಗೂ ಹೆಚ್ಚು ಕೆಸಿಸಿ ಖಾತೆಗಳಿವೆ. ಈ ಬೆಂಬಲದ ಮುಂದುವರಿಕೆ ಕೃಷಿಗೆ ಸಾಂಸ್ಥಿಕ ಸಾಲದ ಹರಿವನ್ನು ಉಳಿಸಿಕೊಳ್ಳಲು ಬಹು ಮುಖ್ಯವಾಗಿದೆ, ಇದು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿ ಒಳಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿದೆ.
ಕೃಷಿ ಸಾಲದ ಪ್ರಮುಖ ಮುಖ್ಯಾಂಶಗಳು:
ಪ್ರಸ್ತುತ ಸಾಲ ವೆಚ್ಚದ ಪ್ರವೃತ್ತಿಗಳು, ಸರಾಸರಿ ಎಂ.ಸಿ.ಎಲ್.ಆರ್. ಮತ್ತು ರೆಪೊ ದರ ಚಲನೆಗಳನ್ನು ಗಮನಿಸಿದರೆ, ಬಡ್ಡಿ ಸಹಾಯಧನದ ದರವನ್ನು 1.5% ನಲ್ಲಿ ಕಾಯ್ದುಕೊಳ್ಳುವುದು ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳನ್ನು ಬೆಂಬಲಿಸಲು ಹಾಗು ರೈತರಿಗೆ ಕಡಿಮೆ ವೆಚ್ಚದ ಸಾಲಕ್ಕೆ ನಿರಂತರ ಸುಲಭಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿದೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರವು ರೈತರ ಆದಾಯವನ್ನು ದ್ವಿಗುಣಗೊಳಿಸಲು, ಗ್ರಾಮೀಣ ಸಾಲ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಹಾಗು ಸಕಾಲಿಕ ಮತ್ತು ಕೈಗೆಟುಕುವ ಸಾಲ ಸುಲಭಲಭ್ಯತೆಯ ಮೂಲಕ ಕೃಷಿ ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರದ ಅಚಲ ಬದ್ಧತೆಯನ್ನು ಬಲಪಡಿಸುತ್ತದೆ.
*****