Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರವರ್ತಕ ನವೋದ್ಯಮಿ ಮತ್ತು ಕೈಗಾರಿಕೋದ್ಯಮಿ ಶ್ರೀ ಟಿ.ಪಿ.ಜಿ. ನಂಬಿಯಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಸಮಕಾಲೀನ ಪ್ರವರ್ತಕ ನವೋದ್ಯಮಿ ಮತ್ತು ಕೈಗಾರಿಕೋದ್ಯಮಿ ಶ್ರೀ ಟಿ.ಪಿ.ಜಿ. ನಂಬಿಯಾರ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಶ್ರೀ ಟಿ.ಪಿ.ಜಿ. ನಂಬಿಯಾರ್ ಜೀ ಅವರು ಭಾರತವನ್ನು ಆರ್ಥಿಕವಾಗಿ ಸದೃಢವಾಗಿಸುವ ಪ್ರಬಲ ಕಾಯಕಯೋಗಿಯಾಗಿದ್ದರು ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

“ನವೋದ್ಯಮಿಯಾದ ಶ್ರೀ ಟಿ.ಪಿ.ಜಿ. ನಂಬಿಯಾರ್ ಜಿ ಅವರು ಪ್ರವರ್ತಕ ನಾವೀನ್ಯಕಾರರು ಮತ್ತು ಅಗ್ರಗಣ್ಯ ಕೈಗಾರಿಕೋದ್ಯಮಿಯಾಗಿದ್ದರು. ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸುವ ಒಬ್ಬ ಪ್ರಬಲ ಕಾಯಕಯೋಗಿಯಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು.”

 

 *****