Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಮಾನಸಿ ನಯನಾ ಜೋಶಿ, ತುಳಸಿಮತಿ ಮುರುಗೇಶನ್ ಅವರನ್ನು ಅಭಿನಂದಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳಾ ಡಬಲ್ಸ್ ʻಎಸ್‌ಎಲ್‌3-ಎಸ್‌ಯು5ʼ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮಾನಸಿ ನಯನಾ ಜೋಶಿ ಮತ್ತು ತುಳಸಿಮತಿ ಮುರುಗೇಶನ್ ಅವರನ್ನು ಅಭಿನಂದಿಸಿದ್ದಾರೆ.

ತಂಡದ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಯವರು ಈ ಕುರಿತು ʻಎಕ್ಸ್‌ʼ ವೇದಿಕೆಯಲ್ಲಿ ಹೀಗೆ ಹೇಳಿದ್ದಾರೆ: 

“ಮಹಿಳಾ ಡಬಲ್ಸ್ ʻಎಸ್ಎಲ್‌3-ಎಸ್‌ಯು 5ʼ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಬೆಳ್ಳಿ ಗೆದ್ದ ಮಾನಸಿ ನಯನಾ ಜೋಶಿ @joshimanasi11 ಮತ್ತು ತುಳಸಿಮತಿ ಮುರುಗೇಶನ್‌ @Thulasimathi11 ಅವರಿಗೆ ಅಭಿನಂದನೆಗಳು. ಅವರ ಅದ್ಭುತ ತಂಡದ ಸ್ಫೂರ್ತಿ ಮತ್ತು ಸಮರ್ಪಣೆ!”
 

****