ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಅಂಬಾಜಿನಲ್ಲಿ ನಡೆದ ದುರಂತದಲ್ಲಿ ಜೀವಹಾನಿ ಆಗಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರು ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಟ್ವೀಟ್ ನಲ್ಲಿ
“ಗುಜರಾತ್ ನ ಅಂಬಾಜಿಯಲ್ಲಿ ನಡೆದ ರಸ್ತೆ ಅಪಘಡದಲ್ಲಿ ಜೀವಹಾನಿ ಆಗಿರುವುದರಿಂದ ತೀವ್ರ ನೋವಾಗಿದೆ. ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಬಯಸುತ್ತೇನೆ. ತೊಂದರೆಗೀಡಾದವರಿಗೆ ಸಾಧ್ಯವಾದ ಎಲ್ಲ ನೆರವನ್ನು ಒದಗಿಸಲಾಗುವುದು: ಪ್ರಧಾನಿ ನರೇಂದ್ರ ಮೋದಿ’’
******
I am deeply pained by the loss of lives due to a mishap in Ambaji, Gujarat. I wish the injured a quick recovery. All possible assistance is being provided to those affected: PM @narendramodi
— PMO India (@PMOIndia) September 2, 2022