Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ಲೋಥಾಲ್ ನಲ್ಲಿರುವ ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣದ ಪ್ರಗತಿ ಪರಾಮರ್ಶೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಥಾಲ್ ನಲ್ಲಿರುವ ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣದ ಪ್ರಗತಿ ಪರಾಮರ್ಶೆ ನಡೆಸಿದರು. “ಈ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡ ನಂತರ ಇದು ವಿಶ್ವದ ಅತಿದೊಡ್ಡ ಕಡಲ ವಸ್ತುಸಂಗ್ರಹಾಲಯವಾಗಲಿದೆ. ಇದು ಪ್ರವಾಸೋದ್ಯಮ, ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಕೇಂದ್ರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಭಾರತದ ಪ್ರಾಚೀನ ಸಾಗರ ಸಾಂಪ್ರದಾಯಿಕತೆಗಳನ್ನೂ ಪ್ರದರ್ಶಿಸಲಿದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

 

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ :

 

“ಲೋಥಾಲ್ ನಲ್ಲಿರುವ ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣದ ಪ್ರಗತಿ ಪರಾಮರ್ಶೆ ನಡೆಸಿದೆ. ಈ ಸಂಕೀರ್ಣ ಪೂರ್ಣಗೊಂಡ ಬಳಿಕ, ಇದು ವಿಶ್ವದ ಅತಿದೊಡ್ಡ ಕಡಲ ವಸ್ತುಸಂಗ್ರಹಾಲಯವಾಗಲಿದೆ. ಇದು ಪ್ರವಾಸೋದ್ಯಮ, ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ತಾಣವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಭಾರತದ ಪ್ರಾಚೀನ ಸಾಗರ ಸಂಪ್ರದಾಯಗಳನ್ನು ಪ್ರದರ್ಶಿಸಲಿದೆ.”

 

****