ಪಿಎಂಇಂಡಿಯಾ
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜಿ, ವೇದಿಕೆಯಲ್ಲಿರುವ ಇತರೆ ಎಲ್ಲ ಗಣ್ಯರೆ, ದೇಶಾದ್ಯಂತ ಬಂದಿರುವ ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ಕೆಡೆಟ್ ಗಳೆ, ಟ್ಯಾಬ್ಲೊ ಕಲಾವಿದರೆ, ರಾಷ್ಟ್ರೀಯ ರಂಗಶಾಲೆಯ ಸಹೋದ್ಯೋಗಿಗಳೆ ಮತ್ತು ನನ್ನ ಪ್ರೀತಿಯ ಯುವ ಸ್ನೇಹಿತರೆ. ನಿಮ್ಮೆಲ್ಲರ ಕಠಿಣ ಪರಿಶ್ರಮ ಇಲ್ಲಿ ಗೋಚರಿಸುತ್ತಿದೆ. ನೀವು ಉತ್ತಮ ಸಮನ್ವಯದಿಂದ ನಿಮ್ಮ ಪ್ರದರ್ಶನವನ್ನು ತೋರಿದ್ದೀರಿ.
ಸ್ನೇಹಿತರೆ,
ಇಂದು ನಮಗೆ ತುಂಬಾ ದುಃಖ ತಂದ ದಿನ. ಇಂದು ಬೆಳಗ್ಗೆಯೇ ಮಹಾರಾಷ್ಟ್ರದಲ್ಲಿ ಒಂದು ದುರಂತ ವಿಮಾನ ಅಪಘಾತ ಸಂಭವಿಸಿದೆ. ಈ ಅಪಘಾತವು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜಿ ಮತ್ತು ಕೆಲವು ಸಹೋದ್ಯೋಗಿಗಳನ್ನು ನಮ್ಮಿಂದ ಕಸಿದುಕೊಂಡಿದೆ. ಅಜಿತ್ ದಾದಾ ಅವರು ಮಹಾರಾಷ್ಟ್ರ ಮತ್ತು ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಹಳ್ಳಿಗಳಲ್ಲಿ ಜನರ ಜೀವನ ಉತ್ತಮಗೊಳಿಸಲು, ಅವರು ಯಾವಾಗಲೂ ಮುಂದೆ ಬಂದು ಕೆಲಸ ಮಾಡಿದರು. ಅಜಿತ್ ಪವಾರ್ ಜಿ ಅವರ ಕುಟುಂಬಕ್ಕೆ ನಾನು ನನ್ನ ಸಂತಾಪ ಸೂಚಿಸುತ್ತೇನೆ. ಈ ನೋವಿನ ಸಮಯದಲ್ಲಿ, ನಾವೆಲ್ಲರೂ ಈ ಅಪಘಾತದಲ್ಲಿ ಕಳೆದುಕೊಂಡ ಸಹೋದ್ಯೋಗಿಗಳ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತೇವೆ.
ಸ್ನೇಹಿತರೆ,
ದುಃಖ ಮತ್ತು ಸಂತಾಪದ ಈ ಕ್ಷಣಗಳ ನಡುವೆ, ಇಲ್ಲಿ ಹಾಜರಿರುವ ಕೆಡೆಟ್ ಗಳು, ವಿವಿಧ ಸ್ನೇಹಪರ ರಾಷ್ಟ್ರಗಳಿಂದ ಬಂದಿರುವ ಕೆಡೆಟ್ ಗಳು ಮತ್ತು ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ. ಈ ಬಾರಿಯೂ ಸಹ, ಮಹಿಳಾ ಕೆಡೆಟ್ ಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ಎನ್ ಸಿ ಸಿ ಒಂದು ಸಂಘಟನೆ, ಅಂತಹ ಚಳುವಳಿ ಮೂಲಕ ಭಾರತದ ಯುವ ಶಕ್ತಿಯನ್ನು ಆತ್ಮವಿಶ್ವಾಸಗೊಳಿಸುತ್ತಿದೆ, ಅವರನ್ನು ಶಿಸ್ತುಬದ್ಧಗೊಳಿಸುತ್ತಿದೆ, ಅವರನ್ನು ಸೂಕ್ಷ್ಮಗೊಳಿಸುತ್ತಿದೆ ಮತ್ತು ಅವರನ್ನು ರಾಷ್ಟ್ರಕ್ಕೆ ಸಮರ್ಪಿತ ನಾಗರಿಕರನ್ನಾಗಿ ಮಾಡುತ್ತಿದೆ. ನೀವೆಲ್ಲರೂ ಪ್ರತಿ ವರ್ಷ ನಿಮ್ಮ ಪಾತ್ರವನ್ನು ಹೆಚ್ಚು ಸಬಲೀಕರಣಗೊಳಿಸುತ್ತಿದ್ದೀರಿ. ಕಳೆದ ವರ್ಷಗಳಲ್ಲಿ, ಎನ್ ಸಿಸಿ ಕೆಡೆಟ್ ಗಳ ಸಂಖ್ಯೆ 14 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಯಾಗಿದೆ. ವಿಶೇಷವಾಗಿ ನಮ್ಮ ಗಡಿ ಪ್ರದೇಶಗಳಲ್ಲಿ, ಕರಾವಳಿ ಪ್ರದೇಶಗಳಲ್ಲಿ, ಎನ್ ಸಿಸಿ ಕೆಡೆಟ್ ಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ನನ್ನ ಯುವ ಸ್ನೇಹಿತರೆ,
ಎನ್ ಸಿಸಿ ಯುವಕರಿಗೆ ಒಂದು ವೇದಿಕೆಯಾಗಿದೆ, ಈ ವೇದಿಕೆಯಲ್ಲಿ ಒಬ್ಬರು ತಮ್ಮ ಪರಂಪರೆಯನ್ನು ಹೆಮ್ಮೆಯಿಂದ ಬದುಕುತ್ತಾರೆ. ಉದಾಹರಣೆಗೆ, ಈ ವರ್ಷ ಎನ್ ಸಿಸಿ ವಂದೇ ಮಾತರಂನ 150 ವರ್ಷಗಳನ್ನು ಪೂರ್ಣ ಉತ್ಸಾಹದಿಂದ ಆಚರಿಸಿದೆ. ನೀವು ದೇಶದ ಮೂಲೆ ಮೂಲೆಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿದ್ದೀರಿ. ಪರಮ ವೀರ ಸಾಗರ್ ಯಾತ್ರೆಯೂ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಕೆಲವು ವರ್ಷಗಳ ಹಿಂದೆ ಸರ್ಕಾರವು ಅಂಡಮಾನ್ ಮತ್ತು ನಿಕೋಬಾರ್ ನ 21 ದ್ವೀಪಗಳಿಗೆ ನಮ್ಮ ಪರಮ ವೀರ ಚಕ್ರ ವಿಜೇತರ ಹೆಸರನ್ನು ಇಟ್ಟಿತು. ನಮ್ಮ ನೌಕಾಯಾನ ದಂಡಯಾತ್ರೆಯ ಹಿಂದಿನ ರಾಷ್ಟ್ರೀಯ ವೀರರಿಗೆ ಗೌರವ ನೀಡುವ ಭಾವನೆಯನ್ನು ನೀವು ಮುಂದುವರಿಸಿದ್ದೀರಿ. ಅದೇ ರೀತಿ, ಲಕ್ಷದ್ವೀಪದಲ್ಲಿ ನಡೆದ ದ್ವೀಪ ಉತ್ಸವದ ಮೂಲಕ, ನೀವು ಸಾಗರ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಒಟ್ಟಾಗಿ ಆಚರಿಸಿದ್ದೀರಿ.
ಸ್ನೇಹಿತರೆ,
ಎನ್ ಸಿ ಸಿ ಸ್ಮಾರಕಗಳಿಂದ ಇತಿಹಾಸ ಹೊರತೆಗೆದು ಜನರ ಹೃದಯದಲ್ಲಿ ಅದನ್ನು ಜೀವಂತಗೊಳಿಸಿದ್ದೀರಿ. ಬಾಜಿರಾವ್ ಪೇಶ್ವಾ ಜಿ ಅವರ ಧೈರ್ಯ, ಮಹಾನ್ ಯೋಧ ಲಚಿತ್ ಬೋರ್ಫುಕನ್ ಜಿ ಅವರ ಕೌಶಲ್ಯ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ ನಾಯಕತ್ವದ ಬಗ್ಗೆ ನಿಮ್ಮ ಸೈಕಲ್ ರಾಲಿಗಳ ಮೂಲಕ ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನೀವು ಕೆಲಸ ಮಾಡಿದ್ದೀರಿ. ಈ ಎಲ್ಲಾ ಧೈರ್ಯಶಾಲಿ ಕಾರ್ಯಗಳಿಗಾಗಿ ನಿಮ್ಮೆಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂದು ಗೌರವಗಳನ್ನು ಪಡೆದ ಸಹೋದ್ಯೋಗಿಗಳಿಗೂ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ನಾನು ಕೆಂಪುಕೋಟೆಯಿಂದ ಹೇಳಿದ್ದೆ – ಈ ಸಮಯ, ಸರಿಯಾದ ಸಮಯ. ನಮ್ಮ ದೇಶದ ಯುವಕರಿಗೆ, ಇಂದಿನ ಸಮಯವು ಗರಿಷ್ಠ ಅವಕಾಶಗಳ ಸಮಯವಾಗಿದೆ. ನಮ್ಮ ಯುವಕರು ಈ ಅವಧಿಯಲ್ಲಿ ಗರಿಷ್ಠ ಪ್ರಯೋಜನಗಳನ್ನು ಪಡೆಯುವುದು ಸರ್ಕಾರದ ಪ್ರಯತ್ನವಾಗಿದೆ. ನೀವು ನಿನ್ನೆಯಷ್ಟೇ ಇದರ ಉದಾಹರಣೆ ನೋಡಿದ್ದೀರಿ. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಬರಲಾಗಿದೆ. ಇದಕ್ಕೂ ಮೊದಲು ಭಾರತವು ಓಮನ್, ನ್ಯೂಜಿಲೆಂಡ್, ಬ್ರಿಟನ್, ಯುಎಇ, ಆಸ್ಟ್ರೇಲಿಯಾ ಮತ್ತು ಮಾರಿಷಸ್ ನಂತಹ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಎಲ್ಲಾ ಒಪ್ಪಂದಗಳು ನಮ್ಮ ಲಕ್ಷ ಕೋಟಿ ಯುವಕರಿಗೆ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ಸೃಷ್ಟಿಸಲಿವೆ.
ಸ್ನೇಹಿತರೆ,
ಇಂದು ಇಡೀ ಜಗತ್ತು ಯುವ ಭಾರತದ ಯುವಕರನ್ನು ಹೆಚ್ಚಿನ ನಂಬಿಕೆಯಿಂದ ನೋಡುತ್ತಿದೆ. ಪ್ರಪಂಚದ ಈ ನಂಬಿಕೆಗೆ ಕಾರಣ – ಕೌಶಲ್ಯ ಮತ್ತು ಮೌಲ್ಯಗಳು! ಭಾರತದ ಯುವಕರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿದ್ದಾರೆ, ನಮ್ಮ ಯುವಕರು ಪ್ರತಿಯೊಂದು ರೀತಿಯ ವೈವಿಧ್ಯತೆಗೆ ಗೌರವ ನೀಡುವ ಮೌಲ್ಯಗಳನ್ನು ಹೊಂದಿದ್ದಾರೆ, ಭಾರತದ ಯುವಕರು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುವ ಮೌಲ್ಯಗಳನ್ನು ಹೊಂದಿದ್ದಾರೆ. ಆದ್ದರಿಂದ, ಭಾರತದ ಯುವಕರು ಎಲ್ಲಿಗೆ ಹೋದರೂ, ಅವರು ಆ ದೇಶದ ಜನರೊಂದಿಗೆ ಸುಲಭವಾಗಿ ಬೆರೆಯುತ್ತಾರೆ, ಅವರ ಹೃದಯಗಳನ್ನು ಗೆಲ್ಲುತ್ತಾರೆ. ನಾವು ನಮ್ಮ ಸಾಮರ್ಥ್ಯದಿಂದ ಆ ದೇಶದ ಅಭಿವೃದ್ಧಿಗೆ ಸಹಾಯ ಮಾಡುತ್ತೇವೆ. ಇವು ನಮ್ಮ ಮೌಲ್ಯಗಳು, ಇದು ನಮ್ಮ ಸ್ವಭಾವ. ಮಾತೃಭೂಮಿಯ ಬಗ್ಗೆ ಅಪಾರ ಗೌರವ ಮತ್ತು ಕೆಲಸದ ಸ್ಥಳ (ಕರ್ಮಭೂಮಿ) ಬಗ್ಗೆ ಅನುಪಮ ಸಮರ್ಪಣೆ, ಇದು ನಮ್ಮ ಪರಂಪರೆಯಾಗಿದೆ.
ಸ್ನೇಹಿತರೆ,
ನಾನು ವಿಶ್ವಾದ್ಯಂತದ ನಾಯಕರೊಂದಿಗೆ ಮಾತನಾಡುವಾಗ ಮತ್ತು ಆ ಸಂಭಾಷಣೆಯ ಆಧಾರದ ಮೇಲೆ ನಾನು ಪೂರ್ಣ ಹಕ್ಕುಗಳೊಂದಿಗೆ ಹೇಳಬಲ್ಲೆ, ಭಾರತದ ಯುವಕರು ಅತ್ಯುತ್ತಮ ವೃತ್ತಿಪರರಷ್ಟೇ ಶ್ರಮಶೀಲರು ಆಗಿದ್ದಾರೆ. ಆದ್ದರಿಂದ ಭಾರತದ ಯುವಕರಿಗೆ ಹೆಚ್ಚಿನ ಬೇಡಿಕೆಯಿದೆ. ಉದಾಹರಣೆಗೆ, ಗಲ್ಫ್ ದೇಶಗಳಲ್ಲಿ ನೋಡಿ, ಲಕ್ಷಾಂತರ ಜನರು ಅಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ವೈದ್ಯರು ಮತ್ತು ಎಂಜಿನಿಯರ್ ಗಳು ಅನೇಕ ದೇಶಗಳಲ್ಲಿ ಅದ್ಭುತ ಆರೋಗ್ಯ ವ್ಯವಸ್ಥೆಗಳು ಮತ್ತು ಅದ್ಭುತ ಮೂಲಸೌಕರ್ಯಗಳನ್ನು ಮಾಡುತ್ತಿದ್ದಾರೆ. ನಾವು ಹಿಂದೆ ಇಲ್ಲಿ ಹೊಂದಿದ್ದ ಶಿಕ್ಷಕರು ಅನೇಕ ದೇಶಗಳ ಸಮಾಜಗಳಿಗೆ ಹೊಸ ಮೌಲ್ಯಗಳನ್ನು ಸೇರಿಸಿದ್ದಾರೆ.
ಸ್ನೇಹಿತರೆ,
ಜಗತ್ತಿನಲ್ಲಿ ಅವರ ಈ ಕೊಡುಗೆಯ ಜತೆಗೆ, ಇಡೀ ಜಗತ್ತು ನಮ್ಮ ದೇಶದ ಯುವಕರ ಸಾಧನೆಗಳನ್ನು ಹೊಗಳುತ್ತಿದೆ. ಈ ಯುವಕರ ಕಾರಣದಿಂದಾಗಿ, ಭಾರತವು ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನದ ಬೆನ್ನೆಲುಬಾಗಿದೆ. ಈಗ, ಈ ಯುವ ಜನರ ಶಕ್ತಿಯೊಂದಿಗೆ, ಸ್ಟಾರ್ಟಪ್ ಗಳಲ್ಲಿ, ಬಾಹ್ಯಾಕಾಶದಲ್ಲಿ, ಡಿಜಿಟಲ್ ತಂತ್ರಜ್ಞಾನದಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸ ಕ್ರಾಂತಿ ಪ್ರಾರಂಭವಾಗಿದೆ.
ಸ್ನೇಹಿತರೆ,
ಈಗ ಐರೋಪ್ಯ ಒಕ್ಕೂಟದೊಂದಿಗೆ ಒಮ್ಮತದಿಂದ ತಲುಪಿದ ಒಪ್ಪಂದವನ್ನು ಜಗತ್ತು “ಎಲ್ಲಾ ಒಪ್ಪಂದಗಳ ತಾಯಿ” ಎಂದು ಹೊಗಳುತ್ತಿದೆ. ಇದನ್ನು ಜಗತ್ತಿಗೆ ಒಂದು ಮಹತ್ವದ ಒಪ್ಪಂದ ಎಂದು ಕರೆಯಲಾಗುತ್ತಿದೆ. ಈ ಎಫ್ ಟಿಎ ನಿಮಗಾಗಿ “ಆಶಯದ ಸ್ವಾತಂತ್ರ್ಯ”ವಾಗಿದೆ. ಈ ಒಪ್ಪಂದವು ವಿಶ್ವದ ಜಿಡಿಪಿಯ 4ನೇ ಒಂದು ಭಾಗ ಮತ್ತು ಜಾಗತಿಕ ವ್ಯಾಪಾರದ 3ನೇ ಒಂದು ಭಾಗವನ್ನು ಪ್ರತಿನಿಧಿಸುತ್ತಿದೆ.
ಸ್ನೇಹಿತರೆ,
ಐರೋಪ್ಯ ಒಕ್ಕೂಟ, ಅಂದರೆ ಭಾರತದ ಒಪ್ಪಂದವು ವಿಶ್ವದ 27 ದೇಶಗಳೊಂದಿಗೆ ನಡೆದಿದೆ. ಇದರ ಲಾಭ ಭಾರತದ ಸ್ಟಾರ್ಟಪ್ ಗಳಿಗೆ ಹೋಗುತ್ತದೆ. ಭಾರತೀಯ ಸ್ಟಾರ್ಟಪ್ ಗಳಿಗೆ ಹಣಕಾಸು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ಪ್ರವೇಶ ಸುಲಭವಾಗುತ್ತದೆ. ಈ ಒಪ್ಪಂದದಿಂದ, ನಮ್ಮ ಸೃಜನಶೀಲ ಆರ್ಥಿಕತೆ – ಚಲನಚಿತ್ರ, ಗೇಮಿಂಗ್, ಫ್ಯಾಷನ್, ಡಿಜಿಟಲ್ ವಿಷಯ, ಸಂಗೀತ ಮತ್ತು ವಿನ್ಯಾಸ – ಸಹ ಹೆಚ್ಚಿನ ಪ್ರಯೋಜನ ಪಡೆಯುತ್ತದೆ. ಇದರೊಂದಿಗೆ, ಭಾರತದ ಯುವಕರಿಗೆ ಸಂಶೋಧನೆ ಮತ್ತು ಶಿಕ್ಷಣ, ಐಟಿ ಮತ್ತು ಇತರ ವೃತ್ತಿಪರ ಸೇವೆಗಳಲ್ಲಿ ಲೆಕ್ಕವಿಲ್ಲದಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ.
ಸ್ನೇಹಿತರೆ,
ಈ ಒಪ್ಪಂದವನ್ನು “ಎಲ್ಲಾ ಡೀಲ್ ಗಳ ತಾಯಿ” ಎಂದೂ ಕರೆಯಲಾಗುತ್ತಿದೆ, ಏಕೆಂದರೆ ಇದು ಬಹಳ ಸಮಗ್ರವಾಗಿದೆ, ಬಹಳ ಆಳವಾಗಿದೆ, ಹೊಸ ಎತ್ತರಗಳನ್ನು ತಲುಪುತ್ತದೆ ಮತ್ತು ಪ್ರಯೋಜನಗಳ ಪಟ್ಟಿ ಬಹಳ ಉದ್ದವಾಗಿದೆ. ಇದು ಸ್ವಾವಲಂಬಿ ಭಾರತ(ಆತ್ಮನಿರ್ಭರ ಭಾರತ) ಮಿಷನ್ ಗೆ ಹೆಚ್ಚಿನ ವೇಗ ನೀಡುತ್ತದೆ. ಇದು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ನಿರ್ಣಯಕ್ಕೆ ಅಪಾರ ಬಲ ನೀಡುತ್ತದೆ. ಏಕೆಂದರೆ ಈ ಒಪ್ಪಂದದ ಅಡಿ, ಭಾರತದ ರಫ್ತಿನ 99 ಪ್ರತಿಶತಕ್ಕಿಂತ ಹೆಚ್ಚಿನ, ಅಂದರೆ ಶೇಕಡ 99ರಷ್ಟು ಮೇಲಿನ ಸುಂಕವು ಶೂನ್ಯವಾಗಿರುತ್ತದೆ ಅಥವಾ ತುಂಬಾ ಕಡಿಮೆಯಾಗುತ್ತದೆ. ಇದರಿಂದ, ಪ್ರತಿಯೊಂದು ಭಾರತೀಯ ಉದ್ಯಮ – ಜವಳಿ, ಚರ್ಮ, ರತ್ನಗಳು ಮತ್ತು ಆಭರಣಗಳು, ಪಾದರಕ್ಷೆಗಳು ಮತ್ತು ಎಂಜಿನಿಯರಿಂಗ್ ಸರಕುಗಳು – ಮತ್ತು ಎಂಎಸ್ಎಂಇಗಳು ಹೆಚ್ಚಿನ ಲಾಭ ಪಡೆಯುತ್ತವೆ. ನಮ್ಮ ನೇಕಾರರು, ಕರಕುಶಲ ವಸ್ತುಗಳು ಮತ್ತು ಸಣ್ಣ ಉದ್ಯಮಿಗಳು 27 ಐರೋಪ್ಯ ಒಕ್ಕೂಟ ದೇಶಗಳ ಬೃಹತ್ ಮಾರುಕಟ್ಟೆಗೆ ನೇರ ಪ್ರವೇಶ ಪಡೆಯುತ್ತಾರೆ.
ಸ್ನೇಹಿತರೆ,
ಈ ಒಪ್ಪಂದಕ್ಕೆ ಮತ್ತೊಂದು ಬಲವಾದ ವಿಚಾರವಿದೆ. ಭಾರತಕ್ಕೆ ಹೆಚ್ಚಿನ ಹೂಡಿಕೆ ಬರುತ್ತದೆ. ಹೊಸ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಔಷಧ ಮತ್ತು ಇತರ ಉತ್ಪಾದನಾ ಘಟಕಗಳು ದೇಶದಲ್ಲಿ ಪ್ರಾರಂಭವಾಗುತ್ತವೆ. ಇದರಿಂದ, ಕೃಷಿ, ಆಹಾರ ಸಂಸ್ಕರಣೆ ಮತ್ತು ಮೀನುಗಾರಿಕೆಯಲ್ಲಿ ಹೊಸ ಹೂಡಿಕೆಗೆ ಖಚಿತವಾದ ಮಾರುಕಟ್ಟೆ ಸಿದ್ಧವಾಗುತ್ತದೆ. ಇದು ರೈತರು, ಮೀನುಗಾರರು ಮತ್ತು ಗ್ರಾಮೀಣ ಯುವಕರಿಗೆ ಬಹಳ ದೊಡ್ಡ ಅವಕಾಶವಾಗಿದೆ.
ಯುವ ಸ್ನೇಹಿತರೆ,
ಈ ಎಫ್ ಟಿ ಎ ಭಾರತದ ಯುವಕರನ್ನು ಯುರೋಪಿನ ಉದ್ಯೋಗ ಮಾರುಕಟ್ಟೆಗೆ ನೇರವಾಗಿ ಸಂಪರ್ಕಿಸುತ್ತದೆ. ವಿಶೇಷವಾಗಿ ಎಂಜಿನಿಯರಿಂಗ್, ಹಸಿರು ತಂತ್ರಜ್ಞಾನ, ವಿನ್ಯಾಸ, ಸರಕು ಸಾಗಣೆ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಅನೇಕ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇದರರ್ಥ ಭಾರತದ ಯುವಕರಿಗೆ, ನಿಮಗಾಗಿ, 27 ದೇಶಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ.
ಸ್ನೇಹಿತರೆ,
ಸರ್ಕಾರವು ಸಮಗ್ರ ಸುಧಾರಣೆಗಳ ಮೂಲಕ ಈ ಎಲ್ಲಾ ಜಾಗತಿಕ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸುತ್ತಿದೆ. ದೇಶದಲ್ಲಿ ಇಂದು ಸವಾರಿ ಮಾಡುತ್ತಿರುವ ಸುಧಾರಣೆಯು ಯುವ ಶಕ್ತಿಯ ಮುಂದೆ ಇರುವ ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕುತ್ತಿದೆ ಎಂಬುದನ್ನು ವ್ಯಕ್ತಪಡಿಸುತ್ತದೆ. ದೇಶದ ಮುಂದೆ ಬೆಳೆಯುತ್ತಿರುವ ಈ ಅವಕಾಶಗಳು, ಈ ಮೌಲ್ಯಗಳು ಮತ್ತು ಎನ್ ಸಿಸಿಯೊಂದಿಗೆ ಸಂಬಂಧ ಹೊಂದಿರುವ ನಿಮ್ಮೆಲ್ಲ ಯುವಕರಲ್ಲಿ ಈ ಶಿಸ್ತು – ನಿಮಗೆ, ಇದು ಕೇಕ್ ಮೇಲಿನ ಐಸಿಂಗ್ ಇದ್ದಂತೆ (ಸೋನೆ ಪೆ ಸುಹಗ).
ಸ್ನೇಹಿತರೆ,
ನೀವು ಇಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ಅದ್ಭುತವಾದ ಟ್ಯಾಬ್ಲೊ ಪ್ರಸ್ತುತಪಡಿಸಿದ್ದೀರಿ. ಆಪರೇಷನ್ ಸಿಂದೂರ್ ಸಮಯದಲ್ಲಿ ನಿಮ್ಮ ಪ್ರಯತ್ನಗಳನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆ ಪ್ರಮುಖ ಸಮಯದಲ್ಲಿ, ನಮ್ಮ ಎನ್ ಸಿಸಿ ಕೆಡೆಟ್ ಗಳು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಿದರು. ನಮ್ಮ ಸೈನ್ಯದ ಸಿದ್ಧತೆಗಳಲ್ಲಿ ಯಾರೋ ಬೆಂಬಲ ನೀಡಿದರು, ಯಾರಾದರೂ ರಕ್ತದಾನ ಶಿಬಿರಗಳನ್ನು ಸ್ಥಾಪಿಸಿದರು, ಯಾರಾದರೂ ಪ್ರಥಮ ಚಿಕಿತ್ಸಾ ಶಿಬಿರಗಳ ಮೂಲಕ ಸೇವೆ ಸಲ್ಲಿಸಿದರು. ಮೆರವಣಿಗೆ ಮೈದಾನದ ತರಬೇತಿಯ ಜೊತೆಗೆ, “ರಾಷ್ಟ್ರ ಮೊದಲು” ಎಂಬ ಚಿಂತನಾ ಪ್ರಕ್ರಿಯೆಯ ತರಬೇತಿಯೂ ಎನ್ ಸಿಸಿಯಲ್ಲಿ ನಡೆಯುತ್ತದೆ ಎಂಬುದನ್ನು ನೀವು ತೋರಿಸಿದ್ದೀರಿ. ಇದು ಎನ್ ಸಿಸಿಯಿಂದ ಪಡೆದ ದೇಶಭಕ್ತಿ, ಕಷ್ಟದ ಸಮಯದಲ್ಲಿ ಪೂರ್ಣ ಶಕ್ತಿಯೊಂದಿಗೆ ದೇಶಕ್ಕಾಗಿ ಕೆಲಸ ಮಾಡಲು ಸ್ಫೂರ್ತಿ ನೀಡುವ ನಾಯಕತ್ವ. ಎನ್ ಸಿಸಿ ನಿಮಗೆ ಕಲಿಸುವುದು ಇದನ್ನೇ, ನಾವು ಅಲ್ಲಿಂದ ಕಲಿಯುತ್ತೇವೆ. ನಾನು ಎನ್ ಸಿಸಿಯಲ್ಲಿದ್ದಾಗ, “ರಾಷ್ಟ್ರ ಮೊದಲು” ಎಂಬ ನನ್ನ ಭಾವನೆ ಹೀಗೆ ಬಲಗೊಂಡಿತು, ಮತ್ತು ಇಂದು ನೀವು ಎನ್ ಸಿಸಿ ಯಲ್ಲಿ ಅದೇ ರೀತಿ ಕಲಿಯುತ್ತಿರುವುದನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ.
ಸ್ನೇಹಿತರೆ,
ಆಪರೇಷನ್ ಸಿಂದೂರ್ ಮತ್ತೊಮ್ಮೆ ಭಾರತದ ಸಾಮರ್ಥ್ಯ ಮತ್ತು ನಮ್ಮ ಸೈನ್ಯದ ಶೌರ್ಯವನ್ನು ಸ್ಥಾಪಿಸಿದೆ. ಆಪರೇಷನ್ ಸಿಂದೂರ್ ನಮ್ಮ ಸ್ಥಳೀಯ ಶಸ್ತ್ರಾಸ್ತ್ರಗಳು ಎಷ್ಟು ಮುಂದುವರಿದ ಮತ್ತು ಹೈಟೆಕ್ ಆಗಿವೆ ಎಂಬುದನ್ನು ಸಹ ತೋರಿಸಿದೆ.
ಸ್ನೇಹಿತರೆ,
ಇಂದಿನ ಆಧುನಿಕ ಯುದ್ಧದಲ್ಲಿ, ಯುವ ಕೌಶಲ್ಯಗಳ ಪಾತ್ರ ಬಹಳ ಹೆಚ್ಚಾಗಿದೆ. ಈಗ ಯುದ್ಧವು ಗಡಿಯಲ್ಲಿ ಟ್ಯಾಂಕ್ ಗಳು, ಬಂದೂಕುಗಳು ಮತ್ತು ಶೆಲ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿನ ಯುದ್ಧವು ಅನೇಕ ರಂಗಗಳಲ್ಲಿ ಹೋರಾಟ ನಡೆಸುತ್ತದೆ. ಇಂದಿನ ಯುದ್ಧವು ಕೋಡ್ ನಲ್ಲಿಯೂ ಮತ್ತು ಮೋಡದಲ್ಲಿಯೂ ನಡೆಯುತ್ತದೆ. ತಂತ್ರಜ್ಞಾನದಲ್ಲಿ ಹಿಂದುಳಿದಿರುವ ದೇಶಗಳು ಆರ್ಥಿಕತೆಯಲ್ಲಿ ಮಾತ್ರವಲ್ಲದೆ ಭದ್ರತೆಯಲ್ಲಿಯೂ ದುರ್ಬಲವಾಗಿವೆ.
ಆದ್ದರಿಂದ ಸ್ನೇಹಿತರೆ,
ಯುವಕರಾಗಿ ನಾವು ನಮ್ಮ ದೇಶಕ್ಕಾಗಿ ಎಂತಹ ಹೊಸ ಆವಿಷ್ಕಾರಗಳನ್ನು ಮಾಡುತ್ತೇವೆ – ಈ ಉತ್ಸಾಹವು ದೇಶಭಕ್ತಿಯನ್ನು ಬಲಪಡಿಸುತ್ತದೆ, ದೇಶದ ಭದ್ರತೆಗೆ ಬಹುದೊಡ್ಡ ಕೊಡುಗೆ ನೀಡುತ್ತದೆ. ನಿಮಗೆಲ್ಲರಿಗೂ ತಿಳಿದಿದೆ, ಇಂದು ತಂತ್ರಜ್ಞಾನದ ಮೂಲಕವೂ ಯುವಕರಿಗೆ ಸೈನ್ಯದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಇಂದು ನಮ್ಮ ಯುವಕರ ರಕ್ಷಣಾ ಸ್ಟಾರ್ಟಪ್ ಗಳು ಅದ್ಭುತಗಳನ್ನು ಮಾಡುತ್ತಿವೆ. ಇಂದು ಭಾರತದಲ್ಲಿ ತಯಾರಿಸಿದ ಡ್ರೋನ್ ಗಳ ಕುರಿತು ಕೆಲಸ ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ರಕ್ಷಣಾ ನಾವೀನ್ಯತೆಗಳು ಈಗ ನಮ್ಮ ಪಡೆಗಳನ್ನು ಆಧುನಿಕಗೊಳಿಸುತ್ತಿವೆ. ಅಂದರೆ, ಯುವ ಸ್ನೇಹಿತರೆ, ನಿಮ್ಮ ಸಾಧ್ಯತೆಗಳು ಬಹಳವಾಗಿ ವಿಸ್ತರಿಸುತ್ತಿವೆ. ಇಂದು ನಾನು ಇಲ್ಲಿ ಕುಳಿತಿರುವವರು ಮಾತ್ರವಲ್ಲ, ದೇಶದ ಕೋಟ್ಯಂತರ ಯುವಕರು ಇದರ ಲಾಭ ಪಡೆದುಕೊಳ್ಳಬೇಕೆಂದು ಬಯಸುತ್ತೇನೆ.
ಸ್ನೇಹಿತರೆ,
ದೇಶವು ಜನವರಿ 25ರಂದು ಕೇವಲ 3 ದಿನಗಳ ಹಿಂದೆ ರಾಷ್ಟ್ರೀಯ ಮತದಾರರ ದಿನ ಆಚರಿಸಿತು. ಈ ದಿನದಂದು, ನಾನು ದೇಶವಾಸಿಗಳಿಗೆ ಒಂದು ಪತ್ರವನ್ನೂ ಬರೆದಿದ್ದೇನೆ. ರಾಷ್ಟ್ರೀಯ ಮತದಾರರ ದಿನವು ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ವಹಿಸಿರುವ ಕರ್ತವ್ಯ ಪ್ರಜ್ಞೆಯ, ಆ ಹಕ್ಕಿನ ಆಚರಣೆಯಾಗಿದೆ. ಇಂದು ಭಾರತವು ವಿಶ್ವದ ಯುವ ಮತದಾರರ ಸಂಖ್ಯೆ ಅತಿ ಹೆಚ್ಚು ಇರುವ ದೇಶಗಳಲ್ಲಿ ಒಂದಾಗಿದೆ. ಈ ಯುವಕರು ಮತದಾರರಾಗಲು ಅರ್ಹರಾದಾಗ, 18 ವರ್ಷ ವಯಸ್ಸನ್ನು ತಲುಪಿದಾಗ, ಅವರು ರಾಷ್ಟ್ರದ ಹಣೆಬರಹವನ್ನು ರೂಪಿಸುವ ಶಕ್ತಿ ಪಡೆಯುತ್ತಾರೆ. ಆದ್ದರಿಂದ, ಈಗ ನಾವು ದೇಶದಲ್ಲಿ ಹೊಸ ಸಂಪ್ರದಾಯ ಪ್ರಾರಂಭಿಸಬೇಕಾಗಿದೆ. ಎನ್ ಸಿಸಿ-ಎನ್‌ಎಸ್‌ಎಸ್ ಮತ್ತು “ಮೇರಾ ಯುವ ಭಾರತ್” ಸಂಘಟನೆಯಾದ “ಮೈಭಾರತ್” ಸಂಘಟನೆಯಲ್ಲಿ, ಜನವರಿ 25ರಂದು ಪ್ರತಿ ಬಾರಿಯೂ ದೊಡ್ಡ ಕಾರ್ಯಕ್ರಮ ಆಯೋಜಿಸಬೇಕೆಂದು ನಾನು ಬಯಸುತ್ತೇನೆ. ಈ ದಿನದಂದು, ಮೊದಲ ಬಾರಿಗೆ ಮತದಾರರನ್ನು ಗೌರವಿಸಲು ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಬೇಕು. ಈ ಪ್ರಯತ್ನವು ನಮ್ಮ ಯುವ ಪೀಳಿಗೆಯಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಮತ್ತಷ್ಟು ಬಲಪಡಿಸುತ್ತದೆ, ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ಸ್ನೇಹಿತರೆ,
ಅಭಿವೃದ್ಧಿ ಹೊಂದಿದ ಭಾರತದ(ವಿಕಸಿತ ಭಾರತ) ಅರ್ಥವು ಆರ್ಥಿಕ ಸಮೃದ್ಧಿಗೆ ಮಾತ್ರ ಸೀಮಿತವಾಗಿಲ್ಲ, ನಾಗರಿಕರಾಗಿ ನಮ್ಮ ನಡವಳಿಕೆ ಹೇಗೆ ಎಂಬುದು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಅಂಶವಾಗಿದೆ. ನಾಗರಿಕರಾಗಿ ನಾವು ನಮ್ಮ ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉದಾಹರಣೆಗೆ ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸುವಲ್ಲಿ ಸರ್ಕಾರವು ಕೊಡುಗೆಯನ್ನು ನೀಡಿರಬಹುದು, ಯಾರಾದರೂ ಅದನ್ನು ಮುಂದಕ್ಕೆ ಕೊಂಡೊಯ್ದಿದ್ದರೆ, ಅದನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ನಮ್ಮ ದೇಶದ ನಾಗರಿಕರು, ಯುವಕರು ಮತ್ತು ಚಿಕ್ಕ ಮಕ್ಕಳು ಮಾಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಮನೆಯ ಒಳಗೆ ಮತ್ತು ಹೊರಗೆ ಸಹ, ಸ್ವಚ್ಛತೆಯು ಒಂದು ಅಭ್ಯಾಸ, ಜೀವನಶೈಲಿ, ಮೌಲ್ಯವಾಗಿದೆ. ನಾಗರಿಕ ಕರ್ತವ್ಯದ ಈ ಪ್ರಜ್ಞೆಯನ್ನು ನಾವು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ನಮ್ಮ ಅಂಗಳದಲ್ಲಿ ನಾವು ನೋಡಲು ಬಯಸುವ ಸೌಂದರ್ಯವನ್ನು, ನಾವು ನಮ್ಮ ನಗರವನ್ನು ಅದೇ ಭಾವನೆಯೊಂದಿಗೆ ಸುಂದರಗೊಳಿಸಬೇಕು, ಅದನ್ನು ಸುಂದರವಾಗಿಡಬೇಕು. ಇಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬ ಯುವ ಸ್ನೇಹಿತರಿಗೂ ನಾನು ಹೇಳುವುದೇನೆಂದರೆ, ವಾರದಲ್ಲಿ 1 ದಿನ 1 ಗಂಟೆ ಸ್ವಚ್ಛತೆಗೆ ಸಂಬಂಧಿಸಿದ ಅಭಿಯಾನ ನಡೆಸಬೇಕು. ಎನ್ ಸಿಸಿC-ಎನ್ಎಸ್ಎಸ್ ಇದನ್ನು ಚೆನ್ನಾಗಿ ಮಾಡಬಹುದು. ಖಂಡಿತವಾಗಿಯೂ ನಿಮ್ಮ ಯಾವುದಾದರೂ ಒಂದು ಸ್ಥಳದಲ್ಲಿ ಏನಾದರೂ ಚಟುವಟಿಕೆಯನ್ನು ಯೋಜಿಸಿ.
ಸ್ನೇಹಿತರೆ,
‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿ ಎನ್ ಸಿ ಸಿ ಸುಮಾರು 8 ಲಕ್ಷ ಸಸಿಗಳನ್ನು ನೆಟ್ಟಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಯಿತು. ನಾವು ನೆಟ್ಟ ಸಸಿಗಳು ಚೆನ್ನಾಗಿ ಬೆಳೆಯಬೇಕು – ಇದನ್ನು ನೋಡುವುದು ನಮ್ಮ ಕರ್ತವ್ಯ.
ಸ್ನೇಹಿತರೆ,
ನಮ್ಮ ಯುವ ಶಕ್ತಿಯ ಒಂದು ದೊಡ್ಡ ಪರೀಕ್ಷೆ ಎಂದರೆ ಮುಂಬರುವ ಸಮಯದಲ್ಲಿ ನಾವು ಎಷ್ಟು ಫಿಟ್ ನೆಸ್ ಹೊಂದಿದ್ದೇವೆ ಎಂಬುದು. ಫಿಟ್ ನೆಸ್ ಕೆಲವು ನಿಮಿಷಗಳ ವ್ಯಾಯಾಮಕ್ಕೆ ಮಾತ್ರ ಸೀಮಿತವಾಗಬಾರದು, ಇದು ನಮ್ಮ ಸ್ವಭಾವಕ್ಕೂ ಬರಬೇಕು. ನಮ್ಮ ಆಹಾರ ಪದ್ಧತಿಯಿಂದ ನಮ್ಮ ದೈನಂದಿನ ದಿನಚರಿಯವರೆಗೆ, ಶಿಸ್ತುಬದ್ಧ ಜೀವನಶೈಲಿಯೂ ಅಗತ್ಯ. ನೀವು ಫಿಟ್ ಇಂಡಿಯಾ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೀರಿ ಎಂಬುದನ್ನು ತಿಳಿದು ನನಗೆ ಸಂತೋಷವಾಯಿತು. ಎನ್ ಸಿ ಸಿ ಕೆಡೆಟ್ ಗಳು ಕ್ರೀಡೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಸ್ನೇಹಿತರೆ,
ಇಂದು ನಿಮ್ಮಲ್ಲಿ ಯುವಕರೆ, ನಾನು ಮತ್ತೆ ಬೊಜ್ಜಿನ ವಿಷಯವನ್ನು ಎತ್ತುತ್ತಿದ್ದೇನೆ. ಮುಂಬರುವ ಸಮಯದಲ್ಲಿ, ಭಾರತದ ಪ್ರತಿ 3ನೇ ವ್ಯಕ್ತಿ ಬೊಜ್ಜಿನಿಂದ ತೊಂದರೆಗೊಳಗಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಬೊಜ್ಜು ಸಮಸ್ಯೆ, ಮಧುಮೇಹ, ರಕ್ತದೊತ್ತಡ ಮತ್ತು ಅಂತಹ ಅನೇಕ ಕಾಯಿಲೆಗಳ ಅಪಾಯಗಳು ದೇಶದಲ್ಲಿ ಉದ್ಭವಿಸುತ್ತಿವೆ. ಇದರ ಹೆಚ್ಚು ಪರಿಣಾಮ ಬೀರುವ ವರ್ಗ ನಮ್ಮ ಯುವಕರು. ಆದ್ದರಿಂದ, ಇಂದಿನಿಂದ ನಾವು ಜಾಗರೂಕರಾಗಿರುವುದು ಅವಶ್ಯಕ. ನಾವು ನಮ್ಮ ಎಣ್ಣೆ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಸ್ವಲ್ಪ ಸಮಯದ ಹಿಂದೆ, ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು ಶೇಕಡ 10ರಷ್ಟು ಕಡಿಮೆ ಮಾಡಲು ನಾನು ಒತ್ತಾಯಿಸಿದ್ದೆ. ಇಂದು ನಾನು ನಿಮ್ಮೆಲ್ಲ ಯುವಕರಿಗೆ ಆ ಉತ್ತೇಜನವನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ.
ಸ್ನೇಹಿತರೆ,
ಎನ್ ಸಿ ಸಿ ನಿಮಗೆ ಕೇವಲ ಡ್ರಿಲ್ (ಕದಮ್‌ತಾಲ್) ಕಲಿಸುವುದಿಲ್ಲ, ಈ ಸಂಸ್ಥೆಯು ನಾಗರಿಕರಾಗಿ ಜವಾಬ್ದಾರಿಯಿಂದ ಬದುಕುವುದನ್ನು ನಿಮಗೆ ಕಲಿಸುತ್ತದೆ. ಇಲ್ಲಿ ನೀವು ಆ ಕೌಶಲ್ಯಗಳನ್ನು, ಆ ಮೌಲ್ಯಗಳನ್ನು ಕಲಿಯುತ್ತೀರಿ, ಅದು ನಿಮಗೆ ಉತ್ತಮ ನಾಗರಿಕರಾಗಲು ಸಹಾಯ ಮಾಡುತ್ತದೆ. ಗಣರಾಜ್ಯೋತ್ಸವದಲ್ಲಿ ನೀವು ಪಡೆಯುವ ಅನುಭವಗಳು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ನವೀಕರಿಸುತ್ತವೆ. ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗಿ ಮತ್ತು ಅಭಿವೃದ್ಧಿ ಹೊಂದಿದ ಭಾರತ (ವಿಕಸಿತ ಭಾರತ) ನಿರ್ಮಾಣಕ್ಕೆ ನಿಮ್ಮ ಕೊಡುಗೆ ನಿರಂತರವಾಗಿ ಬೆಳಗಲಿ. ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು.
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಇಂದು ದೇಶವು ವಂದೇ ಮಾತರಂ 150ನೇ ವರ್ಷಾಚರಣೆಯಲ್ಲಿ ಮುಳುಗಿದಾಗ, ಬನ್ನಿ – ನನ್ನೊಂದಿಗೆ ಹೇಳಿ…
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ತುಂಬು ಧನ್ಯವಾದಗಳು.
*****
Addressing the NCC rally in Delhi. The youth today defines courage and commitment to a nation-first mindset. https://t.co/vtcWkEH7A9
— Narendra Modi (@narendramodi) January 28, 2026
आज सुबह ही, महाराष्ट्र में दुखद विमान दुर्घटना हुई है।
— PMO India (@PMOIndia) January 28, 2026
इस दुर्घटना ने महाराष्ट्र के उप-मुख्यमंत्री अजित पवार जी और कुछ साथियों को हमसे छीन लिया है: PM @narendramodi
अजित दादा ने महाराष्ट्र और देश के विकास में अपना बड़ा योगदान दिया है।
— PMO India (@PMOIndia) January 28, 2026
विशेष रूप से गांवों के जीवन को बेहतर बनाने के लिए उन्होंने हमेशा आगे बढ़कर काम किया।
मैं अजित पवार जी के परिवार के प्रति संवेदना व्यक्त करता हूं: PM @narendramodi
जिन साथियों को हमने इस हादसे में खोया है... इस पीड़ा की घड़ी में... हम सभी उनके परिजनों के साथ हैं: PM @narendramodi
— PMO India (@PMOIndia) January 28, 2026
NCC is a movement that empowers India's Yuva Shakti. pic.twitter.com/WkohuFt9mG
— PMO India (@PMOIndia) January 28, 2026
Today, the world looks at India's youth with great confidence. pic.twitter.com/C2pzmDYcAu
— PMO India (@PMOIndia) January 28, 2026
The agreement finalised with the European Union is drawing global attention, with many calling it the mother of all deals and a game-changer for the world. pic.twitter.com/DoxeQzGP36
— PMO India (@PMOIndia) January 28, 2026
Today, battles are fought on multiple fronts.
— PMO India (@PMOIndia) January 28, 2026
They are fought in code as well as in the cloud.
Countries that fall behind in technology are weak not only economically, but also in terms of security. pic.twitter.com/1Qd5dXzcjz
How we conduct ourselves as citizens is also a vital aspect of a Viksit Bharat.
— PMO India (@PMOIndia) January 28, 2026
As citizens, we must place the highest priority on our duties. pic.twitter.com/uRsB25haYA
Yuva Fit Toh Desh Hit! pic.twitter.com/7aEExWXkz2
— PMO India (@PMOIndia) January 28, 2026
आज सुबह एक विमान दुर्घटना ने महाराष्ट्र के उप मुख्यमंत्री अजित पवार जी और कुछ साथियों को हमसे छीन लिया। अजित दादा ने राज्य और देश के विकास में अपना अहम योगदान दिया। मैं उनके परिवार के प्रति संवेदना व्यक्त करता हूं। शोक की इस घड़ी में हम उन सभी साथियों के परिजनों के साथ हैं,… pic.twitter.com/bQLS8Em1eZ
— Narendra Modi (@narendramodi) January 28, 2026
आज पूरी दुनिया युवा भारत की युवा शक्ति की ओर बहुत भरोसे से देख रही है। दुनिया के इस भरोसे का कारण है- मातृभूमि के प्रति अपार श्रद्धा और कर्मभूमि के प्रति अप्रतिम समर्पण! pic.twitter.com/6BJnQAlJov
— Narendra Modi (@narendramodi) January 28, 2026
यूरोपियन यूनियन के साथ जिस ‘मदर ऑफ ऑल डील्स’ पर सहमति बनी है, उसका मतलब है- भारतीय युवाओं के लिए यूरोप के 27 देशों में नए-नए अवसर! pic.twitter.com/aTnEbHj2KS
— Narendra Modi (@narendramodi) January 28, 2026
ऑपरेशन सिंदूर ने दिखाया कि हमारे स्वदेशी हथियार कितने एडवांस और हाइटेक हैं। AI और Defence Innovation आज हमारी फोर्सेस को और आधुनिक बना रहे हैं, जिससे हमारे युवा साथियों के लिए संभावनाओं का बहुत विस्तार हुआ है। pic.twitter.com/WMQV3IfkBA
— Narendra Modi (@narendramodi) January 28, 2026
युवा मतदाताओं के लिए अब हमें देश में एक नई परंपरा शुरू करने की जरूरत है। इस दिशा में हर साल 25 जनवरी को राष्ट्रीय मतदाता दिवस पर NCC-NSS और मेरा युवा भारत संगठन में फर्स्ट टाइम वोटर्स के सम्मान में एक भव्य आयोजन किया जा सकता है। pic.twitter.com/mEvXxuYT8p
— Narendra Modi (@narendramodi) January 28, 2026
यह जानकर मुझे अच्छा लगा कि NCC ने एक पेड़ मां के नाम अभियान के तहत करीब 8 लाख पेड़ लगाए हैं। ये देखना भी हमारा कर्तव्य है कि जो पेड़ हमने लगाए हैं, वे अच्छे से बड़े भी हों। pic.twitter.com/9VUUboApg8
— Narendra Modi (@narendramodi) January 28, 2026
हमारे युवाओं का एक बहुत बड़ा टेस्ट ये भी है कि वे आने वाले समय में कितने अधिक फिट होंगे। अनुशासित जीवनशैली अपनाने को लेकर उनसे मेरा यह विशेष आग्रह… pic.twitter.com/ZCSGkhQAu4
— Narendra Modi (@narendramodi) January 28, 2026
आज सकाळी झालेल्या विमान दुर्घटनेत महाराष्ट्राचे उपमुख्यमंत्री अजित पवार जी आणि त्यांचे काही सहकारी आपल्यातून कायमचे निघून गेले. अजित दादांनी राज्य आणि देशाच्या विकासासाठी मोलाचे योगदान दिले. त्यांच्या कुटुंबीयांप्रती मी मनःपूर्वक संवेदना व्यक्त करतो. या शोकाकुल प्रसंगी, या… pic.twitter.com/8nZSGDiN0q
— Narendra Modi (@narendramodi) January 28, 2026