ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ನೋಯ್ಡಾ ಸೆಕ್ಟರ್ 142 ರಿಂದ ನೋಯ್ಡಾದ ಬೊಟಾನಿಕಲ್ ಗಾರ್ಡನ್ ವರೆಗೆ 11.56 ಕಿ.ಮೀ. ಉದ್ದದ 8 ಎತ್ತರಿಸಿದ ನಿಲ್ದಾಣಗಳನ್ನೊಳಗೊಂಡ ನೋಯ್ಡಾ ಮೆಟ್ರೋ ಯೋಜನೆಯ ವಿಸ್ತರಿತ ಕಾರಿಡಾರ್ ಗೆ ಅನುಮೋದನೆ ನೀಡಿದೆ. ಈ ಕಾರಿಡಾರ್ ನ ಕಾರ್ಯಾಚರಣೆಯಿಂದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರ 61.62 ಕಿ.ಮೀ. ಸಕ್ರಿಯ ಮೆಟ್ರೋ ಜಾಲವನ್ನು ಹೊಂದಿದಂತಾಗುತ್ತದೆ.
ಪ್ರಯೋಜನಗಳು ಮತ್ತು ಪ್ರಗತಿಯ ಉತ್ತೇಜನ
ನೋಯ್ಡಾ ಸೆಕ್ಟರ್ 142ರಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ನೋಯ್ಡಾ ಮೆಟ್ರೋ ರೈಲು ಯೋಜನೆಯ ವಿಸ್ತರಿತ ಕಾರಿಡಾರ್ ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮುನ್ನಡೆಯನ್ನು ಪ್ರತಿನಿಧಿಸುತ್ತದೆ. ಈ ಯೋಜನೆ ನಗರದ ಮೆಟ್ರೋ ರೈಲು ಜಾಲದ ಅತ್ಯಂತ ಪ್ರಮುಖ ವಿಸ್ತರಣೆಯಾಗಿದೆ.
ವರ್ಧಿತ ಸಂಪರ್ಕ;
ನೋಯ್ಡಾ ಸೆಕ್ಟರ್ 142 ರಿಂದ ಬೊಟಾನಿಕಲ್ ಗಾರ್ಡನ್(ನೋಯ್ಡಾ) ವರೆಗೆ ವಿಸ್ತರಿತ ಕಾರಿಡಾರ್ ನ ನೋಯ್ಡಾ ಮೆಟ್ರೋ ಯೋಜನೆ ಅಂದಾಜು 11.56 ಕಿ.ಮೀ. ಹೊಸ ಮೆಟ್ರೋ ಮಾರ್ಗವನ್ನು ಒಳಗೊಂಡಿದ್ದು, ಇದು ನೋಯ್ಡಾ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸಲಿದೆ. ಸದ್ಯ ನೋಯ್ಡಾ ನಗರಕ್ಕೆ ದಕ್ಷ ಸಾರಿಗೆ ಸಂಪರ್ಕ ಕೊರತೆಯಿದೆ. ಜೊತೆಗೆ ಈ ಯೋಜನೆ ಬೊಟಾನಿಕಲ್ ಗಾರ್ಡನ್(ನೀಲಿ ಮಾರ್ಗ) ಮತ್ತು ಮೆಜೆಂತಾ ಮಾರ್ಗ ಇಂಟರ್ ಚೇಂಜ್ ಸೇರಿದಂತೆ ಬೇಡಿಕೆ ಇರುವ ಕಾರಿಡಾರ್ ಗಳಲ್ಲಿ ನೇರ ಸಂಪರ್ಕವನ್ನು ಒದಗಿಸಲಿದೆ.
ಈ ಹಂತ ನೋಯ್ಡಾದ ಪ್ರಮುಖ ವಲಯಗಳು, ಸೇರಿದಂತೆ ಅಡೆತಡೆ ರಹಿತ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ.
ಈ ಪ್ರಮುಖ ಪ್ರದೇಶಗಳಲ್ಲಿ ಪ್ರಮುಖ ಸೌಕರ್ಯಗಳಿಂದ ನೋಯ್ಡಾ ಸೆಕ್ಟರ್ 142 ಯಿಂದ ಬೊಟಾನಿಕಲ್ ಗಾರ್ಡನ್(ನೋಯ್ಡಾದ ವರೆಗೆ)ಸಂಪರ್ಕ ವೃದ್ಧಿಯಾಗುವುದಲ್ಲದೆ, ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲಿದೆ ಮತ್ತು ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸುಲಭ ನಗರ ಸಂಚಾರ ಸಾಧ್ಯವಾಗಲಿದೆ.
ನೋಯ್ಡಾ ಸೆಕ್ಟರ್ 142 ನಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ವರೆಗಿನ ಕಾರಿಡಾರ್ ವಿಸ್ತರಣೆಯಿಂದ ನೋಯ್ಡಾ ಮೆಟ್ರೋ ರೈಲು ಯೋಜನೆ ನಗರದ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ್ದಾಗಲಿದೆ. ಇದು ವೇಗದ ಸಂಪರ್ಕ ಒದಗಿಸುವ ಜೊತೆಗೆ ಸಂಚಾರದಟ್ಟಣೆಯನ್ನು ನಿವಾರಿಸುತ್ತದೆ ಹಾಗೂ ಪರಿಸರ ಪ್ರಯೋಜನೆಗಳು, ಆರ್ಥಿಕ ಪ್ರಗತಿ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ. ನಗರದ ಪ್ರಮುಖ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ವಿಸ್ತರಣೆಗೆ ಭದ್ರ ಬುನಾದಿ ಹಾಕಲು ಈ ಯೋಜನೆ ನಗರದ ಅಭಿವೃದ್ಧಿಯ ಯಶೋಗಾಥೆ ಮತ್ತು ಸುಸ್ಥಿರತೆಯನ್ನು ರೂಪಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
*****