ಪಿಎಂಇಂಡಿಯಾ
ಒಡಂಬಡಿಕೆಗಳು/ ಒಪ್ಪಂದಗಳು/ ತಾತ್ವಿಕ ಒಪ್ಪಿಗೆ ಪತ್ರ
| ಕ್ರ.ಸಂ | ಎಂಒಯು/ ಒಪ್ಪಂದ’ ಎಲ್ ಒ ಎಲ್ | ವಿವರಣೆ |
|---|---|---|
| 1 |
ಭಾರತ ಮತ್ತು ಆಸ್ಟ್ರಿಯಾ ನಡುವೆ ಆಡಿಯೋವಿಶುವಲ್ ಸಹ ನಿರ್ಮಾಣಕ್ಕೆ ಒಪ್ಪಂದ |
ಈ ಒಪ್ಪಂದವು ಎರಡೂ ದೇಶಗಳ ಚಲನಚಿತ್ರೋದ್ಯಮಗಳ ನಡುವಿನ ವರ್ಧಿತ ಸಹಕಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತದೆ ಮತ್ತು ಜಂಟಿ ಚಲನಚಿತ್ರ ನಿರ್ಮಾಣ, ಸೃಜನಶೀಲ ವಿನಿಮಯ ಮತ್ತು ಹೆಚ್ಚಿನ ಸಾಂಸ್ಕೃತಿಕ ಒಳಗೊಳ್ಳುವಿಕೆಗೆ ಅನುಕೂಲವಾಗುತ್ತದೆ. |
| 2 |
ಭಾರತ ಮತ್ತು ಆಸ್ಟ್ರಿಯಾ ಕಂಪನಿಗಳಿಗೆ ಫಾಸ್ಟ್ ಟ್ರ್ಯಾಕ್ ಮೆಕ್ಯಾನಿಸಂ ಸ್ಥಾಪಿಸುವ ಕುರಿತು ಜಂಟಿ ಘೋಷಣೆ |
ತ್ವರಿತಗತಿಯ ಕಾರ್ಯವಿಧಾನವು ಭಾರತೀಯ ಮತ್ತು ಆಸ್ಟ್ರಿಯನ್ ಕಂಪನಿಗಳು ಮತ್ತು ಹೂಡಿಕೆದಾರರು ಪರಸ್ಪರರ ಆರ್ಥಿಕತೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುತ್ತದೆ. ವ್ಯವಹಾರವನ್ನು ಸುಲಭಗೊಳಿಸುವ ಬಗ್ಗೆ ಹೂಡಿಕೆದಾರರ ದೂರದೃಷ್ಟಿಯಿಂದ ಸಾಮಾನ್ಯ ಸಲಹೆಗಳನ್ನು ಚರ್ಚಿಸಲು ಫಾಸ್ಟ್-ಟ್ರ್ಯಾಕ್ ಕಾರ್ಯವಿಧಾನವು ಒಂದು ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. |
| 3 |
ಮಿಲಿಟರಿ ವಿಷಯಗಳಲ್ಲಿ ಸಹಕಾರದ ಕುರಿತು ತಾತ್ವಿತ ಒಪ್ಪಿಗೆಯ ಪತ್ರ |
ಎಲ್ ಒಐ, ಮಿಲಿಟರಿ ವಿಷಯಗಳಲ್ಲಿ ಸಹಕಾರವನ್ನು ಉತ್ತೇಜಿಸಲು, ರಕ್ಷಣಾ ಕೈಗಾರಿಕಾ ಮತ್ತು ತಂತ್ರಜ್ಞಾನ ಪಾಲುದಾರಿಕೆಗೆ ಸಾಂಸ್ಥಿಕ ಚೌಕಟ್ಟನ್ನು ಒದಗಿಸುತ್ತದೆ. 2026 ರ ಜನವರಿ 27 ರಂದು ಸಹಿ ಹಾಕಿದ ಭಾರತ-ಇಯು ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಯ ಆವೇಗವನ್ನು ನಿರ್ಮಿಸುತ್ತದೆ, ಜೊತೆಗೆ ರಕ್ಷಣಾ ನೀತಿ ಸಂವಾದ, ತರಬೇತಿ ಮತ್ತು ಸಾಮರ್ಥ್ಯವೃದ್ಧಿಗೆ ಅನುಕೂಲವಾಗುತ್ತದೆ. |
| 4 |
ಭಯೋತ್ಪಾದನೆ ನಿಗ್ರಹದ ಜಂಟಿ ಕಾರ್ಯಕಾರಿ ಗುಂಪಿನ ಕುರಿತು ತಾತ್ವಿಕ ಒಪ್ಪಿಗೆಯ ಪತ್ರ |
ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕಾರ್ಯತಂತ್ರದ ಸಹಕಾರದ ಕ್ಷೇತ್ರಗಳನ್ನು ಅನ್ವೇಷಿಸಲು ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡುವ ಗುರಿಯನ್ನು ಒಳಗೊಂಡಂತೆ ಭಾರತ ಮತ್ತು ಆಸ್ಟ್ರಿಯಾದ ನಡುವಿನ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಎಲ್ ಒ ಐ ಮುನ್ನಡೆಸುತ್ತದೆ. |
| 5 |
ಆಹಾರ ಸುರಕ್ಷತೆಯ ಕುರಿತು ಆಸ್ಟ್ರಿಯಾದ AGES ಮತ್ತು ಭಾರತದ FSSAI ನಡುವಿನ ಎಂಒಯು |
ಈ ತಿಳಿವಳಿಕೆ ಒಪ್ಪಂದವು ಆಹಾರ ಸುರಕ್ಷತಾ ಮಾನದಂಡಗಳು, ವೈಜ್ಞಾನಿಕ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಆಹಾರ ನಿಯಂತ್ರಣ ಮತ್ತು ಅಪಾಯದ ಮೌಲ್ಯಮಾಪನದಲ್ಲಿ ಉತ್ತಮ ಅಭ್ಯಾಸಗಳ ಹಂಚಿಕೆಯಲ್ಲಿ ಸಹಕಾರ ಉತ್ತೇಜಿಸುತ್ತದೆ, ಇದರಿಂದಾಗಿ ಕೃಷಿ ಮತ್ತು ಆಹಾರ ಉತ್ಪನ್ನಗಳಲ್ಲಿ ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ಸುರಕ್ಷತಾ ಮಾನದಂಡಗಳಿಗೆ ಹೆಚ್ಚಿನ ಆದ್ಯತೆ ಖಾತ್ರಿಪಡಿಸುತ್ತದೆ. |
| 6 |
ದ್ವಿ ವೃತ್ತಿಪರ ತರಬೇತಿ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಅರ್ಹತೆಗಳ ಗುರುತಿಸುವಿಕೆ ಕುರಿತು ಜಂಟಿ ಉದ್ದೇಶದ ಪತ್ರ |
ಜಂಟಿ ಉದ್ದೇಶ ಪತ್ರವು ಉಭಯ ವೃತ್ತಿಪರ ತರಬೇತಿ (ಅಪ್ರೆಂಟಿಸ್ಶಿಪ್) ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿನಿಮಯ ಮತ್ತು ಜ್ಞಾನ ಹಂಚಿಕೆಯನ್ನು ವಿಸ್ತರಿಸಲು ಹಾಗೂ ಆಸ್ಟ್ರಿಯನ್ ಮಾನದಂಡಗಳ ಪ್ರಕಾರ ಭಾರತೀಯ ವೃತ್ತಿಪರ ಅರ್ಹತೆಗಳ ಗುರುತಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. |
ಘೋಷಣೆಗಳು
| ಕ್ರ.ಸಂ | ಶೀರ್ಷಿಕೆ |
|---|---|
| 1 |
ರಸ್ತೆ ಮೂಲಸೌಕರ್ಯ ವಲಯದಲ್ಲಿ ತಾಂತ್ರಿಕ ಸಹಕಾರದ ಕುರಿತಾದ ಒಪ್ಪಂದದ ನವೀಕರಣ. (ಈ ಒಪ್ಪಂದವು ಇಂಟಲಿಜೆಂಟ್ (ಬುದ್ಧಿವಂತ)ಸಾರಿಗೆ ವ್ಯವಸ್ಥೆಗಳು (ಐಟಿಎಸ್), ರಸ್ತೆ ಸುರಕ್ಷತೆ, ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಮತ್ತು ಸಂಚಾರ ನಿರ್ವಹಣೆಯಲ್ಲಿ ತಾಂತ್ರಿಕ ಸಹಕಾರವನ್ನು ಬಲವರ್ಧನೆಗೊಳಿಸಲು ಸಹಾಯ ಮಾಡುತ್ತದೆ) |
| 2 |
ಭಾರತ-ಆಸ್ಟ್ರಿಯಾ ಸ್ಟಾರ್ಟ್ಅಪ್ ಬ್ರಿಡ್ಜ್ ಅಡಿಯಲ್ಲಿ ಸ್ಟಾರ್ಟ್ಅಪ್ ಪೂರಕ ವ್ಯವಸ್ಥೆಗಳಿಗೆ ಹೆಚ್ಚಿನ ಸಹಕಾರ (ಎರಡೂ ದೇಶಗಳ ಸ್ಟಾರ್ಟ್ಅಪ್ಗಳು, ಯೂನಿಕಾರ್ನ್ಗಳು, ನಾವೀನ್ಯತೆ ಪೂರಕ ವ್ಯವಸ್ಥೆಗಳು ಮತ್ತು ಸಾಹಸೋದ್ಯಮ ಬಂಡವಾಳ ಜಾಲಗಳ ನಡುವಿನ ನಿರಂತರ ಸಹಯೋಗ) |
| 3 |
ಸಾಂಸ್ಥಿಕ ಸೈಬರ್ ಭದ್ರತಾ ಸಂವಾದದ ಆರಂಭ. |
| 4 |
ಭಾರತದ ವಿಶ್ವಸಂಸ್ಥೆಯ ಶಾಂತಿಪಾಲನಾ ಕೇಂದ್ರ ಮತ್ತು ಆಸ್ಟ್ರಿಯನ್ ಸಶಸ್ತ್ರ ಪಡೆಗಳ ಅಂತಾರಾಷ್ಟ್ರೀಯ ಕೇಂದ್ರ (AUTINT) ನಡುವಿನ ಪಾಲುದಾರಿಕೆ. |
| 5 |
2026 ರ ಶರತ್ಕಾಲದಲ್ಲಿ ವಿಯೆನ್ನಾದಲ್ಲಿ ದ್ವಿಪಕ್ಷೀಯ ಬಾಹ್ಯಾಕಾಶ ಉದ್ಯಮ ವಿಚಾರ ಸಂಕಿರಣವನ್ನು ಜಂಟಿಯಾಗಿ ಆಯೋಜಿಸುವ ಒಪ್ಪಂದ; ಜಂಟಿ ಹೇಳಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ. |
| 6 |
ಕೆಲಸದ ರಜಾದಿನ ಕಾರ್ಯಕ್ರಮದ ಕಾರ್ಯಾಚರಣೆ. |
| 7 |
ವರ್ಧಿತ ಭಾರತ-ಆಸ್ಟ್ರಿಯಾ ಪಾಲುದಾರಿಕೆಯ ಕೇಂದ್ರ ಆಧಾರಸ್ತಂಭವಾಗಿ ಉನ್ನತ ತಂತ್ರಜ್ಞಾನ ಸಹಕಾರ (ವಿಜ್ಞಾನ ಮತ್ತು ತಂತ್ರಜ್ಞಾನ ಜಂಟಿ ಸಮಿತಿಯ ಅಡಿಯಲ್ಲಿ ಮೆಟೀರಿಯಲ್ ಸೈನ್ಸ್ ಮತ್ತು ತಂತ್ರಜ್ಞಾನ, ಕ್ವಾಂಟಮ್ ತಂತ್ರಜ್ಞಾನ, ತ್ಯಾಜ್ಯನೀರಿನ ಸಂಸ್ಕರಣೆ, ಯಂತ್ರ ಕಲಿಕೆ, ಲೇಸರ್ಗಳು ಇತ್ಯಾದಿ ವಲಯಗಳಲ್ಲಿ ಹಲವು ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳ ಗುರುತಿಸುವುದು) |
| 8 |
ಶಿಕ್ಷಣದಲ್ಲಿ ಸಹಕಾರದ ಕುರಿತು ರಚನಾತ್ಮಕ ದ್ವಿಪಕ್ಷೀಯ ಸಂವಾದ ಆರಂಭ. (ಕೌಶಲ್ಯಭಿವೃದ್ಧಿಯನ್ನು ಹೆಚ್ಚಿಸುವುದು, ಪಠ್ಯಕ್ರಮ ಅಭಿವೃದ್ಧಿಯನ್ನು ಉತ್ತೇಜಿಸುವುದು, ಅರ್ಹತೆಗಳ ಪರಸ್ಪರ ಗುರುತಿಸುವಿಕೆಯನ್ನು ಸುಗಮಗೊಳಿಸುವುದು ಮತ್ತು ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ಸಹಯೋಗ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಗಳ ಅಭಿವೃದ್ಧಿಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.) |
| 9 |
ಭಾರತದೊಂದಿಗೆ ಶೈಕ್ಷಣಿಕ ಸಹಕಾರ ಮತ್ತು ಸಂಶೋಧನಾ ಸಹಕಾರವನ್ನು ವ್ಯವಸ್ಥಿತವಾಗಿ ಗಾಢಗೊಳಿಸಲು ಆಸ್ಟ್ರಿಯಾದ ಪ್ರಮುಖ ತಾಂತ್ರಿಕ ವಿಶ್ವವಿದ್ಯಾಲಯಗಳ ಫೋಕಸ್ ಇಂಡಿಯಾ ಉಪಕ್ರಮ. (ಆಸ್ಟ್ರಿಯಾದ ಮೂರು ಸಾರ್ವಜನಿಕ ತಾಂತ್ರಿಕ ವಿಶ್ವವಿದ್ಯಾಲಯಗಳು (ಟೆಕ್ನಿಷ್ ಯೂನಿವರ್ಸಿಟಾಟ್ ವೀನ್, ಟೆಕ್ನಿಷ್ ಯೂನಿವರ್ಸಿಟಾಟ್ ಗ್ರಾಜ್ ಉಂಡ್ ಮಾಂಟನುವರ್ಸಿಟಾಟ್ ಲಿಯೋಬೆನ್) ಆಸ್ಟ್ರಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಮುಂದುವರಿಸಲು ಪ್ರವೇಶವನ್ನು ಸುಲಭಗೊಳಿಸಲು ಮೀಸಲಾದ ಪೋರ್ಟಲ್ ಅನ್ನು ಆರಂಭಿಸಿವೆ. |
*****
Addressing the joint press meet with Austrian Chancellor Christian Stocker.@_CStocker https://t.co/p3HZhwjbjz
— Narendra Modi (@narendramodi) April 16, 2026
वर्ष 2026 के ऐतिहासिक भारत-यूरोपियन यूनियन फ्री ट्रेड अग्रीमन्ट के बाद, भारत और यूरोपियन यूनियन के बीच संबंधों में एक नए सुनहरे अध्याय की शुरुआत हुई है: PM @narendramodi
— PMO India (@PMOIndia) April 16, 2026
चांसलर स्टॉकर की यह यात्रा ट्रेड और इनवेस्टमेंट में नई ऊर्जा लाएगी: PM @narendramodi
— PMO India (@PMOIndia) April 16, 2026
आज पूरा विश्व एक बहुत ही गंभीर और तनावपूर्ण स्थिति से गुजर रहा हैऔर इसका प्रभाव हम सभी पर पड़ रहा है।
— PMO India (@PMOIndia) April 16, 2026
ऐसे तनावपूर्ण वैश्विक माहौल में, भारत और ऑस्ट्रिया, हम एकमत हैं कि, मिलिटरी कॉन्फ्लिक्ट से समस्याओं का समाधान नहीं निकल सकता।
यूक्रेन हो या वेस्ट एशिया, हम एक stable,…
Held very productive discussions with Chancellor Stocker of Austria. We in India are glad that he selected our nation as his first destination to visit outside Europe after he assumed office. This reflects his vision and commitment to India-Austria relations. Equally special is… pic.twitter.com/6tzORXGs7H
— Narendra Modi (@narendramodi) April 16, 2026
Our talks today covered ways to deepen cooperation in areas such as innovation, infrastructure and sustainability. We are committed to adding new energy in trade and investment linkages. Sectors like defence, semiconductors, futuristic technologies and StartUps present immense… pic.twitter.com/dqWGGu466e
— Narendra Modi (@narendramodi) April 16, 2026