Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಿಷನ್ ದೃಷ್ಟಿಯ ಯಶಸ್ವೀ ಉಡಾವಣೆಗಾಗಿ ಗ್ಯಾಲಕ್ಸ್ ಐಗೆ ಪ್ರಧಾನಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಷನ್ ದೃಷ್ಟಿಯ ಯಶಸ್ವಿ ಉಡಾವಣೆಗಾಗಿ ಗ್ಯಾಲಕ್ಸ್-ಐ ಸಂಸ್ಥಾಪಕರು ಮತ್ತು ಇಡೀ ತಂಡವನ್ನು ಅಭಿನಂದಿಸಿದ್ದಾರೆ.

ಗ್ಯಾಲಕ್ಸ್-ಐನ ಮಿಷನ್ ದೃಷ್ಟಿ ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಪ್ರಮುಖ ಸಾಧನೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಶ್ವದ ಮೊದಲ ಆಪ್ಟೋಎಸ್ಎಆರ್ ಉಪಗ್ರಹ ಮತ್ತು ಭಾರತದಲ್ಲಿ ಖಾಸಗಿಯಾಗಿ ನಿರ್ಮಿಸಲಾದ ಅತಿದೊಡ್ಡ ಉಪಗ್ರಹದ ಯಶಸ್ವಿ ಉಡಾವಣೆಯು ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಯುವಕರ ಉತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಗ್ಯಾಲಕ್ಸ್ ಐನ ಸಂಸ್ಥಾಪಕರು ಮತ್ತು ಇಡೀ ತಂಡಕ್ಕೆ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.

ಈ ಕುರಿತು ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಗ್ಯಾಲಕ್ಸ್-ಐನ ಮಿಷನ್ ದೃಷ್ಟಿ ನಮ್ಮ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಪ್ರಮುಖ ಸಾಧನೆಯಾಗಿದೆ. ವಿಶ್ವದ ಮೊದಲ ಆಪ್ಟೋಎಸ್ಎಆರ್ ಉಪಗ್ರಹ ಮತ್ತು ಭಾರತದಲ್ಲಿ ಖಾಸಗಿಯಾಗಿ ನಿರ್ಮಿಸಲಾದ ಅತಿದೊಡ್ಡ ಉಪಗ್ರಹದ ಯಶಸ್ವಿ ಉಡಾವಣೆಯು ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ನಮ್ಮ ಯುವಕರ ಉತ್ಸಾಹಕ್ಕೆ ಸಾಕ್ಷಿಯಾಗಿದೆ.

ಗ್ಯಾಲಕ್ಸ್-ಐನ ಸಂಸ್ಥಾಪಕರು ಮತ್ತು ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.”

****