Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೇಹ್‌ನಲ್ಲಿ ‘ತಥಾಗತರ ಪೂಜ್ಯ ಅವಶೇಷಗಳ ಪವಿತ್ರ ಪ್ರದರ್ಶನ’ದ ಉದ್ಘಾಟನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲೇಹ್‌ನಲ್ಲಿ ಆರಂಭಗೊಂಡ ‘ತಥಾಗತರ ಪಜ್ಯ ಅವಶೇಷಗಳ ಪವಿತ್ರ ಪ್ರದರ್ಶನ’ ಉದ್ಘಾಟನೆಯ ಬಗ್ಗೆ ಇಂದು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಹತ್ತೊಂಬತ್ತನೇ ಶತಮಾನದ ಕೊನೆಯ ವರ್ಷಗಳಲ್ಲಿ ಉತ್ಖನನ ಮಾಡಲಾದ ಕಪಿಲವಸ್ತುವಿನ ʻಪಿಪ್ರಹ್ವʼ ಸ್ತೂಪಕ್ಕೆ ಸಂಬಂಧಿಸಿದ ಈ ಪೂಜ್ಯ ಅವಶೇಷಗಳು ಭಗವಾನ್ ಬುದ್ಧನ ಶಾಶ್ವತ ಬೋಧನೆಗಳನ್ನು ಸಾಕಾರಗೊಳಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಈ ಪ್ರದರ್ಶನವು ಮೇ 14 ರವರೆಗೆ ಮುಂದುವರಿಯುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಝನ್‌ಸ್ಕಾರ್‌ಗೆ ಪ್ರಯಾಣಿಸಲಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಪೂಜ್ಯ ಅವಶೇಷಗಳಿಗೆ ಗೌರವ ಸಲ್ಲಿಸಲು ಲಡಾಖ್‌ನಾದ್ಯಂತ ಜನರಿಗೆ ಇದು ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ. ಇದು ಲಡಾಖ್‌ನಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ ʻಎಕ್ಸ್‌ʼ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

“ನಿನ್ನೆ, ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ, ಲೇಹ್‌ನಲ್ಲಿ ‘ತಥಾಗತರ ಪೂಜ್ಯ ಅವಶೇಷಗಳ ಪವಿತ್ರ ಪ್ರದರ್ಶನ’ವನ್ನು ಉದ್ಘಾಟಿಸಿರುವುದು ಅಪಾರ ಸಂತೋಷದ ವಿಷಯವಾಗಿದೆ. ಈ ಪೂಜ್ಯ ಅವಶೇಷಗಳು ಕಪಿಲವಸ್ತುವಿನ ʻಪಿಪ್ರಹ್ವʼ ಸ್ತೂಪಕ್ಕೆ ಸಂಬಂಧಿಸಿದವಾಗಿದ್ದು, ಹತ್ತೊಂಬತ್ತನೇ ಶತಮಾನದ ಕೊನೆಯ ವರ್ಷಗಳಲ್ಲಿ ಇವುಗಳನ್ನು ಉತ್ಖನನ ಮಾಡಲಾಗಿದೆ. ಇವು ಭಗವಾನ್ ಬುದ್ಧನ ಶಾಶ್ವತ ಬೋಧನೆಗಳನ್ನು ಸಾಕಾರಗೊಳಿಸುತ್ತವೆ.”

ಈ ಪ್ರದರ್ಶನವು ಮೇ 14 ರವರೆಗೆ ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿ ಇದು ʻಝನ್‌ಸ್ಕಾರ್ʼಗೆ ಪ್ರಯಾಣಿಸಲಿದೆ. ಇದು ಪೂಜ್ಯ ಅವಶೇಷಗಳಿಗೆ ಗೌರವ ಸಲ್ಲಿಸಲು ಲಡಾಖ್‌ನಾದ್ಯಂತ ಜನರಿಗೆ ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ. ಇದು ಲಡಾಖ್‌ನಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.”

 

*****