Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ

ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು ಮತ್ತು ಪುನರ್ ನಿರ್ಮಾಣಗೊಂಡ ದೇವಾಲಯವು ಭಕ್ತರಿಗೆ ಬಾಗಿಲು ತೆರೆದು 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಪುನರ್‌ ನಿರ್ಮಾಣಗೊಂಡ ದೇವಾಲಯದ ಉದ್ಘಾಟನೆಯ 75ನೇ ವಾರ್ಷಿಕೋತ್ಸವದಂದು ಪವಿತ್ರ ದೇವಾಲಯವಾದ ಸೋಮನಾಥಕ್ಕೆ ಆಗಮಿಸಿದಾಗ ದೈವಿಕ ಅನುಭವವನ್ನು ಪ್ರಧಾನಮಂತ್ರಿ  ಉಲ್ಲೇಖಿಸಿದರು. ದೇವಾಲಯದ ಹಾದಿಯುದ್ದಕ್ಕೂ ಭಗವಾನ್ ಸೋಮನಾಥನ ಭಕ್ತರ ಅಪಾರ ಶಕ್ತಿ ಮತ್ತು ಉತ್ಸಾಹವನ್ನು ನೋಡಿದಾಗ ತಮಗೆ ಅತೀವ ಮತ್ತು ಭಾವನಾತ್ಮಕ ಅನುಭವವಾಯಿತು ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಜಿ ಅವರು ಪುನರ್ ನಿರ್ಮಾಣಗೊಂಡ ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಅನುಭವಿಸಿರಬಹುದಾದ ಕ್ಷಣವನ್ನು ಇಂದು ಮತ್ತೆ ಅನುಭವಿಸುತ್ತಿದ್ದೇನೆ ಎಂದು ಅವರು ಹೇಳಿದರು. ಸೋಮನಾಥ ದೇವಾಲಯದ ಅಮೃತ ಮಹೋತ್ಸವದ ಭಕ್ತಿಯ ವಾತಾವರಣವು ಎಲ್ಲೆಡೆ ಅದ್ಭುತ ಶಕ್ತಿಯನ್ನು ತುಂಬುತ್ತಿದೆ ಎಂದು ಅವರು ಹೇಳಿದರು.

ಸೋಮನಾಥ ದೇವಾಲಯದ ಪ್ರತಿ ಮೂಲೆಯಲ್ಲೂ ಭಕ್ತಿಯನ್ನು ಅನುಭವಿಸಬಹುದು ಎಂದು ಪ್ರಧಾನಮಂತ್ರಿ  ಉಲ್ಲೇಖಿಸಿದರು. ಪುನರ್ ನಿರ್ಮಾಣಗೊಂಡ ದೇವಾಲಯದ ಬಾಗಿಲು ತೆರೆದು 75 ವರ್ಷಗಳನ್ನು ಆಚರಿಸಲು ಅಸಂಖ್ಯಾತ ಜನರು ಒಗ್ಗೂಡಿದ್ದಾರೆಂದ  ಶ್ರೀ ನರೇಂದ್ರ ಮೋದಿ, ಈ ಐತಿಹಾಸಿಕ ದಿನವು ನಿಜಕ್ಕೂ ಭಾರತದ ನಾಗರಿಕತೆಯ ಪಯಣದಲ್ಲಿ ಒಂದು ಮೈಲಿಗಲ್ಲು ಎಂದು ಬಲವಾಗಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಸರಣಿ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

“ಜೈ ಸೋಮನಾಥ! ಪುನರ್ ನಿರ್ಮಿಸಲಾದ ದೇವಾಲಯವು ಭಕ್ತರಿಗೆ ಬಾಗಿಲು ತೆರೆದು 75 ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ತಾವು ಇಲ್ಲಿರುವುದು ಧನ್ಯತೆಯ ಭಾವನೆ ಮೂಡಿಸುತ್ತಿದೆ.’’

“पुनर्निर्मित सोमनाथ मंदिर के लोकार्पण की 75वीं वर्षगांठ पर पावनधाम सोमनाथ आकर दिव्य अनुभूति हुई है। इस अवसर पर मंदिर मार्ग पर भगवान सोमनाथ के भक्तों के जोश और प्रचंड उत्साह को देखकर मन अभिभूत और भावविभोर है! मैं आज यहां उस क्षण को जी रहा हूं, जिसका अनुभव भारत के प्रथम राष्ट्रपति डॉ. राजेंद्र प्रसाद जी ने पुनर्निर्मित मंदिर के लोकार्पण के अवसर पर किया होगा। सोमनाथ अमृत महोत्सव का भक्तिमय वातावरण हर तरफ अद्भुत ऊर्जा का संचार कर रहा है।”

“ಸೋಮನಾಥದಲ್ಲಿ ಪ್ರತಿಯೊಂದು ಮೂಲೆಯಲ್ಲೂ ಭಕ್ತಿಯನ್ನು ಅನುಭವಿಸಬಹುದು. ಪುನರ್ ನಿರ್ಮಿಸಲಾದ ದೇವಾಲಯವು ಭಕ್ತರಿಗೆ ಬಾಗಿಲು ತೆರೆದು 75ನೇ ವಾರ್ಷಿಕೋತ್ಸವವನ್ನು ಆಚರಿಸಲು ಅಸಂಖ್ಯಾತ ಜನರು ಒಗ್ಗೂಡಿದ್ದಾರೆ. ಈ ದಿನ ನಿಜಕ್ಕೂ ಭಾರತದ ನಾಗರಿಕತೆಯ ಪ್ರಯಾಣದಲ್ಲಿ ಒಂದು ಮೈಲಿಗಲ್ಲು.’’

 

*****