Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಷ್ಯಾದ ವಿದೇಶಾಂಗ ಸಚಿವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು


ರಷ್ಯಾದ ಒಕ್ಕೂಟದ ವಿದೇಶಾಂಗ ಸಚಿವರಾದ ಗೌರವಾನ್ವಿತ ಶ್ರೀ ಸೆರ್ಗೆಯ್ ಲಾವ್ರೊವ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 2025ರಲ್ಲಿ ಉಭಯ ನಾಯಕರು ಭೇಟಿಯಾದ ನಂತರ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಿದ ಪ್ರಗತಿಯ ಕುರಿತು ವಿದೇಶಾಂಗ ಸಚಿವರಾದ ಲಾವ್ರೊವ್ ಅವರು ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಿದರು.

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಸೇರಿದಂತೆ ಪರಸ್ಪರ ಹಿತಾಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವಿದೇಶಾಂಗ ಸಚಿವರಾದ ಲಾವ್ರೊವ್ ಮತ್ತು ಪ್ರಧಾನಮಂತ್ರಿಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿರುವ ಅತ್ಯುತ್ತಮ ಮಾರ್ಗ ಎನ್ನುವ ಭಾರತದ ಸ್ಥಿರ ನಿಲುವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ಅಧ್ಯಕ್ಷರಾದ ಪುಟಿನ್ ಅವರಿಗೆ ಆತ್ಮೀಯ ಶುಭಾಶಯಗಳನ್ನು ತಿಳಿಸುವಂತೆ ವಿದೇಶಾಂಗ ಸಚಿವರಾದ ಲಾವ್ರೊವ್ ಅವರನ್ನು ಪ್ರಧಾನಮಂತ್ರಿ ಅವರು ವಿನಂತಿಸಿದರು.

 

*****