ಪಿಎಂಇಂಡಿಯಾ
2026ರ ಮೇ 19 ರಂದು ಓಸ್ಲೋದಲ್ಲಿ ನಡೆದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರನ್ನು ಭೇಟಿಯಾದರು.
ಡಿಜಿಟಲೀಕರಣ ಮತ್ತು ಸುಸ್ಥಿರತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಏರಿಸುವುದರೊಂದಿಗೆ, ಇಬ್ಬರೂ ನಾಯಕರು ಕೈಗಾರಿಕೆ, ಸಂಶೋಧನಾ ಸಂಸ್ಥೆಗಳು ಮತ್ತು ಶೈಕ್ಷಣಿಕ ವಲಯಗಳ ನಡುವಿನ ಸಹಯೋಗವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಭವಿಷ್ಯದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸುಸ್ಥಿರತೆ ಮತ್ತು ಡಿಜಿಟಲೀಕರಣದ ಪ್ರಮುಖ ಪಾತ್ರವನ್ನೂ ಅವರು ಒತ್ತಿ ಹೇಳಿದರು. ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲೀಕರಣ, ಕೃತಕ ಬುದ್ದಿಮತ್ತೆ, 5ಜಿ/6ಜಿ, ಕ್ವಾಂಟಮ್ ತಂತ್ರಜ್ಞಾನಗಳು, ಬಾಹ್ಯಾಕಾಶ, ಸುಸ್ಥಿರತೆ, ನವೀಕರಿಸಬಹುದಾದ ಇಂಧನ, ವೃತ್ತಾಕಾರದ ಆರ್ಥಿಕತೆ, ನಾವೀನ್ಯತೆ, ಶಿಕ್ಷಣ, ಚಲನಶೀಲತೆ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಅವರು ಅವಲೋಕಿಸಿದರು.
ಜಾಗತಿಕ ಸವಾಲುಗಳ ಹೊರತಾಗಿಯೂ ಸರಕು ಮತ್ತು ಸೇವೆಗಳಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿನ ಸ್ಥಿರ ಬೆಳವಣಿಗೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು ಮತ್ತು 2030 ರ ವೇಳೆಗೆ ಈಗ ಚಾಲ್ತಿಯಲ್ಲಿರುವ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಜೊತೆಗೆ, ವಿಸ್ತೃತ ಕಾರ್ಯಾಚರಣೆಗಳು ಮತ್ತು ಪಾಲುದಾರಿಕೆಗಳ ಮೂಲಕ ಪರಸ್ಪರ ಮಾರುಕಟ್ಟೆಗಳಲ್ಲಿ ತಮ್ಮ ಪ್ರಮುಖ ತಂತ್ರಜ್ಞಾನ ಕಂಪನಿಗಳ ಉಪಸ್ಥಿತಿ ಹೆಚ್ಚುತ್ತಿರುವುದನ್ನು ಅವರು ಸ್ವಾಗತಿಸಿದರು. ಫಿನ್ ಲ್ಯಾಂಡ್ ನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಮತ್ತು ನಾವೀನ್ಯತೆಗೆ ಭಾರತೀಯ ವೃತ್ತಿಪರರ ಮಹತ್ವದ ಕೊಡುಗೆಗಳನ್ನು ಫಿನ್ನಿಷ್ ಕಡೆಯವರು ಶ್ಲಾಘಿಸಿದರು. ಸೆಪ್ಟೆಂಬರ್ 2026ರಲ್ಲಿ ಭಾರತದ ಗುಜರಾತ್‌ನ ಗಾಂಧಿನಗರದಲ್ಲಿ ಭಾರತ ಮತ್ತು ಫಿನ್ ಲ್ಯಾಂಡ್ ಜಂಟಿಯಾಗಿ ವಿಶ್ವ ವೃತ್ತಾಕಾರದ ಆರ್ಥಿಕ ವೇದಿಕೆಯನ್ನು ಆಯೋಜಿಸುವುದಾಗಿ ನಾಯಕರು ಘೋಷಿಸಿದರು.
ಭಾರತ ಮತ್ತು ಫಿನ್ ಲ್ಯಾಂಡ್ ಸೌಹಾರ್ದಯುತ, ಸ್ನೇಹಪರ ಮತ್ತು ಬಹುಮುಖಿ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ, ಇವು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಬೇರೂರಿವೆ. ಯುರೋಪಿಯನ್ ಒಕ್ಕೂಟ ಮತ್ತು ನಾರ್ಡಿಕ್ ಪ್ರದೇಶದಲ್ಲಿ ಫಿನ್ ಲ್ಯಾಂಡ್ ಭಾರತಕ್ಕೆ ಮೌಲ್ಯಯುತ ಪಾಲುದಾರ. ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವನ್ನು ಅತಿ ಶೀಘ್ರವಾಗಿ ಜಾರಿಗೆ ತರುವ ಮಹತ್ವವನ್ನು ಮನಗಂಡರು. ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಹಕಾರದ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
*****
PM @narendramodi met PM @PetteriOrpo of Finland and reviewed the growing momentum in India-Finland relations. The two leaders discussed expanding cooperation in areas such as AI, 6G, education and nuclear energy, while also exploring deeper collaboration in climate action,… pic.twitter.com/epCPk93CAr
— PMO India (@PMOIndia) May 19, 2026
Delighted to meet the Prime Minister of Finland, Mr. Petteri Orpo. This year has witnessed extensive engagements as far as India and Finland are concerned. PM Orpo himself had come to India for the AI Impact Summit. Our meeting today is aimed at giving new energy to bilateral… pic.twitter.com/8GvixngCVk
— Narendra Modi (@narendramodi) May 19, 2026
Oli ilo tavata Suomen pääministeri, herra Petteri Orpo. Tänä vuonna on nähty laajaa vuorovaikutusta Intian ja Suomen välillä. Pääministeri Orpo itse vieraili Intiassa AI Impact Summit -tapahtumassa. Tämänpäiväisen tapaamisemme tavoitteena on antaa uutta energiaa kahdenvälisiin… pic.twitter.com/2eEOYpCAZD
— Narendra Modi (@narendramodi) May 19, 2026