Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಮ್ಮ ಮಾತೃಭೂಮಿಯ ಪವಿತ್ರ ಪರಂಪರೆಯನ್ನು ಮತ್ತು ವಿಶ್ವಕಲ್ಯಾಣದ ಪ್ರಾರ್ಥನೆಯನ್ನು ಶ್ಲಾಘಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಂದು ಸಂಸ್ಕೃತ ಸುಭಾಷಿತವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಮಾತೃಭೂಮಿ ಆಧ್ಯಾತ್ಮಿಕ ಸಾಧನೆ ಮತ್ತು ಆರಾಧನೆಯ ಪವಿತ್ರ ನೆಲವಾಗಿರುವುದರ ಜೊತೆಗೆ, ಶೌರ್ಯ, ಶಕ್ತಿ ಮತ್ತು ವಿಶ್ವಕಲ್ಯಾಣದ ಪ್ರತೀಕವಾಗಿದೆ ಎಂದು ಅರ್ಥಬರುವ ಶ್ಲೋಕವಾಗಿದೆ. ಈ ಮಹಾನ್ ಪರಂಪರೆ ಮತ್ತು ಪ್ರಾಚೀನ ಸಂಸ್ಕೃತಿಯ ಪವಿತ್ರ ಭೂಮಿ ಎಲ್ಲರನ್ನೂ ಸದಾ ಸಂತೋಷ ಮತ್ತು ಸಮೃದ್ಧಿಯಿಂದ ಕಾಪಾಡಲಿ ಎಂಬ ಹಾರೈಕೆಯನ್ನು ಶ್ರೀ ಮೋದಿ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“हमारी मातृभूमि साधना और उपासना के साथ-साथ साहस, शक्ति और सर्व-कल्याण की पुण्यभूमि रही है। महान विरासत और प्राचीन संस्कृति की यह पावन धरती हर किसी को सदैव सुख-समृद्धि से परिपूर्ण रखे, यही कामना है।

यस्यां पूर्वे पूर्वजना विचक्रिरे यस्यां देवा असुरानभ्यवर्तयन् ।
गवामश्वानां वयसश्च विष्ठा भगं वर्चः पृथिवी नो दधातु ।।”

ನಮ್ಮ ಮಾತೃಭೂಮಿ ಸಾಧನೆ ಮತ್ತು ಉಪಾಸನೆಯ ಜೊತೆಗೆ ಧೈರ್ಯ, ಶಕ್ತಿ ಮತ್ತು ಸರ್ವರ ಕಲ್ಯಾಣದ ಪವಿತ್ರ ಭೂಮಿಯಾಗಿದೆ. ಮಹಾನ್ ಪರಂಪರೆ ಮತ್ತು ಪ್ರಾಚೀನ ಸಂಸ್ಕೃತಿಯ ಈ ಪವಿತ್ರ ನೆಲವು ಪ್ರತಿಯೊಬ್ಬರನ್ನೂ ಸದಾ ಸುಖ-ಸಮೃದ್ಧಿಯಿಂದ ಕಂಗೊಳಿಸುವಂತೆ ಇಟ್ಟಿರಲಿ ಎಂಬುದೇ ನಮ್ಮ ಹಾರೈಕೆ.

 

*****