Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದಾದ್ಯಂತ ಹೆಚ್ಚುತ್ತಿರುವ ತಾಪಮಾನದ ನಡುವೆ ಮುನ್ನೆಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಕರೆ


ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ತೀವ್ರ ತಾಪಮಾನದ ಹಿನ್ನೆಲೆಯಲ್ಲಿ ದೇಶದ ನಾಗರಿಕರು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಸಾರ್ವಜನಿಕರು ದೇಹದಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳಬೇಕು, ಹೊರಗೆ ಹೋಗುವಾಗ ನೀರನ್ನು ಜೊತೆಯಲ್ಲಿ ಕೊಂಡೊಯ್ಯಬೇಕು ಮತ್ತು ಈ ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಇತರರಿಗೂ ನೀರನ್ನು ನೀಡುವ ಮೂಲಕ ಸಹಾಯ ಮಾಡಬೇಕು ಎಂದು ಶ್ರೀ ಮೋದಿ ಒತ್ತಾಯಿಸಿದ್ದಾರೆ.

ತಲೆತಿರುಗುವಿಕೆ, ವಾಕರಿಕೆ ಮತ್ತು ಅತಿಯಾದ ಸುಸ್ತು ಮುಂತಾದ ಅತಿಯಾದ ಶಾಖದಿಂದಾಗುವ ಬಳಲಿಕೆಯ ಲಕ್ಷಣಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಪ್ರಧಾನಮಂತ್ರಿ ಅವರು ಸಲಹೆ ನೀಡಿದ್ದಾರೆ. ಯಾರಾದರೂ ಅಸ್ವಸ್ಥರಾಗಿರುವುದು, ದೌರ್ಬಲ್ಯ ಅಥವಾ ತಲೆನೋವಿನಿಂದ ಬಳಲುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಅವರನ್ನು ತಂಪಾದ ಮತ್ತು ನೆರಳಿನ ಜಾಗಕ್ಕೆ ಕರೆದೊಯ್ದು, ನೀರು ಮತ್ತು ಒ.ಆರ್.ಎಸ್   ಲಭ್ಯವಾಗುವಂತೆ ಮಾಡುವ ಮೂಲಕ ನಾಗರಿಕರು ತಕ್ಷಣ ನೆರವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತೀವ್ರವಾದ ಶಾಖದ ಸಮಯದಲ್ಲಿ ಮಕ್ಕಳು, ವೃದ್ಧರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರು ಹೆಚ್ಚು ಬಾಧಿತರಾಗುತ್ತಾರೆ ಎಂದು ಶ್ರೀ ಮೋದಿ ಹೇಳಿದರು. ಈ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಅದು  ಬಿಸಿಲಾಘಾತಕ್ಕೆ  ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.

ತೀವ್ರ ಶಾಖದ ಅಲೆಯ ಈ ಸಂದರ್ಭದಲ್ಲಿ ವಯಸ್ಸಾದ ಪೋಷಕರು, ಅಜ್ಜ ಅಜ್ಜಿಯರು ಮತ್ತು ಪ್ರೀತಿಪಾತ್ರರ ಯೋಗಕ್ಷೇಮವನ್ನು ನಿಯಮಿತವಾಗಿ ವಿಚಾರಿಸುತ್ತಿರಬೇಕು ಹಾಗೂ ಅವರು ಸಾಕಷ್ಟು ನೀರು ಕುಡಿಯುವಂತೆ, ಮಧ್ಯಾಹ್ನದ ಉರಿಬಿಸಿಲಿನಲ್ಲಿ ಹೊರಗೆ ಹೋಗದಂತೆ ಮತ್ತು ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಲು ನೆನಪಿಸಬೇಕು ಎಂದು ಶ್ರೀ ಮೋದಿ ಅವರು ಜನರಿಗೆ ಕರೆ ನೀಡಿದ್ದಾರೆ.

ಹವಾಮಾನ ವೈಪರೀತ್ಯದ ಪರಿಸ್ಥಿತಿಯಲ್ಲಿ ಸಹಾನುಭೂತಿಯನ್ನು ತೋರುವುದರ ಅಗತ್ಯತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪಕ್ಷಿಗಳು ಮತ್ತು ಪ್ರಾಣಿಗಳಿಗಾಗಿ ಮನೆಗಳ ಹೊರಗೆ, ಬಾಲ್ಕನಿಗಳು, ಟೆರೇಸ್ ಗಳು, ಅಂಗಡಿಗಳು ಮತ್ತು ಕಚೇರಿಗಳ ಮುಂದೆ ನೀರಿನ ಪಾತ್ರೆಗಳನ್ನು ಇಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

X ಪೋಸ್ಟ್‌ಗಳ ಸರಣಿಯಲ್ಲಿ, ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;

“ಭಾರತದ ವಿವಿಧ ಭಾಗಗಳಲ್ಲಿ ತೀವ್ರವಾಗಿ ಏರುತ್ತಿರುವ ತಾಪಮಾನವು ಮತ್ತು ಅದರೊಂದಿಗೆ ಬರುವ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಈ ಬಿಸಿಲು ನಮ್ಮೆಲ್ಲರಿಗೂ ಕಠಿಣವಾಗಿದೆ ಮತ್ತು ನೀವೆಲ್ಲರೂ ಸಾಧ್ಯವಾದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ದಯವಿಟ್ಟು ಸಾಕಷ್ಟು ನೀರು ಕುಡಿಯಿರಿ, ಹೊರಗೆ ಹೋಗುವಾಗ ನೀರನ್ನು ಜೊತೆಯಲ್ಲಿ ಇಟ್ಟುಕೊಳ್ಳಿ. ಇತರರಿಗೂ ಒಂದು ಲೋಟ ನೀರನ್ನು ನೀಡಿ. ಇಂತಹ ಹವಾಮಾನದಲ್ಲಿ, ಈ ರೀತಿಯ ಸಣ್ಣ ದಯೆಯು ಬಹಳ ಸಹಕಾರಿಯಾಗುತ್ತದೆ.”

“ತಲೆತಿರುಗುವಿಕೆ, ವಾಕರಿಕೆ ಅಥವಾ ಅತಿ ಆಯಾಸದಂತಹ ಅತಿಯಾದ ಶಾಖದಿಂದಾಗುವ ಬಳಲಿಕೆಯ ಲಕ್ಷಣಗಳ ಬಗ್ಗೆ ಗಮನವಿರಲಿ. ನಿಮ್ಮ ಸುತ್ತಮುತ್ತಲಿನ ಯಾರಾದರೂ ಅಸಾಮಾನ್ಯವಾಗಿ ಅಸ್ವಸ್ಥರಾಗಿದ್ದರೆ, ದೌರ್ಬಲ್ಯ ಹೊಂದಿದ್ದರೆ ಅಥವಾ ತಲೆನೋವು ಕಾಣಿಸಿಕೊಂಡರೆ, ತಕ್ಷಣವೇ ಅವರನ್ನು ತಂಪಾದ ಮತ್ತು ನೆರಳಿನ ಜಾಗಕ್ಕೆ ಸ್ಥಳಾಂತರಿಸಲು ಸಹಾಯ ಮಾಡುವುದು ಉತ್ತಮ. ಅವರಿಗೆ ನೀರು, ಒ.ಆರ್.ಎಸ್ ಇತ್ಯಾದಿಗಳು ಸಿಗುವಂತೆ ನೋಡಿಕೊಳ್ಳಿ. ತೀವ್ರವಾದ ಶಾಖದ ಸಮಯದಲ್ಲಿ ಮಕ್ಕಳು, ವೃದ್ಧರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರು ಹೆಚ್ಚು ಬಾಧಿತರಾಗುತ್ತಾರೆ. ಈ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸುವುದು ಶೀಘ್ರದಲ್ಲೇ ಅಪಾಯಕಾರಿಯಾಗಿ ಪರಿಣಮಿಸಬಹುದು ಮತ್ತು ಬಿಸಿಲಾಘಾತಕ್ಕೆ  ಕಾರಣವಾಗಬಹುದು. ಇಂತಹ ಹವಾಮಾನದಲ್ಲಿ ಸಕಾಲಿಕ ಕಾಳಜಿ ಮತ್ತು ಗಮನವು ಪ್ರಮುಖ ಪಾತ್ರ ವಹಿಸುತ್ತದೆ.”

“ಸಾಧ್ಯವಾದಾಗಲೆಲ್ಲಾ, ಈ ಅತಿ ಶಾಖದ ಅಲೆಯ ಸಮಯದಲ್ಲಿ ವಯಸ್ಸಾದ ಪೋಷಕರು, ಅಜ್ಜ-ಅಜ್ಜಿಯರು ಮತ್ತು ಪ್ರೀತಿಪಾತ್ರರಿಗೆ ಕರೆ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿ. ಅವರು ದೇಹದಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳಲು, ಮಧ್ಯಾಹ್ನದ ಉರಿಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಲು ಮತ್ತು ಸಾಧ್ಯವಾದಾಗಲೆಲ್ಲಾ ವಿಶ್ರಾಂತಿ ಪಡೆಯಲು ಅವರಿಗೆ ನೆನಪಿಸಿ.”

“ಈ ತೀವ್ರವಾದ ಶಾಖದಲ್ಲಿ, ನಮ್ಮ ಸುತ್ತಮುತ್ತಲಿನ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಸಹ ನಾವು ನೆನಪಿಸಿಕೊಳ್ಳೋಣ. ನಿಮ್ಮ ಮನೆ, ಬಾಲ್ಕನಿಗಳು, ಟೆರೇಸ್ ಗಳು, ಅಂಗಡಿಗಳು ಅಥವಾ ಕಚೇರಿಗಳ ಹೊರಗೆ ಇಡುವ ಒಂದು ಸಣ್ಣ ಬಟ್ಟಲು ನೀರು ದಾಹದಿಂದ ಬಳಲುತ್ತಿರುವ ಪಕ್ಷಿಗೆ ಜೀವಸೆಲೆಯಾಗಬಹುದು. ಈ ಕಠಿಣ ಪರಿಸ್ಥಿತಿಯಲ್ಲಿ ಸಹಾನುಭೂತಿಯು ನಮಗೆ ಮಾರ್ಗದರ್ಶನ ನೀಡಲಿ.”

“देश के अलग-अलग हिस्सों में तापमान लगातार बढ़ रहा है और इसके साथ ही दैनिक जीवन में गर्मी से होने वाली कई कठिनाइयां भी बढ़ रही हैं। मैं सभी देशवासियों से आग्रह करता हूं कि जितनी अधिक सावधानी बरत सकें, अवश्य बरतें। कृपया स्वयं को हाइड्रेटेड रखें, घर से बाहर निकलते समय पानी साथ रखें। ऐसे मौसम में आपकी संवेदनशीलता भी बहुत बड़ा सहारा बन जाती है। यदि संभव हो, तो किसी प्यासे व्यक्ति को एक गिलास पानी अवश्य दें। मैं ऐसे लोगों की सराहना भी करूँगा जो अपने घरों के और दुकानों के बाहर मटके में जल रखते हैं ताकि कोई भी उनसे पानी पी सके।”

“अत्यधिक गर्मी से होने वाली परेशानी, जैसे चक्कर आना, मतली या ज्यादा थकान लगे तो उसे बिल्कुल भी नजरअंदाज न करें। यदि आपके आसपास किसी व्यक्ति को अचानक बेहोशी जैसा लगे, कमजोरी महसूस करे या फिर अस्वस्थ दिखाई दे, तो उसे तुरंत किसी ठंडी और छायादार जगह पर ले जाएं। उसे पानी, ORS या अन्य तरल पदार्थ दें, जिससे शरीर को राहत मिल सके। बच्चे, बुज़ुर्ग और धूप में काम करने वाले लोग इस भीषण गर्मी में सबसे अधिक प्रभावित होते हैं। समय रहते ध्यान न देने पर यह स्थिति हीटस्ट्रोक जैसी गंभीर समस्या का रूप ले सकती है। ऐसे समय में आपकी सतर्कता और देखभाल किसी का जीवन बचा सकती है।”

“जब भी संभव हो, अपने माता-पिता, दादा-दादी, नाना-नानी और अन्य प्रियजनों को फोन कर उनका हालचाल अवश्य पूछें। उन्हें पर्याप्त पानी पीने, दोपहर की तेज धूप में बाहर न निकलने और जितना हो सके, आराम करने की सलाह दें।”

“इस प्रचंड गर्मी में हमें अपने आसपास के पशु-पक्षियों को भी नहीं भूलना चाहिए। अपने घर, बालकनी, छत, दुकान या ऑफिस के बाहर पानी से भरा एक छोटा-सा बर्तन रखना भी किसी प्यासे पक्षी के लिए जीवनदान बन सकता है। आइए, इन कठिन दिनों में पूरी संवेदनशीलता और करुणा के साथ एक-दूसरे का ध्यान रखें।”

 

*****