Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೂನ್ 5 ರಂದು ಸೂರತ್ ಮತ್ತು ದಮನ್ ಗೆ ಪ್ರಧಾನಮಂತ್ರಿ ಅವರ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜೂನ್ 5 ರಂದು ಗುಜರಾತ್ ಮತ್ತು ದಮನ್ ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಸುಮಾರು 2:30 ಕ್ಕೆ ಪ್ರಧಾನಮಂತ್ರಿ ಅವರು ಸೂರತ್ ಜಿಲ್ಲೆಯ ಹಜಿರಾಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಕೈಗಾರಿಕಾ ಕಾರ್ಯಗಳು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ. ಮಧ್ಯಾಹ್ನ ಸುಮಾರು 4:15ಕ್ಕೆ ಪ್ರಧಾನಮಂತ್ರಿ ಅವರು ಸೂರತ್ ನಲ್ಲಿ ಸುಮಾರು ₹18,800 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ಪ್ರಧಾನಮಂತ್ರಿ ಅವರು ದಮನ್ ಗೆ ಪ್ರಯಾಣಿಸಲಿದ್ದು, ಸಂಜೆ ಸುಮಾರು 6:15 ಕ್ಕೆ ದಮನ್ ನ ನಮೋ (ಎನ್ ಎ ಎಂ ಒ) ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಇದರ ಬೆನ್ನಲ್ಲೇ ದಮನ್ನಲ್ಲಿರುವ ನಮೋ (ಎನ್ ಎ ಎಂ ಒ) ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ತದನಂತರ, ಸಂಜೆ ಸುಮಾರು 7:15 ಕ್ಕೆ ಪ್ರಧಾನಮಂತ್ರಿಯವರು ದಮನ್ ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಸಮರ್ಪಿಸಿ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕಾಗಿ ಸುಮಾರು ₹885 ಕೋಟಿ ಮೌಲ್ಯದ ನಾಲ್ಕು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸೂರತ್ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಸೂರತ್ ನಲ್ಲಿ ರಸ್ತೆ, ವಿದ್ಯುತ್ ಮತ್ತು ಕೈಗಾರಿಕಾ ವಲಯಗಳಿಗೆ ಸಂಬಂಧಿಸಿದ ₹18,800 ಕೋಟಿಗೂ ಅಧಿಕ ಮೌಲ್ಯದ ಹಲವು  ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ವಡೋದರಾ-ಮುಂಬೈ ಎಕ್ಸ್ಪ್ರೆಸ್ವೇಯ 4ಮತ್ತು 6 ಪ್ಯಾಕೇಜ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ಇದು ಗುಜರಾತ್ ಮತ್ತು ಮಹಾರಾಷ್ಟ್ರದ ನಡುವೆ  ಅತಿ ವೇಗದ ಸಾರಿಗೆ, ಸಾರಿಗೆ (ಲಾಜಿಸ್ಟಿಕ್ಸ್) ದಕ್ಷತೆ ಮತ್ತು ಆರ್ಥಿಕ ಸಂಪರ್ಕವನ್ನು ಹೆಚ್ಚಿಸಲಿದೆ. ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಮತ್ತು ‘ಏಕತಾ ಪ್ರತಿಮೆ’ಗೆ ಪ್ರವೇಶವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ-56 ರ ಪ್ರಮುಖ ವಿಭಾಗಗಳನ್ನು ನಾಲ್ಕು ಪಥಗಳನ್ನಾಗಿ ಮಾಡುವ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಸೂರತ್ ನಗರದಲ್ಲಿ 200 ಹಾಸಿಗೆಗಳ ಇಎಸ್ ಐಸಿ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಇದು ಆಧುನಿಕ ದ್ವಿತೀಯ ಹಂತದ ಆರೋಗ್ಯ ರಕ್ಷಣೆಯನ್ನು ಒದಗಿಸಲಿದ್ದು, ಪ್ರಮುಖ ವಿಶೇಷತೆಗಳು, ಕೇಂದ್ರ ಪ್ರಯೋಗಾಲಯ ಮತ್ತು ಅಗತ್ಯ ಪೂರಕ ಸೇವೆಗಳನ್ನು ಒಳಗೊಂಡಿರುತ್ತದೆ. ವೃತ್ತಿಯಿಂದಾಗುವ ಗಾಯಗಳು ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಕಾಲಿಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಇದು 24/7 ತುರ್ತು ಮತ್ತು ಆಘಾತ ನಿಗಾ   ಸೌಲಭ್ಯವನ್ನು ಹೊಂದಿದೆ. ಪ್ರಧಾನಮಂತ್ರಿಯವರು ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಯಡಿ ವಿದ್ಯುತ್  ಪ್ರಸರಣದ ಸಾಮರ್ಥ್ಯವನ್ನು ಹೆಚ್ಚಿಸಲು ಗುಜರಾತಿನಲ್ಲಿ ಪ್ರಸರಣ ಜಾಲ ವಿಸ್ತರಣೆ  ವಿಸ್ತರಣೆ ಸೇರಿದಂತೆ ಪ್ರಮುಖ ಉಪಯುಕ್ತತೆ ಮತ್ತು ಕೈಗಾರಿಕಾ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ವಲ್ಸಾದ್ ನಲ್ಲಿ ಪರಿಷ್ಕೃತ ಸುಧಾರಣೆ ಆಧಾರಿತ ವಿತರಣಾ ವಲಯ ಯೋಜನೆಯಡಿ ಆಧುನಿಕ ವಿದ್ಯುತ್ ವಿತರಣಾ ಉನ್ನತೀಕರಣ, ದಹೇಜ್ ಪೆಟ್ರೋಲಿಯಂ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ಪ್ರದೇಶ (ಪಿಸಿಪಿಐಆರ್) ಮತ್ತು ಸರಿಗಮ್ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ (ಜಿಐಡಿಸಿ)ದಲ್ಲಿ ಸುಧಾರಿತ ಜಲತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಮೂಲಸೌಕರ್ಯ, ಮತ್ತು ಜಂಬೂಸರ್ ಬಲ್ಕ್ ಡ್ರಗ್ ಪಾರ್ಕ್ ನಲ್ಲಿ ಅಗತ್ಯ ವಿನ್ಯಾಸ ಸೌಲಭ್ಯಗಳು ಸೇರಿದಂತೆ ಗುಜರಾತ್ ಸರ್ಕಾರದ ಹಲವು ಪ್ರಮುಖ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ದಮನ್ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ದಮನ್ ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಹಾಗು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಆರೋಗ್ಯ, ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಮೂಲಸೌಕರ್ಯ, ಸಂಪರ್ಕ ಮತ್ತು ಸಾರ್ವಜನಿಕ ಕಲ್ಯಾಣ ಸೇರಿದಂತೆ ವಿವಿಧ ವಲಯಗಳನ್ನು ಒಳಗೊಂಡಿದ್ದು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಪ್ರಧಾನಮಂತ್ರಿಯವರು ದಮನ್ ನಲ್ಲಿ ನಮೋ (ಎನ್ ಎ ಎಂ ಒ) ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಮತ್ತು ನಮೋ ಆಸ್ಪತ್ರೆ ಸೇರಿದಂತೆ ಸುಮಾರು ₹1,340 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿ ಸಮರ್ಪಿಸಲಿದ್ದಾರೆ. ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಪ್ರಾದೇಶಿಕ ವಾಯು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಮತ್ತು ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸುಗಮಗೊಳಿಸಲಿದೆ. ದಮನ್ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾದ ನಮೋ (ಎನ್ ಎ ಎಂ ಒ) ಆಸ್ಪತ್ರೆಯು ಪ್ರತಿದಿನ ಸುಮಾರು 1,500 ಹೊರ   ರೋಗಿಗಳಿಗೆ ಸೇವೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲಿವೆ.

ಪ್ರಧಾನಮಂತ್ರಿಯವರು ಸುಮಾರು ₹1,630 ಕೋಟಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಪ್ರಮುಖ ಯೋಜನೆಗಳಲ್ಲಿ ಐಕಾನಿಕ್, ದಮನ್ ಕನ್ವೆನ್ಷನ್ ಸೆಂಟರ್ ಮತ್ತು ದಮನ್ನಲ್ಲಿರುವ ನಿಫ್ಟ್   ಕ್ಯಾಂಪಸ್ ಸೇರಿವೆ. ಈ ಯೋಜನೆಗಳು ಆಧುನಿಕ ಮೂಲಸೌಕರ್ಯಗಳನ್ನು ಬಲಪಡಿಸಲು, ಪ್ರವಾಸೋದ್ಯಮವನ್ನು ಉತ್ತೇಜಿಸಲು, ಹೂಡಿಕೆಯನ್ನು ಉತ್ತೇಜಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯಕವಾಗುವ ನಿರೀಕ್ಷೆ ಇದೆ.

ಪ್ರಧಾನಮಂತ್ರಿಯವರು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕಾಗಿ ಸುಮಾರು ₹885 ಕೋಟಿ ಮೌಲ್ಯದ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಕಲ್ಪೇನಿ ದ್ವೀಪ ಮತ್ತು ಕದ್ಮತ್ ದ್ವೀಪಗಳ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಬಂದರು ಸೌಲಭ್ಯಗಳ ಅಭಿವೃದ್ಧಿ ಸೇರಿದೆ. ಈ ಬಹುಪಯೋಗಿ ಜೆಟ್ಟಿಗಳ ಅಭಿವೃದ್ಧಿಯು 300 ಮೀಟರ್ ವರೆಗಿನ ಉದ್ದದ ಕ್ರೂಸ್ ಹಡಗುಗಳು ಸೇರಿದಂತೆ ದೊಡ್ಡ ಪ್ರಯಾಣಿಕರ ಹಡಗುಗಳ ವರ್ಷವಿಡೀ ತಂಗುವಿಕೆಯನ್ನು  ಸುಗಮಗೊಳಿಸುತ್ತದೆ. ಈ ಯೋಜನೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರಯಾಣಿಕ ಹಾಗು ಸರಕು ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತವೆ ಮತ್ತು ಮೀನು ನಿರ್ವಹಣೆ, ಇಂಧನ ವಿತರಣೆ, ಮಂಜಿನಗಡ್ಡಯ ಪೂರೈಕೆ ಮತ್ತು ದೋಣಿ ದುರಸ್ತಿಗೆ ಸಮಗ್ರ ಸೌಲಭ್ಯಗಳನ್ನು ಒದಗಿಸುತ್ತವೆ. ಈ ಉಪಕ್ರಮಗಳು ಕಡಲ ಸಂಪರ್ಕವನ್ನು ಬಲಪಡಿಸುತ್ತವೆ, ಸ್ಥಳೀಯ ಮೀನುಗಾರರ ಜೀವನೋಪಾಯವನ್ನು ಬೆಂಬಲಿಸುತ್ತವೆ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ ಮತ್ತು ದ್ವೀಪಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.

 

*****