Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೂರತ್ ಮತ್ತು ದಮನ್‌ ಭೇಟಿಯ ಪ್ರಮುಖಾಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಸೂರತ್ ಮತ್ತು ದಮನ್‌ ಭೇಟಿಯ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ. ಸೂರತ್ ಜನರೊಂದಿಗಿದ್ದುದು ಅದ್ಭುತ ಎಂದು ಹರ್ಷ ವ್ಯಕ್ತಪಡಿಸಿರುವ ಅವರು, ಈ ರೋಮಾಂಚಕ ನಗರದಿಂದ ಮಾತನಾಡುತ್ತಾ, ಭಾರತವನ್ನು ಸದೃಢ ಮತ್ತು ಸ್ವಾವಲಂಬಿಯಾಗಿಸುವ ತನ್ನ ಬದ್ಧತೆಯನ್ನು ದೇಶ ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ. 

ದಮನ್‌ ನಲ್ಲಿ ಉದ್ಘಾಟನೆಯಾದ ಅಭಿವೃದ್ಧಿ ಕಾರ್ಯಗಳು ಜನರ ಜೀವನವನ್ನು ಗಣನೀಯವಾಗಿ ಸುಧಾರಿಸಲಿವೆ ಎಂದು ಶ್ರೀ ಮೋದಿ ಗಮನಸೆಳೆದಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಭೇಟಿಯ ಸಂದರ್ಭದ ವಿವಿಧ ಕಾರ್ಯಕ್ರಮಗಳ ಪ್ರಮುಖ ಮುಖ್ಯಾಂಶಗಳು ಮತ್ತು ನೋಟಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಗಳು ಸರಣಿ ಎಕ್ಸ್ ಪೋಸ್ಟ್‌ಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ನಿನ್ನೆ ಸೂರತ್‌ ಜನರ ನಡುವೆ ಇದ್ದುದು ಅದ್ಭುತವಾಗಿತ್ತು. ಭಾರತವನ್ನು ಬಲಿಷ್ಠ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಈ ರೋಮಾಂಚಕ ನಗರದಿಂದ ನಾವು ಸಾಮೂಹಿಕವಾಗಿ ಪುನರುಚ್ಚರಿಸಿದ್ದೇವೆ.”

“ದಮನ್‌ ನಲ್ಲಿ ನಿನ್ನೆ ಉದ್ಘಾಟನೆಯಾದ ಅಭಿವೃದ್ಧಿ ಕಾರ್ಯಗಳು  ಅಲ್ಲಿನ ಜನರ ಜೀವನವನ್ನು ಗಣನೀಯವಾಗಿ ಸುಧಾರಿಸಲಿವೆ. ನಿನ್ನೆಯ ಕಾರ್ಯಕ್ರಮಗಳ ಕೆಲವು ಪ್ರಮುಖಾಂಶಗಳು ಇಲ್ಲಿವೆ…”

 

*****