Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗರೀಬ್ ಕಲ್ಯಾಣ ಮತ್ತು ಮಾನವ ಸಬಲೀಕರಣ ಕೇಂದ್ರೀಕೃತವಾದ 12 ವರ್ಷಗಳ ಪರಿವರ್ತನಾ ಉಪಕ್ರಮಗಳನ್ನು ಪ್ರಧಾನಮಂತ್ರಿ ಹೇಳಿದ್ದಾರೆ


ಕಳೆದ 12 ವರ್ಷಗಳಲ್ಲಿ ಭಾರತವು ಹಲವು ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಮತ್ತು ಈ ಎಲ್ಲಾ ಬದಲಾವಣೆಗಳ ಕೇಂದ್ರಬಿಂದು ಬಡವರು ಹಾಗೂ ದೀನದಲಿತರ ಕಲ್ಯಾಣವೇ ಆಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಸರ್ಕಾರವು ಯಾವಾಗಲೂ ‘ಅಂತ್ಯೋದಯ’ ತತ್ವದಿಂದ ಪ್ರೇರಿತವಾಗಿದೆ; ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾದ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಅದರ ಪ್ರಯೋಜನಗಳು ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸರ್ಕಾರದ ನಿರಂತರ ಪ್ರಯತ್ನವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.

ಜನ್ ಧನ್ ಖಾತೆಗಳು ಮತ್ತು ನೇರ ನಗದು ವರ್ಗಾವಣೆಯಿಂದ (ಡಿಬಿಟಿ) ಹಿಡಿದು ಸ್ವಚ್ಛ ಭಾರತ್, ಪಿಎಂ ಆವಾಸ್ ಯೋಜನೆ, ಜಲ ಜೀವನ್ ಮಿಷನ್, ಆಯುಷ್ಮಾನ್ ಭಾರತ್ ಸೇರಿದಂತೆ ಪ್ರತಿಯೊಂದು ಉಪಕ್ರಮವೂ ಜನರಿಗೆ ಗೌರವಯುತ ಜೀವನ ಮತ್ತು ಹೊಸ ಅವಕಾಶಗಳನ್ನು ಒದಗಿಸುವ ಸರಳ ಉದ್ದೇಶದಿಂದಲೇ ರೂಪಿತವಾಗಿವೆ ಎಂದು ಶ್ರೀ ಮೋದಿಯವರು ತಿಳಿಸಿದ್ದಾರೆ.

ಬಡವರ ಜೀವನಮಟ್ಟವನ್ನು ಸುಧಾರಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ನೇರ ನಗದು ವರ್ಗಾವಣೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಇಂದು ಸರ್ಕಾರಿ ನೆರವು ಜನರನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಹಾಗೂ ಪಾರದರ್ಶಕವಾಗಿ ತಲುಪುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಸೋರಿಕೆಗಳನ್ನು ತಡೆದಿದೆ, ಆಡಳಿತದ ದಕ್ಷತೆಯನ್ನು ಹೆಚ್ಚಿಸಿದೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಿದೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದ್ದಾರೆ, ಈ ಮೂಲಕ ‘ಗರೀಬ್ ಕಲ್ಯಾಣ್’ (ಬಡವರ ಕಲ್ಯಾಣ) ಯೋಜನೆಗಳು ಇಂದು ಮಾನವ ಸಬಲೀಕರಣ ಮತ್ತು ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡುವ ಒಂದು ಸಾಮೂಹಿಕ ಜನಾಂದೋಲನವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಕುರಿತು ಪ್ರಧಾನಮಂತ್ರಿಯವರು ಎಕ್ಸ್ (X) ನಲ್ಲಿನ ಸರಣಿ ಪೋಸ್ಟ್‌ ಗಳನ್ನು ಹಂಚಿಕೊಂಡಿದ್ದಾರೆ:

“ಕಳೆದ 12 ವರ್ಷಗಳಲ್ಲಿ ಭಾರತವು ಹಲವು ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಮತ್ತು ಈ ಬದಲಾವಣೆಗಳ ಕೇಂದ್ರಬಿಂದು ಬಡವರು ಹಾಗೂ ದೀನದಲಿತರ ಕಲ್ಯಾಣವೇ ಆಗಿದೆ. ನಾವು ಯಾವಾಗಲೂ ‘ಅಂತ್ಯೋದಯ’ ತತ್ವದಿಂದ ಪ್ರೇರಿತರಾಗಿದ್ದೇವೆ; ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾದ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಅದರ ಪ್ರಯೋಜನಗಳು ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ನಮ್ಮ ನಿರಂತರ ಪ್ರಯತ್ನವಾಗಿದೆ. ಜನಧನ್ ಖಾತೆಗಳು ಮತ್ತು ನೇರ ನಗದು ವರ್ಗಾವಣೆಯಿಂದ ಹಿಡಿದು ಸ್ವಚ್ಛ ಭಾರತ್, ಪಿಎಂ ಆವಾಸ್ ಯೋಜನೆ, ಜಲ ಜೀವನ್ ಮಿಷನ್, ಆಯುಷ್ಮಾನ್ ಭಾರತ್ ಸೇರಿದಂತೆ ಪ್ರತಿಯೊಂದು ಉಪಕ್ರಮವೂ ಜನರಿಗೆ ಗೌರವಯುತ ಜೀವನ ಮತ್ತು ಹೊಸ ಅವಕಾಶಗಳನ್ನು ಒದಗಿಸುವ ಸರಳ ಉದ್ದೇಶದಿಂದಲೇ ರೂಪಿತವಾಗಿವೆ. #12YearsOfGaribKalyan”

“ಬಡವರ ಜೀವನಮಟ್ಟವನ್ನು ಸುಧಾರಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಿರುವುದು ಸಹ ಅತೀವ ಸಂತಸ ತಂದಿದೆ. ನೇರ ನಗದು ವರ್ಗಾವಣೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಇಂದು ಸರ್ಕಾರಿ ನೆರವು ಜನರನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಹಾಗೂ ಪಾರದರ್ಶಕವಾಗಿ ತಲುಪುತ್ತಿದೆ. ಇದು ಸೋರಿಕೆಗಳನ್ನು ತಡೆದಿದೆ, ಆಡಳಿತದ ದಕ್ಷತೆಯನ್ನು ಹೆಚ್ಚಿಸಿದೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಿದೆ. ‘ಗರೀಬ್ ಕಲ್ಯಾಣ್’ ಅನ್ನು ಮುಂದುವರಿಸುವ ಪ್ರಯಾಣವು ಮಾನವ ಸಬಲೀಕರಣದ ಕಡೆಗೆ ಮತ್ತು ವಿಕಸಿತ  ಭಾರತದ ನಮ್ಮ ಕನಸನ್ನು ನನಸಾಗಿಸುವ ಕಡೆಗೆ ಜನಾಂದೋಲನವಾಗಿ ಮಾರ್ಪಟ್ಟಿದೆ. #12YearsOfGaribKalyan”

 

*****