ಪಿಎಂಇಂಡಿಯಾ
ಭಾರತದ ಪ್ರಜಾಪ್ರಭುತ್ವದಡಿ ಅತ್ಯಂತ ದೀರ್ಘಾವಧಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಚುನಾಯಿತ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜಾಗತಿಕ ನಾಯಕರು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಯವರ ಪರಿವರ್ತನಾತ್ಮಕ ಆಡಳಿತ, ಜಾಗತಿಕ ದಕ್ಷಿಣಕ್ಕಾಗಿ ಅವರ ಪ್ರತಿಪಾದನೆ ಮತ್ತು ಸಮಗ್ರ ಮತ್ತು ಆರ್ಥಿಕವಾಗಿ ಸಕ್ರಿಯ ಭಾರತದ ಅವರ ದೂರದೃಷ್ಟಿಗೆ ಜಗತ್ತಿನಾದ್ಯಂತದ ವಿಶ್ವ ನಾಯಕರು ಗೌರವ ಸಲ್ಲಿಸಿದ್ದಾರೆ.
ಶ್ರೀಲಂಕಾದ ಅಧ್ಯಕ್ಷರಾದ ಗೌರವಾನ್ವಿತ ಅನುರ ಕುಮಾರ ದಿಸಾನಾಯಕ ಅವರು 2026ರ ಜೂನ್ 8 ರಂದು ಪ್ರಧಾನಮಂತ್ರಿಯವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಶ್ರೀಲಂಕಾ ಸರ್ಕಾರ ಮತ್ತು ಜನರ ಆತ್ಮೀಯ ಅಭಿನಂದನೆಗಳನ್ನು ತಿಳಿಸಿದ್ದಾರೆ. “ಈ ಮೈಲಿಗಲ್ಲು ನಿಮ್ಮ ಅಧಿಕಾರದ ವರ್ಷಗಳಿಗೆ ಮಾತ್ರವಲ್ಲ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ನಿಮ್ಮ ನಾಯಕತ್ವದಲ್ಲಿ ಪದೇ ಪದೇ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೂ ಸಾಕ್ಷಿಯಾಗಿದೆ’’. ಭಾರತದ ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯನ್ನು ಅಧ್ಯಕ್ಷರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯು ಶ್ರೀಲಂಕಾ ಸೇರಿದಂತೆ ಭಾರತದ ಗಡಿಗಳನ್ನು ಮೀರಿ ಅನೇಕರಿಗೆ ಸ್ಫೂರ್ತಿ ನೀಡಿದೆ ಎಂದು ಉಲ್ಲೇಖಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರ ಏಪ್ರಿಲ್ 4ರಿಂದ 6 ರವರೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು, ಇದು ದ್ವೀಪ ರಾಷ್ಟ್ರಕ್ಕೆ ಅವರ ನಾಲ್ಕನೇ ಭೇಟಿಯಾಗಿತ್ತು, ಈ ಸಮಯದಲ್ಲಿ ಅವರಿಗೆ ವಿದೇಶಿ ಗಣ್ಯರಿಗೆ ನೀಡಲಾಗುವ ಶ್ರೀಲಂಕಾದ ಅತ್ಯುನ್ನತ ನಾಗರಿಕ ಗೌರವವಾದ ಮಿತ್ರ ವಿಭೂಷಣವನ್ನು ನೀಡಲಾಯಿತು. ಈ ಭೇಟಿಯು ಭಾರತದ ನೆರೆಹೊರೆ ಮೊದಲು ನೀತಿಯನ್ನು ಪುನರುಚ್ಚರಿಸಿತು, 2022 ರಲ್ಲಿ ಶ್ರೀಲಂಕಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಮಯದಲ್ಲಿ ಭಾರತದ ಪ್ರಮುಖ ಬೆಂಬಲ ಸೇರಿ ಭಾರತದ ದೃಢ ಪಾಲುದಾರಿಕೆಯ ಅತ್ಯಂತ ಹತ್ತಿರದ ಫಲಾನುಭವಿಗಳಲ್ಲಿ ಶ್ರೀಲಂಕಾವೂ ಒಂದು ಎಂದು ಹೇಳಿದ್ದಾರೆ.
ಪಪುವಾ ನ್ಯೂಗಿನಿಯಾದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಜೇಮ್ಸ್ ಮರಾಪೆ ಅವರು ತಮ್ಮ ವೈಯಕ್ತಿಕ ವೀಡಿಯೊ ಸಂದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ”ನಾಯಕತ್ವದ ಮಾದರಿ ಮತ್ತು ಅತ್ಯುತ್ತಮ ಉದಾಹರಣೆ’’ ಎಂದು ಬಣ್ಣಿಸಿದ್ದಾರೆ. ಅವರು ಹೀಗೆ ಹೇಳಿದ್ದಾರೆ ”ಇಂದು 200 ಮಿಲಿಯನ್‌ಗಿಂತಲೂ ಅಧಿಕ ಜನರನ್ನು ಬಡತನದಿಂದ ಉತ್ತಮ ಜೀವನಕ್ಕೆ ಮೇಲೆತ್ತುವುದು ಅದ್ಭುತ ಸಾಧನೆಯಾಗಿದೆ’’. ಪ್ರಧಾನಮಂತ್ರಿ ಶ್ರೀ ಶ್ರೀ ಮರಾಪೆ ಅವರು ಪಪುವಾ ನ್ಯೂಗಿನಿಯಾದ ಆತ್ಮೀಯ ಸ್ನೇಹ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 2023ರ ಮೇ ನಲ್ಲಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕಾಗಿ ಮೂರನೇ ವೇದಿಕೆ (FIPIC-III) ಶೃಂಗಸಭೆಗಾಗಿ ಭಾರತೀಯ ಪ್ರಧಾನಮಂತ್ರಿಯೊಬ್ಬರು ಪಪುವಾ ನ್ಯೂಗಿನಿಯಾಗೆ ನೀಡಿದ ಐತಿಹಾಸಿಕ ಭೇಟಿಯಾಗಿದ್ದು, ಅದು ಪೆಸಿಫಿಕ್ ದ್ವೀಪ ರಾಷ್ಟ್ರಗಳೊಂದಿಗೆ ಭಾರತದ ಪಾಲುದಾರಿಕೆಯಲ್ಲಿ ಒಂದು ಮಹತ್ವದ ಹೆಗ್ಗುರುತಾಗಿದೆ. ಅವರ ಭೇಟಿಯು ಜಾಗತಿಕ ದಕ್ಷಿಣದ ಬದ್ಧ ಪಾಲುದಾರನಾಗಿ ಭಾರತದ ಪಾತ್ರವನ್ನು ಒತ್ತಿಹೇಳಿತು ಎಂದು ತಿಳಿಸಿದ್ದಾರೆ.
ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿಭಾರತವು ಜಾಗತಿಕ ವಿಷಯಗಳಲ್ಲಿ ಪ್ರಮುಖ ಧ್ವನಿಯಾಗಿ ವಿಕಸನಗೊಂಡಿದೆ” ಎಂದು ಉಲ್ಲೇಖಿಸಿದರು. 1.4 ಶತಕೋಟಿ ಜನರ ರಾಷ್ಟ್ರವನ್ನು ಮೂರು ಅವಧಿಗಳಲ್ಲಿ ಮುನ್ನಡೆಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅತ್ಯಂತ ವಿನಯದ ಆರಂಭದ ಪಯಣವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು ಮತ್ತು ವಿದೇಶಾಂಗ ನೀತಿ, ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಭಾರತದ ಮಹತ್ವದ ಸಾಧನೆಗಳನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ 2025ರ ಜುಲೈ 3-4 ರಂದು ಟ್ರಿನಿಡಾಡ್ ಮತ್ತು ಟೊಬೆಗೊಗೆ ಮಹತ್ವದ ಭೇಟಿ ನೀಡಿದ್ದರು, ಇದು 26 ವರ್ಷಗಳಲ್ಲಿ ಭಾರತೀಯ ಪ್ರಧಾನಮಂತ್ರಿಯೊಬ್ಬರು ಮಾಡಿದ ಮೊದಲ ದ್ವಿಪಕ್ಷೀಯ ಭೇಟಿಯಾಗಿದ್ದು, ಇದು ಕಾಕತಾಳೀಯವೆಂಬಂತೆ ಟ್ರಿನಿಡಾಡ್ ಮತ್ತು ಟೊಬೆಗೊಗೆ ಭಾರತೀಯ ವಲಸಿಗರ ಆಗಮನದ 180ನೇ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಯಿತು ಎಂದು ತಿಳಿಸಿದ್ದಾರೆ.
*****