Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದ ಪ್ರಮುಖಾಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದ ಪ್ರಮುಖಾಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್‌ ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣದ ಪ್ರಮುಖಾಂಶಗಳನ್ನು ಹಂಚಿಕೊಂಡಿದ್ದಾರೆ.

ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“ಭಾರತಕ್ಕೆ ಬನ್ನಿ.

ನಮ್ಮೊಂದಿಗೆ ಕೆಲಸ ಮಾಡಿ.

ಭಾರತದಲ್ಲಿ ವಿನ್ಯಾಸ ಮಾಡಿ.

ಭಾರತದಲ್ಲಿ ಅಭಿವೃದ್ಧಿಪಡಿಸಿ.

ಮತ್ತು ಜಗತ್ತಿಗೆ ಪರಿಹಾರಗಳನ್ನು ನೀಡಿ.

@BharatInnov2026”

“ನಾವೀನ್ಯತೆಯು ಭಾರತದ ಡಿಎನ್‌ಎ ದಲ್ಲಿದೆ.

ಭಾರತದ ಯುವಕರು ವಿವಿಧ ಕ್ಷೇತ್ರಗಳಲ್ಲಿ ನವೀನ ಆವಿಷ್ಕಾರ ಮಾಡುತ್ತಿದ್ದಾರೆ. ಜಾಗತಿಕ ಸವಾಲುಗಳಿಗೂ ಅವರು ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ.

@BharatInnov2026”

“ಇಂದು, ಜಗತ್ತು ವಿಶ್ವಾಸಾರ್ಹ, ಎಲ್ಲರನ್ನೊಳಗೊಂಡ, ಮಾನವ ಕೇಂದ್ರಿತ ಮತ್ತು ಜಾಗತಿಕ ಒಳಿತಿಗೆ ಬದ್ಧವಾದ ತಂತ್ರಜ್ಞಾನಗಳೆಡೆಗೆ ನೋಡುತ್ತಿದೆ.

ಇಂತಹ ಕಾಲಘಟ್ಟದಲ್ಲಿ, ಭಾರತದ ಆದ್ಯತೆ ಸ್ಪಷ್ಟವಾಗಿದೆ… ಮಾನವೀಯತೆಗಾಗಿ ತಂತ್ರಜ್ಞಾನ ಮತ್ತು ಮಾನವ ಕೇಂದ್ರಿತ ನಾವೀನ್ಯತೆ.

@BharatInnov2026”

“ವರ್ಧಿತ ವೇಗ ಮತ್ತು ಪ್ರಮಾಣದೊಂದಿಗೆ ಭಾರತ್ ಇನ್ನೋವೇಟ್ಸ್. 

ಸುಸ್ಥಿರ ಭವಿಷ್ಯಕ್ಕಾಗಿ ಭಾರತ್ ಇನ್ನೋವೇಟ್ಸ್.

ಮತ್ತು ಇಡೀ ವಿಶ್ವಕ್ಕಾಗಿ ಭಾರತ್ ಇನ್ನೋವೇಟ್ಸ್.

@BharatInnov2026”

 

*****