Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುವ ಸಬಲೀಕರಣ ಮತ್ತು ಪಿಎಂವಿಬಿಆರ್ ವೈ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದಾರೆ.

ಅಸಂಖ್ಯಾತ ಅವಕಾಶಗಳೊಂದಿಗೆ ಯುವಕರನ್ನು ಸಬಲೀಕರಣಗೊಳಿಸುವುದು ವಿಕಸಿತ ಭಾರತದ ಪ್ರಮುಖ ದೃಷ್ಟಿಕೋನವಾಗಿದೆ ಎಂದು ಲೇಖನವು ಬಿಂಬಿಸುತ್ತದೆ. ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ (ಪಿ ಎಂ ವಿ ಬಿ ಆರ್ ವೈ ) ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಪರಿವರ್ತನೆಯನ್ನು ಉತ್ತೇಜಿಸಲು ಸಜ್ಜಾಗಿದೆ, ಜತೆಗೆ ಯುವ ಮನಸ್ಸುಗಳು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಬಗ್ಗೆ ಎಕ್ಸ್  ನಲ್ಲಿ ಹಂಚಿಕೊಂಡಿದೆ;

“ಅಸಂಖ್ಯಾತ ಅವಕಾಶಗಳೊಂದಿಗೆ ಯುವಕರನ್ನು ಸಬಲೀಕರಣಗೊಳಿಸುವುದು ವಿಕಸಿತ ಭಾರತದ ಪ್ರಮುಖ ದೃಷ್ಟಿಕೋನವಾಗಿದೆ. ಪಿ ಎಂ ವಿ ಬಿ ಆರ್ ವೈ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಪರಿವರ್ತನೆಯನ್ನು ಉತ್ತೇಜಿಸಲು ಸಜ್ಜಾಗಿದೆ. ಈ ಯೋಜನೆಯು ಯುವ ಮನಸ್ಸುಗಳು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ!

ಕೇಂದ್ರ ಸಚಿವರಾದ ಡಾ.@mansukhmandviya ಅವರು ಓದಲೇಬೇಕಾದ ಲೇಖನ.”

 

*****