ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಪೊರಕ ವ್ಯವಸ್ಥೆಯ ಅಭಿವೃದ್ಧಿಗಾಗಿ ಸೆಮಿಕಾನ್ 2.0 ಗೆ ಅನುಮೋದನೆ ನೀಡಿದೆ, ಅದರ ಒಟ್ಟು ಬಜೆಟ್ 1,27,500 ಕೋಟಿ ರೂ.
ಭಾರತದಲ್ಲಿ ಸೆಮಿಕಂಡಕ್ಟರ್ ವಲಯಕ್ಕೆ ನಿರಂತರ ಮತ್ತು ದೀರ್ಘಕಾಲ ಬೆಂಬಲದ ಅಗತ್ಯತೆಯನ್ನು ಗುರುತಿಸಿ ಮತ್ತು ಸೆಮಿಕಾನ್1.0 ಅಡಿಯಲ್ಲಿ ವೇಗ ಪಡೆದುಕೊಂಡಿರುವ ಚಟುವಟಿಕೆಗಳನ್ನು ಮುಂದುವರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಸೆಮಿಕಾನ್ 2.0 ನಮ್ಮ ದೇಶವನ್ನು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಇರಿಸುವ ಕಡೆಗೆ ಸರ್ಕಾರದ ಬದ್ಧತೆ ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿದೆ.
ಸೆಮಿಕಾನ್ 2.0 ಈ ಕೆಳಗಿನ ಆರು ಸ್ತಂಭಗಳ ಮೇಲೆ ಸೆಮಿಕಾನ್ ಪೂರಕ ವ್ಯವಸ್ಥೆಯನ್ನು ಸಮಗ್ರವಾಗಿ ನಿರ್ಮಿಸುವ ಗುರಿ ಹೊಂದಿದೆ:
ಮೊದಲ ಸ್ತಂಭ: ವಿನ್ಯಾಸ: ಸೆಮಿಕಾನ್ 2.0 ಚಿಪ್ ವಿನ್ಯಾಸದಲ್ಲಿನ ಆರಂಭಿಕ ಯಶಸ್ಸಿನ ಮೇಲೆ ಅವಲಂಬಿತವಾಗಿದೆ. 105 ಸ್ಟಾರ್ಟ್‌ಅಪ್‌ಗಳು ಈಗಾಗಲೇ ಚಿಪ್‌ಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿರುವುದರಿಂದ, ವಿನ್ಯಾಸ ಪೂರಕ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುವತ್ತ ಗಮನ ಹರಿಸಲಾಗಿದೆ. ಅಲ್ಲದೆ ಕಾರ್ಯತಂತ್ರ ಮತ್ತು ವಾಣಿಜ್ಯ ಉತ್ಪನ್ನಗಳ ಅಭಿವೃದ್ಧಿಗಾಗಿ ಬಿಲ್ಡಿಂಗ್ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಸೆಮಿಕಾನ್ 2.0 ಅಡಿಯಲ್ಲಿ ಈ ವಿಧಾನದೊಂದಿಗೆ ಐಪಿಗಳು, ಚಿಪ್‌ಗಳ ವಿನ್ಯಾಸಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಗುರಿಯಿದೆ. ಸೆಮಿಕಾನ್ 2.0 ಅಡಿಯಲ್ಲಿನ ಕೆಲಸವು ಭಾರತವನ್ನು ಪ್ರಮುಖ ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಐಪಿ ದೇಶವನ್ನಾಗಿ ಇರಿಸುತ್ತದೆ.
ಎರಡನೇ ಆಧಾರಸ್ತಂಭ: ಯಂತ್ರಗಳು ಮತ್ತು ಸಾಮಗ್ರಿಗಳು: ಸೆಮಿಕಂಡಕ್ಟರ್ ಗಳನ್ನು ತಯಾರಿಸಲು ಅಗತ್ಯವಾದ ವಸ್ತುಗಳು, ರಾಸಾಯನಿಕಗಳು ಮತ್ತು ಅನಿಲಗಳ ಯಂತ್ರಗಳ ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಕಂಪನಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಇದು ಸೆಮಿಕಂಡಕ್ಟರ್ ಉದ್ಯಮದ ಸುಸ್ಥಿರ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಿದೆ. ಇದು ನಮ್ಮ ದೇಶದಲ್ಲಿ ನಿಖರ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಪಡಿಸಲೂ ಸಹ ಸಹಾಯ ಮಾಡುತ್ತದೆ.
ಮೂರನೇ ಸ್ತಂಭ: ಹೆಚ್ಚಿನ ಫ್ಯಾಬ್‌ಗಳನ್ನು ಸ್ಥಾಪಿಸುವುದು: ಮೊದಲ ಫ್ಯಾಬ್ ಅನ್ನು 2028 ರಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿರುವುದರಿಂದ ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರದಲ್ಲಿ ಜಗತ್ತು ಹೆಚ್ಚಿನ ವಿಶ್ವಾಸವನ್ನು ತೋರಿಸುತ್ತಿದೆ. ಭಾರತಕ್ಕೆ ಬಂದು ಚಿಪ್‌ಗಳನ್ನು ತಯಾರಿಸಲು ಫ್ಯಾಬ್‌ಗಳನ್ನು ಸ್ಥಾಪಿಸಲು ಹೆಚ್ಚಿನ ತಯಾರಕರನ್ನು ಆಕರ್ಷಿಸಲು ಪ್ರಯತ್ನ ಮಾಡಲಾಗುವುದು. ಅದರಲ್ಲಿ ಸಿಲಿಕಾನ್ ಫ್ಯಾಬ್‌ಗಳು, ಸಂಯುಕ್ತ ಸೆಮಿಕಂಡಕ್ಟರ್ ಫ್ಯಾಬ್‌ಗಳು, ಡಿಸ್ಕ್ರೀಟ್ ಕಾಂಪೊನೆಂಟ್ ಫ್ಯಾಬ್‌ಗಳು, ಡಿಸ್ಪ್ಲೇ ಫ್ಯಾಬ್‌ಗಳು ಇತ್ಯಾದಿ ಸೇರಿವೆ.
ನಾಲ್ಕನೇ ಸ್ತಂಭ: ATMP/OSAT ಉದ್ಯಮವನ್ನು ಮತ್ತಷ್ಟು ಬಲಪಡಿಸುವುದು: ATMP ಘಟಕಗಳ ಯಶಸ್ಸಿನೊಂದಿಗೆ ATMP/OSAT ಘಟಕಗಳನ್ನು ಸ್ಥಾಪಿಸಲು ಜಗತ್ತು ಈಗ ಭಾರತವನ್ನು ಪರ್ಯಾಯ ಸ್ಥಳವಾಗಿ ನೋಡುತ್ತಿದೆ. ಭಾರತಕ್ಕೆ ಕೆಲವು ಅತ್ಯಾಧುನಿಕ ATMP ತಂತ್ರಜ್ಞಾನಗಳನ್ನು ತಲುಪಿಸುವತ್ತ ಗಮನಹರಿಸಿ ಅವುಗಳನ್ನು ಸಕ್ರಿಯವಾಗಿ ಪ್ರೋತ್ಸಾಹಿಸಲಾಗುತ್ತದೆ.
ಐದನೇ ಸ್ತಂಭ: ಸಂಶೋಧನೆ ಮತ್ತು ಅಭಿವೃದ್ಧಿ: 28nm-110nm ನೋಡ್‌ನೊಂದಿಗೆ ಸೆಮಿಕಂಡಕ್ಟರ್ ಪಯಣವು ಆರಂಭವಾಗಿದೆ. ಈಗ ಭಾರತದೊಳಗೆ ಮತ್ತು ಹೊರಗಿನ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರಗಳ ಸಹಯೋಗದೊಂದಿಗೆ ಹೆಚ್ಚು ಸುಧಾರಿತ ನೋಡ್‌ಗಳು ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗುತ್ತಿದೆ.
ಆರನೇ ಸ್ತಂಭ: ಪ್ರತಿಭೆಗಳನ್ನುಬೆಳೆಸುವುದು: 315 ವಿಶ್ವವಿದ್ಯಾನಿಲಯಗಳು ಇತ್ತೀಚಿನ EDA ಸಾಧನಗಳನ್ನು ಬಳಸಿಕೊಂಡು ಸಂಕೀರ್ಣ ಚಿಪ್ ವಿನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ಸುಮಾರು 68,000 ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಮತ್ತು ಕಾಲೇಜಿನಲ್ಲಿದ್ದಾಗ ತರಬೇತಿಯ ಮಟ್ಟ ಹೆಚ್ಚಿಸಲಾಗುವುದು. ಅಲ್ಲದೆ, ಉದ್ಯಮವು ಕ್ಲೀನ್ ರೂಮ್, ಫ್ಯಾಬ್ ನಿರ್ಮಾಣ ಮತ್ತು ಇತರ ಪರಿಸರ ವ್ಯವಸ್ಥೆಯ ತರಬೇತಿಯನ್ನು ಆಳಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತದೆ.
ಅಲ್ಲದೆ, ಸೆಮಿಕಾನ್ 2.0 ಎಲ್ಲಾ ವಲಯಗಳಲ್ಲಿ ಆರ್ಥಿಕ ಬೆಳವಣಿಗೆ ಬೆಂಬಲಿಸುತ್ತದೆ, ವರ್ಧಿತ ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವದ ಮೂಲಕ ರಾಷ್ಟ್ರೀಯ ಭದ್ರತೆ ಬಲವರ್ಧನೆಗೊಳಿಸುತ್ತದೆ ಮತ್ತು ನಿರ್ಣಾಯಕ ವಲಯಗಳಲ್ಲಿ ತಾಂತ್ರಿಕ ನಾಯಕತ್ವವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಸಂಪೂರ್ಣ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ವಿಧಾನವು ಭಾರತದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಗೆ ವೇಗ ನೀಡುತ್ತದೆ.
ಐಎಸ್ ಎಂ 1.0ನಲ್ಲಿ ಆಗಿರುವ ಪ್ರಗತಿ:
*****
India’s semiconductor journey gets even more vibrant!
— Narendra Modi (@narendramodi) July 15, 2026
The Cabinet has approved Semicon 2.0 with an outlay of Rs. 1,27,500 crore, reaffirming our long-term commitment to making India a global centre for semiconductor design, manufacturing and innovation. Powered by our youth,…