ಪಿಎಂಇಂಡಿಯಾ
ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ.
ಹರಿಯಾಣದ ರಾಜ್ಯಪಾಲ ಶ್ರೀ ಅಸಿಮ್ ಘೋಷ್ ಜೀ, ಜನಪ್ರಿಯ ಮತ್ತು ಉತ್ಸಾಹಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜೀ, ಹಾಜರಿರುವ ಇತರ ಸಾರ್ವಜನಿಕ ಪ್ರತಿನಿಧಿಗಳು ಮತ್ತು ತಂತ್ರಜ್ಞಾನದ ಮೂಲಕ ಅನೇಕ ಸ್ಥಳಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹರಿಯಾಣದ ನನ್ನ ಎಲ್ಲಾ ಪ್ರೀತಿಯ ಸಹೋದರ ಸಹೋದರಿಯರೆ !.
ಇವೆಲ್ಲ ಇಲ್ಲಿ ತರಲಾದ ಕೆಲವು ಫೋಟೋಗಳು – ದಯವಿಟ್ಟು ಅವುಗಳನ್ನು ಸಂಗ್ರಹಿಸಿ, ಇಲ್ಲದಿದ್ದರೆ ಹಿಂದೆ ಕುಳಿತಿರುವವರು ನೋಡಲು ಸಾಧ್ಯವಾಗುವುದಿಲ್ಲ. ಎಸ್ಪಿಜಿ ಸಿಬ್ಬಂದಿ, ದಯವಿಟ್ಟು ಅವುಗಳನ್ನು ಸಂಗ್ರಹಿಸಿ. ಧನ್ಯವಾದಗಳು, ಸಹೋದರ, ಅಂತಹ ಸುಂದರವಾದ ರೇಖಾಚಿತ್ರಗಳನ್ನು ತಂದಿದ್ದಕ್ಕಾಗಿ. ಅಲ್ಲಿ, ಒಬ್ಬ ಪುಟ್ಟ ಹುಡುಗಿ ಕೂಡ ಏನನ್ನೋ ತಂದಿದ್ದಾಳೆ – ದಯವಿಟ್ಟು ಅದನ್ನು ಸಂಗ್ರಹಿಸಿ. ಇಲ್ಲಿಯೂ ಸಹ, ಇಬ್ಬರು ಮಹನೀಯರು ಗೋಚರಿಸುತ್ತಾರೆ. ಮತ್ತು ಈಗ, ಎಲ್ಲರೂ ದಯವಿಟ್ಟು ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಪ್ರೀತಿಗಾಗಿ, ನಿಮ್ಮ ಕಲಾತ್ಮಕ ಅರ್ಪಣಾ ಭಾವಕ್ಕಾಗಿ/ಭಕ್ತಿಗಾಗಿ, ನಾನು ನಿಮ್ಮೆಲ್ಲರಿಗೂ ಋಣಿ.
ಸ್ನೇಹಿತರೇ,
ಈ ಅದ್ಭುತ ಭವ್ಯ ಜಿಂದ್ ಭೂಮಿಯಿಂದ, ನಾನು ನಿಮ್ಮೆಲ್ಲರನ್ನೂ ನನ್ನ ರಾಮ-ರಾಮ ಎನ್ನುವ ಮೂಲಕ ಸ್ವಾಗತಿಸುತ್ತೇನೆ! ಈ ಪವಿತ್ರ ಮಣ್ಣಿಗೆ ಬರುವುದೆಂದರೆ ನನ್ನ ಹೃದಯವು ಸಂತೋಷದಿಂದ ತುಂಬುತ್ತದೆ. ಇದು ಸಾಮಾನ್ಯ ಭೂಮಿಯಲ್ಲ – ಇದು ಇತಿಹಾಸ, ಶೌರ್ಯ, ನಂಬಿಕೆ ಮತ್ತು ಹೆಮ್ಮೆಯ ಭೂಮಿ. ಶಕ್ತಿ ಪೀಠ ಮಾತಾ ಜಯಂತಿಯ ಆಶೀರ್ವಾದಗಳು ಈ ನಗರದ ಮೇಲೆ ಸದಾ ಇರುತ್ತವೆ. ನನಗೆ, ಜಿಂದ್ಗೆ ಬರುವುದು ಹಳೆಯ ನೆನಪುಗಳಿಗೆ ಒಂದು ಕಿಟಕಿಯನ್ನು ತೆರೆದಂತೆ. ಇಂದು ನಾನು ಇಲ್ಲಿ ಅನೇಕ ಪರಿಚಿತ ಮುಖಗಳನ್ನು ನೋಡುತ್ತಿದ್ದೇನೆ. ನಾನು ಅವರ ಸ್ಕೂಟರ್ಗಳಲ್ಲಿ ಇಲ್ಲಿಗೆ ಬರುತ್ತಿದ್ದೆ ಎಂದು ಅನೇಕ ಜನರು ಹೇಳಿಕೊಳ್ಳುತ್ತಾರೆ. ದಶಕಗಳ ಹಿಂದೆ, ನಾನು ಮೊದಲು ಸಂಘಟನಾ ಕೆಲಸಕ್ಕಾಗಿ ಜಿಂದ್ಗೆ ಬಂದಿದ್ದೇನೆ. ಆಗ ನೀವು ನನಗೆ ನೀಡಿದ ಪ್ರೀತಿ ಮತ್ತು ಆದರವನ್ನು ನಾನು ಎಂದಿಗೂ ಮರೆತಿಲ್ಲ. ಮುರ್ರಾ ಎಮ್ಮೆಯ ಹಾಲು, ಮೊಸರು ಮತ್ತು ತುಪ್ಪ, ಜಿಂದ್ನ ದೇಸಿ ಬುರಾ ಮತ್ತು ಇಲ್ಲಿನ ಘೇವರ್ – ಇವು ಜಿಂದ್ನೊಂದಿಗೆ ಶಾಶ್ವತವಾಗಿ ಜೋಡಣೆಗೊಂಡಿರುವ ನೆನಪುಗಳು.
ಸ್ನೇಹಿತರೇ,
ಈ ವರ್ಷಗಳಲ್ಲಿ, ಜಿಂದ್ನ ತುಪ್ಪ ಮತ್ತು ಘೇವರ್ ಬದಲಾಗಿಲ್ಲ, ಆದರೆ ಜಿಂದ್ನ ಚೈತನ್ಯವು ರೂಪಾಂತರಗೊಂಡಿದೆ. ಇಂದು, ಜಿಂದ್ ಬಿಜೆಪಿ-ಎನ್ಡಿಎಯ ಉತ್ತಮ ಆಡಳಿತಕ್ಕೆ ಮಾದರಿಯ ರೂಪಕವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಇಡೀ ಹರಿಯಾಣ ಅಭಿವೃದ್ಧಿಯ ಹೊಸ ಹಾದಿಯತ್ತ ಸಾಗಿದೆ. ಇಂದಿನ ಕಾರ್ಯಕ್ರಮವು ಡಬಲ್-ಎಂಜಿನ್ ಬಿಜೆಪಿ ಸರ್ಕಾರದ ಈ ಧ್ಯೇಯಕ್ಕೆ ಹೊಸ ಶಕ್ತಿಯನ್ನು ತುಂಬುತ್ತಿದೆ.
ಸ್ನೇಹಿತರೇ,
ಇಂದು, ಜಿಂದ್ ಮತ್ತು ಹರಿಯಾಣದ ಹೆಸರು ಇತಿಹಾಸದ ಪುಟಗಳಲ್ಲಿ ಕೆತ್ತಲ್ಪಟ್ಟಿದೆ. ಇಲ್ಲಿಂದ, ರಾಷ್ಟ್ರವು ತನ್ನ ಮೊದಲ ಹೈಡ್ರೋಜನ್ ರೈಲು ಪಡೆದುಕೊಂಡಿದೆ.
ನಿಮಗೆ ನೆನಪಿರಬಹುದು, ಸ್ನೇಹಿತರೇ,
ಭಾರತದಲ್ಲಿ ಮೊದಲ ರೈಲು ಈಗ ಮುಂಬೈ ಎಂದು ಕರೆಯಲ್ಪಡುವ ಬಾಂಬೆ ಮತ್ತು ಥಾಣೆ ನಡುವೆ ಓಡಿತು ಎಂದು ನಾವು ಇನ್ನೂ ಓದಿದ್ದೇವೆ ಮತ್ತು ಕೇಳಿದ್ದೇವೆ. ಅದೇ ರೀತಿ, ಭವಿಷ್ಯದಲ್ಲಿ ಹೈಡ್ರೋಜನ್ ರೈಲಿನ ಬಗ್ಗೆ ಉಲ್ಲೇಖಿಸಿದಾಗಲೆಲ್ಲಾ, ಜಿಂದ್, ಸೋನಿಪತ್ ಮತ್ತು ಹರಿಯಾಣದ ಹೆಸರುಗಳು ಖಂಡಿತವಾಗಿಯೂ ನೆನಪಿಗೆ ಬರುತ್ತವೆ. ಭಾರತೀಯ ರೈಲ್ವೆಯ ಆಧುನೀಕರಣದ ಈ ಮಹತ್ತರ ಹೆಜ್ಜೆಗಾಗಿ ನಾನು ನಿಮ್ಮೆಲ್ಲರಿಗೂ, ಇಡೀ ರಾಷ್ಟ್ರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದು, ₹14,000 ಕೋಟಿಗೂ ಹೆಚ್ಚಿನ ಯೋಜನೆಗಳನ್ನು ಹರಿಯಾಣಕ್ಕೂ ನೀಡಲಾಗಿದೆ. ಇವುಗಳಲ್ಲಿ ಅನೇಕ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳು, ನಮ್ಮ ಪರಂಪರೆಗೆ ಸಂಬಂಧಿಸಿದ ಯೋಜನೆಗಳು ಮತ್ತು ಹರಿಯಾಣಕ್ಕೆ ಸೇವೆ ಸಲ್ಲಿಸಲು ಮೀಸಲಾಗಿರುವ ಎರಡು ಹೊಸ ವೈದ್ಯಕೀಯ ಕಾಲೇಜುಗಳು ಸೇರಿವೆ. ಭಿವಾನಿಯಲ್ಲಿ, ಪಂಡಿತ್ ನೇಕಿ ರಾಮ್ ಶರ್ಮಾ ವೈದ್ಯಕೀಯ ಕಾಲೇಜು, ಮತ್ತು ನಾರ್ನೌಲ್ನಲ್ಲಿ, ಮಹರ್ಷಿ ಚ್ಯವನ್ ವೈದ್ಯಕೀಯ ಕಾಲೇಜು ಹಾಗು ರಾವ್ ತುಲಾರಾಮ್ ಆಸ್ಪತ್ರೆ – ಇವು ಹರಿಯಾಣದ ಆರೋಗ್ಯ ಸೇವೆಗಳನ್ನು ಬಲಪಡಿಸುತ್ತವೆ. ಅದೇ ಸಮಯದಲ್ಲಿ, ಇಲ್ಲಿನ ಯುವಜನರು ವೈದ್ಯರು ಮತ್ತು ಇತರ ವೈದ್ಯಕೀಯ ವೃತ್ತಿಪರರಾಗಲು ಹೊಸ ಮಾರ್ಗಗಳನ್ನು ತೆರೆಯುತ್ತವೆ. ಈ ಎಲ್ಲಾ ಯೋಜನೆಗಳಿಗಾಗಿಯೂ ಸಹ, ಹರಿಯಾಣದ ನನ್ನ ಎಲ್ಲಾ ಸಹೋದರ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇಂದು ನಾನು ಜಿಂದ್ ಮತ್ತು ಹರಿಯಾಣದ ಜನರನ್ನು ಇನ್ನೊಂದು ಕಾರಣಕ್ಕಾಗಿಯೂ ಶ್ಲಾಘಿಸಬೇಕು. ನೀವು ಸ್ವಚ್ಛತಾ ಸೇ ಸ್ವಾಗತ್ ಉಪಕ್ರಮವನ್ನು ಗಂಭೀರವಾಗಿ ತೆಗೆದುಕೊಂಡ ರೀತಿ, ನಾನು ಬರುವ ಮೊದಲು ಇಲ್ಲಿನ ಜನರು ಹೊಸ ಶಕ್ತಿಯಿಂದ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡ ರೀತಿ ಹೃದಯಸ್ಪರ್ಶಿಯಾಗಿದೆ. ಕಳೆದ ವಾರದಿಂದ ನಿಮ್ಮ ಸ್ವಚ್ಛತಾ ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ ಎಂದು ನಾನು ನೋಡಿದೆ. ಕೆಲವರು ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಹೇಳಿದರು – “ಮೋದಿ ಜೀ, ದಯವಿಟ್ಟು ನಮ್ಮ ಜಿಂದ್ ಸ್ವಚ್ಛವಾಗಿರಲು ಮತ್ತೆ ಮತ್ತೆ ಬನ್ನಿ.” ಈ ಭಾವನೆಯನ್ನು ವ್ಯಕ್ತಪಡಿಸಿದ ಸಂಭಾವಿತ ವ್ಯಕ್ತಿಗೆ ನಾನು ಧನ್ಯವಾದ ಹೇಳುತ್ತೇನೆ, ಆದರೆ ಇಂದು ನಾನು ಜಿಂದ್ ಜನರಿಂದ ಏನನ್ನೋ ಕೇಳಲು ಬಂದಿದ್ದೇನೆ. ಹೇಳಿ, ಮೋದಿ ಬರುವುದು ಸ್ವಚ್ಛತೆಗೆ ಅಗತ್ಯವೇ? ಜಿಂದ್ ಜನರು ನಿರ್ಧರಿಸಿದರೆ, ಹರಿಯಾಣದ ಜನರು ನಾವು ಇನ್ನು ಮುಂದೆ ಕೊಳಕು ಸೃಷ್ಟಿಸುವುದಿಲ್ಲ ಎಂದು ನಿರ್ಧರಿಸಿದರೆ, ಜಿಂದ್ ಎಂದಾದರೂ ಕೊಳಕು ಆಗುತ್ತದೆಯೇ? ಹರಿಯಾಣ ಎಂದಾದರೂ ಕೊಳಕು ಆಗುತ್ತದೆಯೇ? ಕಾರ್ಯ ಸರಳವಾಗಿದೆ – ಮೋದಿ ಬರುವ ಅಗತ್ಯವಿಲ್ಲ. ಸ್ವಚ್ಛತೆ ನಮ್ಮ ಸ್ವಭಾವವಾಗುತ್ತದೆ, ಸ್ವಚ್ಛತೆ ನಮ್ಮ ಸಂಸ್ಕೃತಿಯಾಗುತ್ತದೆ ಮತ್ತು ನಾವು ಅದನ್ನು ನಮ್ಮ ದೈನಂದಿನ ಜೀವನದ ಭಾಗವಾಗಿಸುತ್ತೇವೆ ಎಂದು ನೀವು ನಿರ್ಧರಿಸಬೇಕು ಅಷ್ಟೇ.
ಸ್ನೇಹಿತರೇ,
ನಾವು ರೈಲ್ವೆಯ ಇತಿಹಾಸವನ್ನು ನೋಡಿದರೆ, 19 ನೇ ಶತಮಾನದ ರೈಲ್ವೆಗಳನ್ನು ಉಗಿ ಎಂಜಿನ್ಗಳೊಂದಿಗೆ ಗುರುತಿಸಲಾಗಿದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. 20 ನೇ ಶತಮಾನವನ್ನು ಡೀಸೆಲ್ ಮತ್ತು ವಿದ್ಯುತ್ನಲ್ಲಿ ಚಲಿಸುವ ರೈಲುಗಳೊಂದಿಗೆ ಗುರುತಿಸಲಾಗಿದೆ. ಮತ್ತು ಈಗ, 21 ನೇ ಶತಮಾನವನ್ನು ಹೈಡ್ರೋಜನ್ನಲ್ಲಿ ಚಲಿಸುವ ರೈಲುಗಳೊಂದಿಗೆ ಗುರುತಿಸಲಾಗಿದೆ. ಇಂದು, ಭಾರತೀಯ ರೈಲ್ವೆ ಈ 21 ನೇ ಶತಮಾನದ ತಂತ್ರಜ್ಞಾನದಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಇಂದು, ಜಿಂದ್ ಮತ್ತು ಸೋನಿಪತ್ ನಡುವೆ, ಹೈಡ್ರೋಜನ್ ರೈಲು ಓಡಲು ಪ್ರಾರಂಭಿಸಿದೆ. ಇದೀಗ, ಈ ಪ್ರಯಾಣವು 90 ಕಿಲೋಮೀಟರ್ ನಷ್ಟು ಉದ್ದವಾಗಿದೆ, ಆದರೆ ಭವಿಷ್ಯದಲ್ಲಿ, ವಿಸ್ತರಣೆಗೆ ಅಪಾರ ಸಾಧ್ಯತೆಗಳಿವೆ. ವೆಚ್ಚವನ್ನು ಹೇಗೆ ಕಡಿಮೆ ಮಾಡುವುದು, ದಕ್ಷತೆಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ನಾವು ಸಂಶೋಧನೆಯನ್ನು ಮುಂದುವರಿಸುತ್ತೇವೆ ಮತ್ತು ಹಂತ ಹಂತವಾಗಿ, ಸಂಪೂರ್ಣ ತನಿಖೆಯ ನಂತರ, ನಾವು ಮುಂದುವರಿಯುತ್ತೇವೆ. ಹೈಡ್ರೋಜನ್ ರೈಲುಗಳು ಜಗತ್ತಿನಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿವೆ, ಸುಮಾರು 7-8 ವರ್ಷಗಳ ಹಿಂದೆ. ಪ್ರಸ್ತುತ, ಕೇವಲ 3 ಅಥವಾ 4 ದೇಶಗಳು ಮಾತ್ರ ಹೈಡ್ರೋಜನ್ ರೈಲುಗಳನ್ನು ಓಡಿಸುವ ಸಾಮರ್ಥ್ಯವನ್ನು ಹೊಂದಿವೆ. ಮತ್ತು ಆ ದೇಶಗಳಲ್ಲಿಯೂ ಸಹ, ಹೈಡ್ರೋಜನ್ ರೈಲುಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಆದರೆ ಭಾರತದ ಹೈಡ್ರೋಜನ್ ರೈಲಿನ ಸಾಮರ್ಥ್ಯದ ಬಗ್ಗೆ ಕೇಳಿದಾಗ ನಿಮಗೆ ಹೆಮ್ಮೆಯಾಗುತ್ತದೆ – ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ.
ಸ್ನೇಹಿತರೇ,
ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸುವ ಹೈಡ್ರೋಜನ್ ರೈಲು ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲು. ಈ ಹೈಡ್ರೋಜನ್ ರೈಲು 3,200 ಅಶ್ವಶಕ್ತಿಯನ್ನು ಹೊಂದಿದೆ. ಅತ್ಯಂತ ಶಕ್ತಿಶಾಲಿ ಮಾತ್ರವಲ್ಲದೆ, ಭಾರತದ ಹೈಡ್ರೋಜನ್ ರೈಲು ಅತಿ ಉದ್ದವಾಗಿದೆ. ಇತರ ದೇಶಗಳಲ್ಲಿ, ಹೈಡ್ರೋಜನ್ ರೈಲುಗಳು ಮೂರು ಅಥವಾ ನಾಲ್ಕು ಬೋಗಿಗಳೊಂದಿಗೆ ಚಲಿಸುತ್ತವೆ. ಆದರೆ ಭಾರತವು ತನ್ನ ಮೊದಲ ಪ್ರಯತ್ನದಲ್ಲೇ 10 ಬೋಗಿಗಳ ಹೈಡ್ರೋಜನ್ ರೈಲನ್ನು ಓಡಿಸಿದೆ, ವಿಶ್ವದಲ್ಲಿ ತನ್ನ ಧ್ವಜವನ್ನು ನೆಟ್ಟಿದೆ.
ಸ್ನೇಹಿತರೇ,
ನಾನು ನಿಮಗೆ ಇನ್ನೊಂದು ಹೆಮ್ಮೆಯ ವಿಷಯವನ್ನು ಹೇಳುತ್ತೇನೆ. ಭಾರತದ ಹೈಡ್ರೋಜನ್ ರೈಲು ಹೊಗೆ ಮುಕ್ತವಾಗಿದೆ, ಇದು ಮೇಕ್ ಇನ್ ಇಂಡಿಯಾದ ಒಂದು ಉಜ್ವಲ ಉದಾಹರಣೆಯಾಗಿದೆ. ಈ ಹೈಡ್ರೋಜನ್ ರೈಲನ್ನು ಭಾರತೀಯ ಎಂಜಿನಿಯರ್ಗಳು ವಿನ್ಯಾಸಗೊಳಿಸಿದ್ದಾರೆ ಮತ್ತು ಭಾರತೀಯ ಕಂಪನಿಯು ನಿರ್ಮಿಸಿದೆ.
ಸ್ನೇಹಿತರೇ,
ಈ ಹೈಡ್ರೋಜನ್ ರೈಲು ಇತರ ರೈಲುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದಕ್ಕೆ ಪ್ರತ್ಯೇಕ ವ್ಯವಸ್ಥೆ, ಪ್ರತ್ಯೇಕ ಮೂಲಸೌಕರ್ಯ ಬೇಕು. ಇಲ್ಲಿ ಜಿಂದ್ನಲ್ಲಿ, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮತ್ತು ಮುಂಬರುವ ಸಮಯದಲ್ಲಿ, ಹೈಡ್ರೋಜನ್ ರೈಲುಗಳಿಗೆ ಸಂಬಂಧಿಸಿದ ಹೆಚ್ಚಿನ ಮೂಲಸೌಕರ್ಯಗಳನ್ನು ಇಲ್ಲಿ ನಿರ್ಮಿಸಲಾಗುವುದು. ಹೈಡ್ರೋಜನ್ ರೈಲು ಜಾಲದ ಅಗತ್ಯಗಳನ್ನು ಪೂರೈಸಲು ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು. ಇದರರ್ಥ ಈ ರೈಲು ಹರಿಯಾಣದ ಯುವಜನರಿಗೆ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೇ,
ಕಳೆದ 12 ವರ್ಷಗಳಲ್ಲಿ, ಭಾರತೀಯ ರೈಲ್ವೆಯಲ್ಲಿನ ಪ್ರಮುಖ ಬದಲಾವಣೆಗಳು ಭಾರತಕ್ಕೆ ಮತ್ತೊಂದು ಪ್ರಯೋಜನವನ್ನು ನೀಡಿವೆ. ಕಳೆದ ಹಲವಾರು ತಿಂಗಳುಗಳಿಂದ, ಪಶ್ಚಿಮ ಏಷ್ಯಾದಲ್ಲಿ – ಹಾರ್ಮುಜ್ನ ಸಂಪೂರ್ಣ ವಲಯದಲ್ಲಿ, ಇರಾನ್ ಮತ್ತು ಕೊಲ್ಲಿಯಲ್ಲಿ – ಯುದ್ಧ ನಡೆಯುತ್ತಿರುವುದನ್ನು ನೀವು ನೋಡಬಹುದು. ಭಾರತವು ದೊಡ್ಡ ಪ್ರಮಾಣದಲ್ಲಿ ಅಮದು ಮಾಡಿಕೊಳ್ಳುವ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಅನಿಲ ಮತ್ತು ನಮ್ಮ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವ ಸಮುದ್ರ ಮಾರ್ಗವು ಬಿಕ್ಕಟ್ಟುಗಳಿಂದ ಆವೃತವಾದ ಯುದ್ಧಭೂಮಿಯಾಗಿದೆ.
ಸ್ನೇಹಿತರೇ,
2014 ಕ್ಕಿಂತ ಮೊದಲು ಇಂತಹ ಪರಿಸ್ಥಿತಿ ಉಂಟಾಗಿದ್ದರೆ, ಭಾರತದ ಇಡೀ ರೈಲ್ವೆ ವ್ಯವಸ್ಥೆ ಸ್ಥಗಿತಗೊಳ್ಳುತ್ತಿತ್ತು. ಏಕೆಂದರೆ 2014 ರಲ್ಲಿ, ದೇಶದ ಹೆಚ್ಚಿನ ರೈಲುಗಳು ಡೀಸೆಲ್ನಿಂದ ಮಾತ್ರ ಓಡುತ್ತಿದ್ದವು. ಊಹಿಸಿ – ಡೀಸೆಲ್ ಆಮದು ನಿಂತಿದ್ದರೆ, ಆ ರೈಲುಗಳು ಹೇಗೆ ಓಡುತ್ತಿದ್ದವು? ರಾಷ್ಟ್ರವು ಭಾರಿ ಬಿಕ್ಕಟ್ಟನ್ನು ಎದುರಿಸುತ್ತಿತ್ತು.
ಆದರೆ ಸ್ನೇಹಿತರೇ,
ಇದು 2014 ರ ಪರಿಸ್ಥಿತಿಯಲ್ಲ – ಇದು ಮೋದಿ. ಅವರು ಕಾಲಕ್ಕಿಂತ ಮುಂದೆ ಯೋಚಿಸುತ್ತಾರೆ ಮತ್ತು ಪರಿಹಾರಗಳನ್ನು ಸಹ ವಾಸ್ತವಕ್ಕೆ ತರುತ್ತಾರೆ. ಊಹಿಸಿ: ಭಾರತೀಯ ರೈಲ್ವೆಯ ವಿದ್ಯುದ್ದೀಕರಣವು ಸುಮಾರು ಒಂದು ಶತಮಾನದ ಹಿಂದೆ 1925 ರಲ್ಲಿ ಪ್ರಾರಂಭವಾಯಿತು. 1925 ರಿಂದ 2014 ರವರೆಗೆ, ಸುಮಾರು 90 ವರ್ಷಗಳಲ್ಲಿ, ರೈಲ್ವೆ ಜಾಲದ ಕೇವಲ 30 ಪ್ರತಿಶತ ಮಾತ್ರ ವಿದ್ಯುದ್ದೀಕರಿಸಲ್ಪಟ್ಟಿತು – ಮೂರನೇ ಒಂದು ಭಾಗಕ್ಕಿಂತ ಕಡಿಮೆ. ಎಪ್ಪತ್ತು ಪ್ರತಿಶತ ಇನ್ನೂ ಡೀಸೆಲ್ನಲ್ಲಿ ಓಡುತ್ತಿತ್ತು. ಆ ವೇಗದಲ್ಲಿ, ಪೂರ್ಣ ವಿದ್ಯುದ್ದೀಕರಣವನ್ನು ಸಾಧಿಸಲು ಇನ್ನೂ 200–300 ವರ್ಷಗಳು ಬೇಕಾಗುತ್ತಿತ್ತು. ರೈಲ್ವೆಗಳು ಎಂದಿಗೂ ವಿದ್ಯುದ್ದೀಕರಣಗೊಳ್ಳುತ್ತಿರಲಿಲ್ಲ ಮತ್ತು ರೈಲುಗಳು ಡೀಸೆಲ್ನಲ್ಲಿ ಓಡುತ್ತಲೇ ಇರುತ್ತಿದ್ದವು. ಆದರೆ ಕಳೆದ 12 ವರ್ಷಗಳಲ್ಲಿ, ಭಾರತದ ರೈಲ್ವೆ ಜಾಲದ ಸುಮಾರು 99 ಪ್ರತಿಶತವು ವಿದ್ಯುದ್ದೀಕರಿಸಲ್ಪಟ್ಟಿದೆ. ಹರಿಯಾಣದಲ್ಲಿ, ರೈಲ್ವೆ ಜಾಲವು ಸಂಪೂರ್ಣವಾಗಿ ವಿದ್ಯುದ್ದೀಕರಿಸಲ್ಪಟ್ಟಿದೆ. ಈ ಕಾರಣದಿಂದಾಗಿ, ಯುದ್ಧಗಳು ಮತ್ತು ತೈಲ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತದ ರೈಲ್ವೆಗಳು ನಿಂತಿಲ್ಲ. ಭಾರತದ ಅಭಿವೃದ್ಧಿಯ ಎಂಜಿನ್ ಸ್ಥಗಿತಗೊಂಡಿಲ್ಲ – ರೈಲುಗಳು ನಿರಂತರವಾಗಿ ಓಡುತ್ತಲೇ ಇವೆ.
ಸ್ನೇಹಿತರೇ,
ರೈಲು ಅಥವಾ ರಸ್ತೆ ಸಂಪರ್ಕ ಯೋಜನೆಗಳು ಅನುಕೂಲತೆಯನ್ನು ಒದಗಿಸುತ್ತವೆ ಮತ್ತು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತವೆ. ಇಂದು ಹಲವು ಹೆದ್ದಾರಿಗಳಿಂದ ಸಂಪರ್ಕ ಹೊಂದಿರುವ ಜಿಂದ್, ಈ ಹಂತದಿಂದಲೇ ಮೂರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದೆ. ದೆಹಲಿ-ಅಮೃತಸರ-ಕತ್ರಾ ಎಕ್ಸ್ಪ್ರೆಸ್ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಾಗಿದೆ. ಜಿಂದ್-ಗೋಹಾನ ರಾಷ್ಟ್ರೀಯ ಹೆದ್ದಾರಿಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಇದರ ಜೊತೆಗೆ, ಅಂಬಾಲಾ-ಕಲಾ ಅಂಬ್ ಚತುಷ್ಪಥ ರಸ್ತೆಯು ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲತೆಯನ್ನು ತರುತ್ತದೆ.
ಸ್ನೇಹಿತರೇ,
ಈಗ ಜಿಂದ್ ಐದು ರಾಷ್ಟ್ರೀಯ ಹೆದ್ದಾರಿಗಳಿಂದ ಸಂಪರ್ಕ ಹೊಂದಿದ ಜಿಲ್ಲೆಯಾಗಿದೆ. ಅಂತಹ ಸಂಪರ್ಕಗಳಿಂದಾಗಿ, ರೈತರು ಮತ್ತು ಜಾನುವಾರು ಸಾಕಣೆದಾರರು ತಮ್ಮ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯುವುದು ಸುಲಭ ಮತ್ತು ಅಗ್ಗವಾಗುತ್ತದೆ. ಕೈಗಾರಿಕೆಗಳು ಬಲಗೊಳ್ಳುತ್ತವೆ, ಪ್ರವಾಸೋದ್ಯಮಕ್ಕೆ ರೆಕ್ಕೆ ಬರುತ್ತದೆ. ಮತ್ತು ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ
ಸ್ನೇಹಿತರೇ,
ನಿಮಗೆ ತಿಳಿದಿದೆಯೇ, ಕೆಲವು ದಿನಗಳ ಹಿಂದೆ ನಾನು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಭೇಟಿ ನೀಡಿ ಹಿಂತಿರುಗಿದೆ. ಭಾರತ ಅಲ್ಲಿ ಅನೇಕ ಒಪ್ಪಂದಗಳಿಗೆ ಸಹಿ ಹಾಕಿತು, ಅವುಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು. ಆದರೆ ಒಂದು ವಿಷಯದ ಬಗ್ಗೆ ಅಷ್ಟೊಂದು ಮಾತನಾಡಲಾಗಿಲ್ಲ. ಈ ವಿಷಯವು ನನ್ನ ದೇಶದ ಯುವಜನರಿಗೆ, ವಿಶೇಷವಾಗಿ ಹರಿಯಾಣಕ್ಕೆ ನೇರವಾಗಿ ಸಂಬಂಧಿಸಿದೆ – ಮತ್ತು ಆ ವಿಷಯ ಕ್ರೀಡೆ
ಸ್ನೇಹಿತರೇ,
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ, ನಾನು ಅಲ್ಲಿಯ ಸರ್ಕಾರಗಳೊಂದಿಗೆ ಕ್ರೀಡೆಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಿದೆ. ಮುಂಬರುವ ಸಮಯದಲ್ಲಿ, ಭಾರತವು ಈ ಎರಡು ದೇಶಗಳೊಂದಿಗೆ ಕ್ರೀಡಾ ಉದ್ಯಮ, ಕ್ರೀಡಾಪಟು ತರಬೇತಿ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತದೆ. ಇದು ಹರಿಯಾಣದ ಯುವಜನರಿಗೂ ಸಹ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
ಸ್ನೇಹಿತರೇ,
ಇಂದು ಭಾರತದಲ್ಲಿ ಕ್ರೀಡೆಗಳನ್ನು ಫಿಟ್ನೆಸ್ ಮತ್ತು ಉದ್ಯೋಗದ ಪ್ರಮುಖ ಮಾಧ್ಯಮವನ್ನಾಗಿ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಹೊಸ ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಖೇಲೋ ಭಾರತ್ ನೀತಿಯನ್ನು ರಚಿಸಿದೆ. ಖೇಲೋ ಇಂಡಿಯಾ ಅಭಿಯಾನದಿಂದ ಟಾಪ್ಸ್ (TOPS ) ಯೋಜನೆಯವರೆಗೆ, ಕ್ರೀಡಾಪಟುಗಳು ಅಭೂತಪೂರ್ವ ಸೌಲಭ್ಯಗಳು ಮತ್ತು ಆರ್ಥಿಕ ಬೆಂಬಲವನ್ನು ಪಡೆಯುತ್ತಿದ್ದಾರೆ. ಇಲ್ಲಿ ಹರಿಯಾಣದಲ್ಲಿಯೂ ಸಹ, ಬಿಜೆಪಿ ಸರ್ಕಾರವು ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಬಲವಾಗಿ ಪ್ರೋತ್ಸಾಹಿಸುತ್ತಿದೆ.
ಸ್ನೇಹಿತರೇ,
ಇಂದಿನ ಕಾರ್ಯಕ್ರಮವು ಹೈಡ್ರೋಜನ್ ರೈಲು ಮತ್ತು ಇತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಇರಬಹುದು, ಆದರೆ ನಾನು ಇಲ್ಲಿನ ಯುವಜನರಿಗೆ ಬೇರೇನನ್ನೋ ಹೇಳಲು ಬಯಸುತ್ತೇನೆ. 2030 ರಲ್ಲಿ ಭಾರತವು ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುತ್ತದೆ ಮತ್ತು 2036 ರಲ್ಲಿ ಭಾರತವು ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ಪ್ರತಿಯೊಬ್ಬ ಕ್ರೀಡಾಪಟು ಕಠಿಣವಾಗಿ ತಯಾರಿ ನಡೆಸಬೇಕು ಮತ್ತು ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಬೇಕು. ಡಬಲ್-ಎಂಜಿನ್ ಬಿಜೆಪಿ ಸರ್ಕಾರವು ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತು 2036 ರ ಒಲಿಂಪಿಕ್ಸ್ ನೋಡಲು ಬಯಸುವವರು – ಇಂದಿನ 5 ರಿಂದ 12-15 ವರ್ಷ ವಯಸ್ಸಿನ ಮಕ್ಕಳು – ನಾವು ಅವರ ಮೇಲೆ ಗಮನ ಕೇಂದ್ರೀಕರಿಸಬೇಕು. ಮುಂಬರುವ ಸಮಯದಲ್ಲಿ, ಅಹಮದಾಬಾದ್ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟವನ್ನು ಆಯೋಜಿಸುತ್ತದೆ ಎಂದು ಕೂಡಾ ನಾನು ನಿಮಗೆ ಹೇಳುತ್ತೇನೆ. ಹರಿಯಾಣದಲ್ಲಿರುವ ನನ್ನ ಸ್ನೇಹಿತರು ಇದಕ್ಕಾಗಿ ಚೆನ್ನಾಗಿ ತಯಾರಿ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ. ಹರಿಯಾಣದ ಪುತ್ರರು ಮತ್ತು ಪುತ್ರಿಯರು ಸದಾ ಈ ಆಟಗಳಲ್ಲಿಯೂ ತಮ್ಮ ಕೀರ್ತಿ ಪತಾಕೆ ಹಾರಿಸುತ್ತಾರೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೇ,
ಹರಿಯಾಣದ ಡಬಲ್-ಎಂಜಿನ್ ಸರ್ಕಾರವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಂತ್ರದ ಮೇಲೆ ಕೆಲಸ ಮಾಡುತ್ತಿದೆ. ನಯಾಬ್ ಸಿಂಗ್ ಜೀ ಅವರ ನೇತೃತ್ವದಲ್ಲಿ, ಹರಿಯಾಣ ಸರ್ಕಾರವು ಇಲ್ಲಿನ ಯುವಜನರು, ರೈತರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗಾಗಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಲಂಚ ಅಥವಾ ಪಕ್ಷಪಾತವಿಲ್ಲದೆ ಉದ್ಯೋಗಗಳನ್ನು ನೀಡುವ ಹರಿಯಾಣ ಸರ್ಕಾರ ತೋರಿಸಿದ ಮಾರ್ಗ ಸುಲಭವಲ್ಲ, ಆದರೆ ಈ ಬಿಜೆಪಿ ಸರ್ಕಾರವು ಅದನ್ನು ಸಾಧ್ಯವಾಗಿಸಿದೆ.
ಸ್ನೇಹಿತರೇ,
ಇಲ್ಲಿ ರೈತರ ಕಲ್ಯಾಣವೂ ನಮ್ಮ ಆದ್ಯತೆಯಾಗಿದೆ. ಜಿಂದ್ನ ಮಂಡಿ ಹರಿಯಾಣದ ಅತಿದೊಡ್ಡ ಮಂಡಿಗಳಲ್ಲಿ ಒಂದಾಗಿದೆ. ಡಬಲ್-ಎಂಜಿನ್ ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು, ಹರಿಯಾಣದ ರೈತರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೂಲಕ, ಹರಿಯಾಣದ ರೈತರು ಸುಮಾರು ₹8,000 ಕೋಟಿ ಪಡೆದಿದ್ದಾರೆ. ಇದರಲ್ಲಿ, ಜಿಂದ್ನ ರೈತರೇ ₹600 ಕೋಟಿಗೂ ಹೆಚ್ಚು ಪಡೆದಿದ್ದಾರೆ.
ಸ್ನೇಹಿತರೇ,
ನಮ್ಮ ದೇಶ ಮೌಲ್ಯಗಳು ಮತ್ತು ಸಂಸ್ಕೃತಿಯ ಭೂಮಿ. ಮತ್ತು ಈ ಪ್ರದೇಶವು ಆ ಶ್ರೀಮಂತ ಪರಂಪರೆಯ ಒಂದು ದೊಡ್ಡ ಕೇಂದ್ರವಾಗಿದೆ. ಇದು ಜಿಂದ್ನ ಮಣ್ಣು, ಇಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ವೈಭವ ನೆಲೆಸಿದೆ ಮತ್ತು ಪಾಂಡವರ ನಂಬಿಕೆ ವಾಸಿಸುತ್ತಿದೆ. ಪಾಂಡು-ಪಿಂಡಾರ ಮತ್ತು ರಾಮ್ರೈನಂತಹ ಪವಿತ್ರ ತಾಣಗಳು ಇನ್ನೂ ಲಕ್ಷಾಂತರ ಯಾತ್ರಿಕರ ಭಕ್ತಿಯ ಕೇಂದ್ರಗಳಾಗಿವೆ.
ಸ್ನೇಹಿತರೇ,
ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಈ ಪರಂಪರೆಯನ್ನು ಇಂದಿನ ಭಾರತವು ಸಂರಕ್ಷಿಸುತ್ತದೆ ಮತ್ತು ಈಗ ಮುಂದಿನ ಪೀಳಿಗೆಗೆ ಗೌರವದಿಂದ ರವಾನಿಸುತ್ತದೆ. ಈ ಉತ್ಸಾಹದಲ್ಲಿ, ಇಂದು ಕುರುಕ್ಷೇತ್ರದಲ್ಲಿ ಸಿಖ್ ವಸ್ತುಸಂಗ್ರಹಾಲಯದ ಅಡಿಪಾಯವನ್ನು ಹಾಕಲಾಗಿದೆ. ಹರಿಯಾಣದಲ್ಲಿರುವ ಈ ಹೊಸ ವಸ್ತುಸಂಗ್ರಹಾಲಯವು ಭಾರತದ ಶ್ರೇಷ್ಠ ಗುರು ಸಂಪ್ರದಾಯವನ್ನು ಭವಿಷ್ಯದ ಪೀಳಿಗೆಗೆ ಕೊಂಡೊಯ್ಯುತ್ತದೆ.
ಸ್ನೇಹಿತರೇ
ಹರಿಯಾಣ ಈಗ ತ್ವರಿತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಕೃಷಿ ಮತ್ತು ಕೈಗಾರಿಕೆಗಳು – ಇವು ಹರಿಯಾಣವನ್ನು ಸಬಲೀಕರಣಗೊಳಿಸುವ ಎರಡು ಚಕ್ರಗಳು. ಇಂದು ಉದ್ಘಾಟನೆಗೊಂಡ ಮತ್ತು ಕಾರ್ಯಾರಂಭಗೊಳಿಸಿದ ಯೋಜನೆಗಳು ಹರಿಯಾಣದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತವೆ. ಮತ್ತು ಹರಿಯಾಣದ ಈ ತ್ವರಿತ ಅಭಿವೃದ್ಧಿಯು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣಕ್ಕೆ ಶಕ್ತಿ ತುಂಬುತ್ತದೆ. ಈ ಶುಭಾಶಯಗಳೊಂದಿಗೆ, ಭಾರತದ ಮೊದಲ ಹೈಡ್ರೋಜನ್ ರೈಲಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಮತ್ತು ದೇಶದ ಜನರನ್ನು ಅಭಿನಂದಿಸುತ್ತೇನೆ. ನನ್ನೊಂದಿಗೆ ಹೇಳಿ –
ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ!
ತುಂಬಾ ಧನ್ಯವಾದಗಳು!
*****
Happy to be in Jind. Speaking at the launch of projects that strengthen clean mobility, connectivity, healthcare and cultural heritage. Together, they will improve 'Ease of Living' and accelerate Haryana's development. https://t.co/6DwHX6g4gF
— Narendra Modi (@narendramodi) July 17, 2026
India gets its first hydrogen train. pic.twitter.com/Ep7dZJZa0q
— PMO India (@PMOIndia) July 17, 2026
Connectivity not only enhances convenience but also multiplies the pace of development. pic.twitter.com/g4SaJoCIEl
— PMO India (@PMOIndia) July 17, 2026
Building a stronger sporting ecosystem. pic.twitter.com/W0i1KCPHfm
— PMO India (@PMOIndia) July 17, 2026
India takes a major leap towards green mobility!
— Narendra Modi (@narendramodi) July 17, 2026
In Jind, flagged off India’s first indigenous hydrogen-powered train between Jind and Sonipat.
This remarkable achievement reflects the ingenuity and dedication of the Indian Railways team. It is a proud symbol of Aatmanirbhar… pic.twitter.com/hVo89u5vvI
India takes a major leap towards green mobility!
— Narendra Modi (@narendramodi) July 17, 2026
In Jind, flagged off India’s first indigenous hydrogen-powered train between Jind and Sonipat.
This remarkable achievement reflects the ingenuity and dedication of the Indian Railways team. It is a proud symbol of Aatmanirbhar… pic.twitter.com/hVo89u5vvI
जींद के विकास कार्यक्रम में हरियाणा के अपने परिवारजनों का उत्साह नई ऊर्जा से भर गया। pic.twitter.com/rEYJaiXs2k
— Narendra Modi (@narendramodi) July 17, 2026
जींद से सोनीपत के बीच शुरू हुई देश की पहली हाइड्रोजन ट्रेन 21वीं सदी की टेक्नोलॉजी की दिशा में भारत का एक बड़ा कदम है। इस ट्रेन के सामर्थ्य के बारे में सुनकर हर देशवासी को बहुत गर्व होगा! pic.twitter.com/KCkeftRuk4
— Narendra Modi (@narendramodi) July 17, 2026
आज अगर 2014 से पहले की स्थिति होती तो वैश्विक तेल संकट से भारत की रेल व्यवस्था ठप पड़ जाती। लेकिन हमारी सरकार बहुत पहले सोचती भी है और समस्या का समाधान भी जमीन पर उतारती है, जिसके सुपरिणाम देश देख रहा है। pic.twitter.com/DYRAb4tUEy
— Narendra Modi (@narendramodi) July 17, 2026
हरियाणा की डबल इंजन सरकार स्पोर्ट्स में भी यहां के बेटे-बेटियों को हर सुविधा दे रही है। आने वाली महत्वपूर्ण स्पर्धाओं के लिए राज्य के युवा साथियों से मेरा यह विशेष आग्रह… pic.twitter.com/XtQONRPr8m
— Narendra Modi (@narendramodi) July 17, 2026