Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರುಷರ ಶಾಟ್ ಪುಟ್ ಎಫ್ 57 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸೋಮನ್ ರಾಣಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ ಶಾಟ್ ಪುಟ್ ಎಫ್57 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸೋಮನ್ ರಾಣಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಅಸಾಧಾರಣ ಗೆಲುವಿನೊಂದಿಗೆ ಸೋಮನ್ ರಾಣಾ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ ಎಂದು ಪ್ರಧಾನಿ ಹೇಳಿದರು.

ಸ್ಪರ್ಧೆಯುದ್ದಕ್ಕೂ ಅವರ ಗಮನ ಮತ್ತು ಅಚಲ ದೃಢನಿಶ್ಚಯವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.

ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;

“ಸೋಮನ್ ರಾಣಾ ನಿರ್ಮಿಸಿದ ಇತಿಹಾಸ!

ಪುರುಷರ ಶಾಟ್ ಪುಟ್ ಎಫ್57 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಈ ಅಸಾಧಾರಣ ವಿಜಯದೊಂದಿಗೆ, ಅವರು ಈ ಸ್ಪರ್ಧೆಯಲ್ಲಿ ಭಾರತದ ಮೊದಲ ಕಾಮನ್ ವೆಲ್ತ್ ಚಿನ್ನವನ್ನು ಪಡೆದುಕೊಂಡಿದ್ದಾರೆ. ಅವರ ಗಮನ ಮತ್ತು ಅಚಲ ದೃಢನಿಶ್ಚಯವು ಸ್ಪರ್ಧೆಯುದ್ದಕ್ಕೂ ಸ್ಪಷ್ಟವಾಗಿತ್ತು. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು.

#CWG2026″

 

*****