Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿ ಐಐಟಿಯ 57ನೇ ಘಟಿಕೋತ್ಸವ ಸಮಾರಂಭದ ನೋಟ ಹಂಚಿಕೊಂಡಿರುವ ಪ್ರಧಾನಮಂತ್ರಿ

ದೆಹಲಿ ಐಐಟಿಯ 57ನೇ ಘಟಿಕೋತ್ಸವ ಸಮಾರಂಭದ ನೋಟ ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಘಟಿಕೋತ್ಸವದ ಅಗಾಧ ಭಾವನಾತ್ಮಕ ಅನುರಣನವನ್ನು ವಿವರಿಸಿರುವ ಪ್ರಧಾನಮಂತ್ರಿಗಳು, ಕ್ಯಾಂಪಸ್‌ ನ ರೋಮಾಂಚಕ, ಕನಸು ತುಂಬಿದ ವಾತಾವರಣವನ್ನು ಅಭಿವ್ಯಕ್ತಗೊಳಿಸಿದರು. ಈ ಹಿಂದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವರ್ಚುಯಲ್ ರೂಪದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನೆನಪಿಸಿಕೊಳ್ಳುತ್ತಾ ಅವರು, ಈಗ ಪದವಿ ವಿದ್ಯಾರ್ಥಿಗಳೊಂದಿಗೆ ತಾವು ಖುದ್ದು ಹಾಜರಾಗಿರಲು ಸಾಧ್ಯವಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. “ಇಂದು ಈ ಕ್ಯಾಂಪಸ್‌ ನಲ್ಲಿ ನಿಮ್ಮೊಂದಿಗೆ ಈ ಅದ್ಭುತ ಅನುಭವವನ್ನು ಹಂಚಿಕೊಳ್ಳುವುದು ನನಗೂ ಅತ್ಯಂತ ವಿಶೇಷವಾಗಿದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರು ಸರಣಿ ಪೋಸ್ಟ್‌  ಗಳಲ್ಲಿ ಕೆಲವು ಕ್ಷಣಗಳನ್ನು ಹಂಚಿಕೊಳ್ಳುತ್ತಾ ಹೀಗೆ ಹೇಳಿದ್ದಾರೆ: 

“ಐಐಟಿ ದೆಹಲಿಯ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಸಂತೋಷವಾಯಿತು. ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವ ಪದವಿ ಪಡೆದ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು. ಅವರು ದೊಡ್ಡ ಕನಸುಗಳನ್ನು ಕಾಣಲಿ, ಸವಾಲುಗಳನ್ನು ಸ್ವೀಕರಿಸಲಿ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿ.

@iitdelhi

ಐಐಟಿ ದೆಹಲಿಯಲ್ಲಿ, ಆರಂಭಿಕ ಕಲಿಕೆಯಿಂದ ಘಟಿಕೋತ್ಸವದವರೆಗಿನ ವಿಶೇಷ ಪಯಣದ ಬಗ್ಗೆ ಮಾತನಾಡಿದೆ. ಹಾಸ್ಟೆಲ್ ನೆನಪುಗಳು ಮತ್ತು ಸ್ನೇಹಗಳಿಂದ ಹಿಡಿದು ನೆಚ್ಚಿನ ಕ್ಯಾಂಪಸ್ ತಾಣಗಳವರೆಗೆ ಎಲ್ಲವೂ ಜೀವಿತಾವಧಿಯಲ್ಲಿ ಅಚ್ಚಳಿಯದೇ ಉಳಿಯುವ ಅನುಭವಗಳಾಗಿವೆ.

ನಮ್ಮ ಯುವ ಪದವೀಧರರು ಹೊಸ ಅಧ್ಯಾಯಕ್ಕೆ ಪದಾರ್ಪಣೆ ಮಾಡುತ್ತಿರುವ ಈ ಹೊತ್ತಿನಲ್ಲಿ, ಈ ಪಯಣದ ಭಾಗವಾಗಿರುವ ಪ್ರತಿಯೊಬ್ಬರನ್ನು… ಅವರ ಸ್ನೇಹಿತರು, ಶಿಕ್ಷಕರು, ಮಾರ್ಗದರ್ಶಕರು ಮತ್ತು ಸಹಾಯಕ ಸಿಬ್ಬಂದಿ ಹೀಗೆ ಎಲ್ಲರನ್ನೂ ಆದರಿಸುವಂತೆ ನಾನು ಅವರಲ್ಲಿ ಮನವಿ ಮಾಡುತ್ತೇನೆ. ಜೀವನವು ಅವರನ್ನು ಎಲ್ಲಿಗೇ ಕರೆದೊಯ್ದರೂ, ಅವರು ಯಾವಾಗಲೂ ತಮ್ಮ ‘ಸಂಸ್ಥೆ’ಯೊಂದಿಗೆ ಸಂಪರ್ಕದಲ್ಲಿರುವಂತೆ ಮನವಿ ಮಾಡುತ್ತೇನೆ.

@iitdelhi

ಅಭೂತಪೂರ್ವ ವೇಗದಲ್ಲಿ ಬದಲಾಗುತ್ತಿರುವ ವಿಶ್ವಕ್ಕೆ ಸಜ್ಜಾಗುವುದು ಮುಖ್ಯ. ಕೈಗಾರಿಕೆಗಳು, ವೃತ್ತಿಪರರು ಮತ್ತು ಇನ್ನೂ ಹೆಚ್ಚಿನದನ್ನು ತಂತ್ರಜ್ಞಾನ ರೂಪಾಂತರಿಸುತ್ತಿದೆ.

ಸವಾಲುಗಳು ಸಹಜ. ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಧೈರ್ಯವಿರುವವರು ಮಾತ್ರ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬಲ್ಲರು!

ನಾನು ಐಐಟಿ ದೆಹಲಿ ವಿದ್ಯಾರ್ಥಿಗಳಿಗೆ ಹೇಳಿದ ವಿಷಯ… ಪರೀಕ್ಷೆಗಳಿಗೆ ಪಠ್ಯಕ್ರಮವಿರುತ್ತದೆ, ಜೀವನಕ್ಕೆ ಇರುವುದಿಲ್ಲ. ಜೀವನ ಬಹುತೇಕ ಪಠ್ಯಕ್ರಮದಿಂದ ಸಂಪೂರ್ಣವಾಗಿ ಹೊರಗಿರುತ್ತದೆ!
@iitdelhi

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹಿಂದಿನ ಪೀಳಿಗೆಯೊಂದು ತನ್ನನ್ನು ತಾನು ಸಮರ್ಪಿಸಿಕೊಂಡಿತ್ತು. ಇಂದಿನ ಯುವಕರ ಮುಂದಿರುವ ಜವಾಬ್ದಾರಿ ವಿಭಿನ್ನವಾಗಿದೆ, ಆದರೆ ಅಷ್ಟೇ ಮಹತ್ವದ್ದಾಗಿದೆ. ಆರ್ಥಿಕ ಮತ್ತು ತಾಂತ್ರಿಕ ಸ್ವಾವಲಂಬನೆಯಿಂದ ಹಿಡಿದು ಕೈಗಾರಿಕಾ ಶಕ್ತಿಯವರೆಗೆ, ಅವರು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಹಳಷ್ಟು ಯುವನರು… ರಾಕೆಟ್, ಚಿಪ್ ಮತ್ತು ಡ್ರೋನ್ ನಿರ್ಮಾಣ ತಮಗೆ ರಕ್ತಗತ ಎಂದು ಹೇಳುತ್ತಿದ್ದಾರೆ!

 

*****