ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅರಬಿಂದೋ ಅವರ ಜನ್ಮ ದಿನದ ಅಂಗವಾಗಿ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಒಬ್ಬ ಶ್ರೇಷ್ಠ ತತ್ವಜ್ಞಾನಿ, ರಾಷ್ಟ್ರೀಯವಾದಿ, ಕವಿ ಮತ್ತು ಚಿಂತಕರಾದ ಶ್ರೀ ಅರಬಿಂದೋ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಹೆಚ್ಚಾಗಿ ಮಾನವ ಪ್ರಗತಿಯ ಅನ್ವೇಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.
ವಿವಿಧ ವಿಷಯಗಳ ಕುರಿತ ಅವರ ಕೃತಿಗಳು ಪ್ರಪಂಚದಾದ್ಯಂತದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಬಹಳ ಮುಖ್ಯವಾಗಿ, ನಮ್ಮ ರಾಷ್ಟ್ರದ ಭವಿಷ್ಯ ಮತ್ತು ಮಾನವ ಪರಿವರ್ತನೆಯ ಅಪರಿಮಿತ ಸಾಧ್ಯತೆಗಳಲ್ಲಿ ಶ್ರೀ ಅರಬಿಂದೋ ಅವರ ನಂಬಿಕೆ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಶ್ರೀ ಅರಬಿಂದೋ ಅವರ ಜನ್ಮ ವಾರ್ಷಿಕೋತ್ಸವದಂದು ಅವರ ಸ್ಮರಣೆ.
ಒಬ್ಬ ಶ್ರೇಷ್ಠ ತತ್ವಜ್ಞಾನಿ, ರಾಷ್ಟ್ರೀಯವಾದಿ, ಕವಿ ಮತ್ತು ಚಿಂತಕರಾದ ಶ್ರೀ ಅರಬಿಂದೋ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಮಾನವ ಪ್ರಗತಿಯ ಬೃಹತ್ ಅನ್ವೇಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ವಿವಿಧ ವಿಷಯಗಳ ಕುರಿತಾದ ಅವರ ಕೃತಿಗಳು ಪ್ರಪಂಚದಾದ್ಯಂತ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇವೆ. ಮುಖ್ಯವಾಗಿ, ನಮ್ಮ ರಾಷ್ಟ್ರದ ಭವಿಷ್ಯ ಮತ್ತು ಮಾನವ ಪರಿವರ್ತನೆಯ ಅಪರಿಮಿತ ಸಾಧ್ಯತೆಗಳಲ್ಲಿ ಅವರ ನಂಬಿಕೆ ಅತ್ಯಂತ ಪ್ರಸ್ತುತವಾಗಿದೆ.”
*****
Remembering Sri Aurobindo on his birth anniversary.
— Narendra Modi (@narendramodi) August 15, 2026
A towering philosopher, nationalist, poet and thinker, Sri Aurobindo dedicated his life to India’s freedom as well as to the larger quest for human progress. His works on various subjects continue to inspire generations across… pic.twitter.com/sEBTfCezMm
শ্রী অরবিন্দকে তাঁর জন্মবার্ষিকীতে স্মরণ করছি।
— Narendra Modi (@narendramodi) August 15, 2026
একজন বিশিষ্ট দার্শনিক, জাতীয়তাবাদী, কবি এবং চিন্তাবিদ, শ্রী অরবিন্দ তাঁর জীবনকে ভারতের স্বাধীনতার পাশাপাশি মানব অগ্রগতির বৃহত্তর অনুসন্ধানে উৎসর্গ করেছিলেন। বিভিন্ন বিষয়ে তাঁর কালজয়ী সৃষ্টি বিশ্বজুড়ে প্রজন্ম থেকে প্রজন্মকে… pic.twitter.com/K393Cu7qnI