Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಂಬಿಯಾ ಅಧ್ಯಕ್ಷರಾಗಿ ಪುನರಾಯ್ಕೆಯಾದ ಘನತೆವೆತ್ತ ಅಧ್ಯಕ್ಷ ಶ್ರೀ ಹಕೈಂಡೆ ಹಿಚಿಲೆಮಾ ಅವರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದ್ದಾರೆ


ಜಾಂಬಿಯಾ ದೇಶದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಗೌರವಾನ್ವಿತ ಅಧ್ಯಕ್ಷ ಶ್ರೀ ಹಕೈಂಡೆ ಹಿಚಿಲೆಮಾ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜಾಂಬಿಯಾ ಜೊತೆಗಿನ ಬಹುಮುಖ ಪಾಲುದಾರಿಕೆಯನ್ನು ಭಾರತ ಬಹಳವಾಗಿ ಗೌರವಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಅಧ್ಯಕ್ಷ ಶ್ರೀ  ಹಕೈಂಡೆ ಹಿಚಿಲೆಮಾ ಅವರ ನಾಯಕತ್ವದಲ್ಲಿ ಭಾರತ ಮತ್ತು ಜಾಂಬಿಯಾ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬಯಕೆಯನ್ನು ಶ್ರೀ ಮೋದಿ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

“ಜಾಂಬಿಯಾ ಅಧ್ಯಕ್ಷರಾಗಿ ಪುನರಾಯ್ಕೆಯಾದ ಅಧ್ಯಕ್ಷ ಶ್ರೀ ಹಕೈಂಡೆ ಹಿಚಿಲೆಮಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಜಾಂಬಿಯಾ ಜೊತೆಗಿನ ಬಹುಮುಖ ಪಾಲುದಾರಿಕೆಯನ್ನು ಭಾರತ ಬಹಳಷ್ಟು ಗೌರವಿಸುತ್ತದೆ ಮತ್ತು ಅವರ ನಾಯಕತ್ವದಲ್ಲಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.

@HHichilema”

 

******