ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ನಾರಾಯಣ ಗುರುಗಳ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಶ್ರೀ ನಾರಾಯಣ ಗುರುಗಳು ಘನತೆ ಮತ್ತು ಕರುಣೆ ಬೇರೂರಿರುವ ಸಮಾಜವನ್ನು ನಿರ್ಮಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಒಬ್ಬ ಶ್ರೇಷ್ಠ ಸಾಮಾಜಿಕ ಸುಧಾರಕ, ಆಧ್ಯಾತ್ಮಿಕ ನಾಯಕ ಮತ್ತು ಚಿಂತಕ ಎಂದು ಶ್ರೀ ನರೇಂದ್ರ ಮೋದಿ ಬಣ್ಣಿಸಿದರು.
ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಶ್ರೀ ನಾರಾಯಣ ಗುರುಗಳಿಗೆ ಅವರ ಜನ್ಮ ವಾರ್ಷಿಕೋತ್ಸವದಿನವಾದ ಇಂದು ಅವರಿಗೆ ನಮನಗಳು!
ಶ್ರೇಷ್ಠ ಸಾಮಾಜಿಕ ಸುಧಾರಕ, ಆಧ್ಯಾತ್ಮಿಕ ನಾಯಕ ಮತ್ತು ಚಿಂತಕರಾಗಿದ್ದ ಅವರು ಘನತೆ ಮತ್ತು ಕರುಣೆ ಬೇರೂರಿರುವ ಸಮಾಜವನ್ನು ನಿರ್ಮಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಆಲೋಚನೆಗಳು ಅಸಂಖ್ಯಾತ ಜನರಿಗೆ ಶಕ್ತಿಯನ್ನು ತುಂಬಿದವು. ಶಿಕ್ಷಣ ಮತ್ತು ಕಲಿಕೆಗೆ ಅವರು ಒತ್ತು ನೀಡಿದ್ದು ಕೂಡ ಗಮನವು ಅಷ್ಟೇ ಗಮನಾರ್ಹವಾದುದು.
*****
Tributes to Sree Narayana Guru on his birth anniversary!
— Narendra Modi (@narendramodi) August 28, 2026
A towering social reformer, spiritual leader and thinker, he devoted his life to building a society rooted in dignity and compassion. His thoughts gave strength to countless people. Equally noteworthy was his focus on…