ಪಿಎಂಇಂಡಿಯಾ
ಉಭಯ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸಲು ನೀಡಿದ ಅತ್ಯುನ್ನತ ಕೊಡುಗೆಗಾಗಿ ಇಂದು ಉಜ್ಬೇಕಿಸ್ತಾನದ ಅಧ್ಯಕ್ಷ ಘನತೆವೆತ್ತ ಶ್ರೀ ಶವ್ಕತ್ ಮಿರ್ಜಿಯೋಯೆವ್ ಅವರು “ಒಲಿ ದರಾಜಲಿ ದೋಸ್ತ್ಲಿಕ್” ಆದೇಶವನ್ನು (ಉಜ್ಬೇಕಿಸ್ತಾನ ದೇಶದ ಅತ್ಯುನ್ನತ ಸ್ನೇಹ-ಗೌರವದ ಆದೇಶ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಿದರು. ಇದು ಉಜ್ಬೇಕಿಸ್ತಾನ ದೇಶವು ವಿದೇಶಿ ನಾಯಕರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ.
ಈ ಗೌರವವನ್ನು ಸ್ವೀಕರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಗೌರವವನ್ನು ಭಾರತದ 1.4 ಶತಕೋಟಿ ಜನರಿಗೆ ಅರ್ಪಿಸಿದರು ಮತ್ತು ಇದು ಎರಡೂ ದೇಶಗಳು ಮತ್ತು ನಾಗರಿಕತೆಗಳ ನಡುವಿನ ಶಾಶ್ವತ ಸ್ನೇಹದ ಸಂಕೇತವಾಗಿದೆ ಎಂದು ತಿಳಿಸಿದರು. ಅಧ್ಯಕ್ಷ ಶ್ರೀ ಮಿರ್ಜಿಯೋಯೆವ್ ಅವರು ತಮ್ಮ ಬಗ್ಗೆ ಮಾತನಾಡಿದ ಮೆಚ್ಚುಗೆಯ ಮಾತುಗಳು ಭಾರತ ಮತ್ತು ಉಜ್ಬೇಕಿಸ್ತಾನ್ ದೇಶಗಳ ನಡುವಿನ ಪ್ರಾಚೀನ ಸ್ನೇಹ ಮತ್ತು ಅವರುಗಳ ಪರಸ್ಪರ ಹಂಚಿಕೆಯ ಪರಂಪರೆಗೆ ಗೌರವವಾಗಿದೆ ಎಂದು ಅವರು ತಿಳಿಸಿದರು. ಈ ಗೌರವವು ಮಾನವೀಯತೆಯ ಸುಧಾರಣೆಗಾಗಿ ಜಾಗತಿಕ ದಕ್ಷಿಣ ಪಾಲುದಾರರಾಗಿ ಉಜ್ಬೇಕಿಸ್ತಾನ್ ಜೊತೆ ಒಟ್ಟಾಗಿ ಕೆಲಸ ಮಾಡಲು ಭಾರತಕ್ಕೆ ಹೆಚ್ಚುವರಿ ಜವಾಬ್ದಾರಿಯನ್ನು ತರುತ್ತದೆ ಎಂದು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಹೇಳಿದರು.
ಉಜ್ಬೇಕಿಸ್ತಾನ್ ದೇಶದ ಅತ್ಯುನ್ನತನ ಗೌರವ ಪ್ರಶಸ್ತಿ “ಒಲಿ ದರಾಜಲಿ ದೋಸ್ತ್ಲಿಕ್” ಆದೇಶದ ವಿತರಣೆಯು ಆಳವಾಗಿ ಬೇರೂರಿರುವ ನಾಗರಿಕ ಸಂಬಂಧಗಳು ಮತ್ತು ಭಾರತ-ಉಜ್ಬೇಕಿಸ್ತಾನ್ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ.
*****
Honoured to receive the ‘Oliy Darajali Do’stlik’ Order. I dedicate this to the enduring bond between India and Uzbekistan. https://t.co/nu1LoNGXFM
— Narendra Modi (@narendramodi) August 30, 2026