ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಶಿಕ್ಷಣ ರಾಜ್ಯ ಖಾತೆ ಸಚಿವರಾದ ಶ್ರೀ ಜಯಂತ್ ಚೌಧರಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಬೋಧನೆಯು ಒಂದು ಕಲೆ ಮತ್ತು ಸೃಜನಶೀಲ ಕ್ರಿಯೆಯಾಗಿದ್ದು, ಅದಕ್ಕೆ ಮಾನವ ಸಂಪರ್ಕಗಳು, ಶಿಕ್ಷಣಶಾಸ್ತ್ರ ಮತ್ತು ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವನ್ನು ನೋಡುವ ಅಗತ್ಯವಿದೆ ಎಂದು ಕೇಂದ್ರ ರಾಜ್ಯ ಸಚಿವರು ಬರೆದಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಎನ್ ಇ ಪಿ 2020, ಉಲ್ಲಾಸ್ , ವಿದ್ಯಾಂಜಲಿ ಮತ್ತು ಇತರ ವಿವಿಧ ಉಪಕ್ರಮಗಳು ಬೋಧನೆ ಮತ್ತು ಕಲಿಕೆಯನ್ನು ಹೇಗೆ ಬಲಪಡಿಸುತ್ತಿವೆ ಮತ್ತು ಪ್ರತಿಯೊಬ್ಬ ಶಿಕ್ಷಕರನ್ನು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವವರು ಎಂದು ಗುರುತಿಸುತ್ತಿವೆ ಎಂದು ಲೇಖನವು ಪ್ರಮುಖವಾಗಿ ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಗಳ ಕಚೇರಿಯು X ಪೋಸ್ಟ್ ನಲ್ಲಿ ಹೀಗೆ ಹೇಳಿದೆ:
“ಬೋಧನೆಯು ಒಂದು ಕಲೆ ಮತ್ತು ಸೃಜನಶೀಲ ಕ್ರಿಯೆಯಾಗಿದೆ, ಇದಕ್ಕೆ ಮಾನವ ಸಂಪರ್ಕಗಳು, ಶಿಕ್ಷಣಶಾಸ್ತ್ರ ಮತ್ತು ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯವನ್ನು ಗುರುತಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವರಾದ ಶ್ರೀ @jayantrld ಬರೆಯುತ್ತಾರೆ.
ಎನ್ ಇ ಪಿ 2020, ಉಲ್ಲಾಸ್, ವಿದ್ಯಾಂಜಲಿ ಮತ್ತು ಇತರ ವಿವಿಧ ಉಪಕ್ರಮಗಳು ಬೋಧನೆ ಮತ್ತು ಕಲಿಕೆಯನ್ನು ಹೇಗೆ ಬಲಪಡಿಸುತ್ತಿವೆ ಎಂಬುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಪ್ರತಿಯೊಬ್ಬ ಶಿಕ್ಷಕರನ್ನು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವವರೆಂದು ಗುರುತಿಸುತ್ತಾರೆ.”
*****
Union MoS Shri @jayantrld writes that teaching is an art and a creative act, requiring human connections, pedagogy and the ability to see potential in students.
— PMO India (@PMOIndia) September 7, 2026
He highlights how NEP 2020, ULLAS, Vidyanjali and various other initiatives are strengthening teaching and learning,… pic.twitter.com/cqDItsWp48