Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಎಲ್ಲರನ್ನೂ ಒಳಗೊಂಡ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯ ಬಲವರ್ಧನೆ” ಕುರಿತ ಬ್ರಿಕ್ಸ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ (ಸೆಪ್ಟೆಂಬರ್ 12, 2026)


ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ2026ರ ಸೆಪ್ಟೆಂಬರ್ 12 ರಂದು “ಎಲ್ಲರನ್ನೂ ಒಳಗೊಂಡ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯ ಬಲವರ್ಧನೆ” ಕುರಿತ ಬ್ರಿಕ್ಸ್ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ವಹಿಸಿದ್ದರು.

2. ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ಈ ಕೆಳಗಿನ ಅಂಶಗಳನ್ನು ಒತ್ತಿ ಹೇಳಿದರು:

i. ‘ಗ್ಲೋಬಲ್ ಸೌತ್’ (ಜಾಗತಿಕ ದಕ್ಷಿಣ ರಾಷ್ಟ್ರಗಳು) ಜಾಗತಿಕ ಬಿಕ್ಕಟ್ಟುಗಳ ಮುಂಚೂಣಿಯಲ್ಲಿದೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿದೆ. ನಾವು “ಸವಲತ್ತುಗಳ ಪಿರಮಿಡ್” ಅನ್ನು “ಪಾಲುದಾರಿಕೆಯ ವೇದಿಕೆ”ಯಾಗಿ ಪರಿವರ್ತಿಸಬೇಕು.

ii. ಜಾಗತಿಕ ಆಡಳಿತವು ಇಂದಿನ ವಾಸ್ತವತೆಗಳನ್ನು ಪ್ರತಿಬಿಂಬಿಸಬೇಕು ಮತ್ತು ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಹೊಂದಿರಬೇಕು.

iii. ‘ಗ್ಲೋಬಲ್ ಸೌತ್’ ಕೇವಲ ನಿಯಮಗಳನ್ನು ಪಾಲಿಸುವವರಿಂದ , ನಿಯಮಗಳನ್ನು ರೂಪಿಸುವವರಾಗಿ ಬದಲಾಗುವಂತೆ ಪ್ರಯತ್ನಗಳನ್ನು ಮಾಡಬೇಕು. ಬ್ರಿಕ್ಸ್ ಮೂಲಕ, ನಾವು ‘ಗ್ಲೋಬಲ್ ಸೌತ್’ನ ಯುವ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರಿಗೆ ಮಾತುಕತೆ ನಡೆಸುವ ಕೌಶಲಗಳು, ಪ್ರಾಯೋಗಿಕ ತರಬೇತಿ ಮತ್ತು ಕಾನೂನು ಪರಿಣತಿಯನ್ನು ಒದಗಿಸಬಹುದು.

iv. ನಾವಿಕರು ಜಾಗತಿಕ ವ್ಯಾಪಾರಕ್ಕೆ ಮಹತ್ವದ ಕೊಡುಗೆ ನೀಡುತ್ತಾರೆ, ಆದರೂ ಬಿಕ್ಕಟ್ಟಿನ ಸಮಯದಲ್ಲಿ ಅವರಿಗೆ ಆಗಾಗ್ಗೆ ಸೂಕ್ತ ಬೆಂಬಲ ದೊರಕುವುದಿಲ್ಲ; ಹಾಗಾಗಿ ‘ನಾವಿಕರ ತುರ್ತು ಬೆಂಬಲ ಜಾಲ’ವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಅವರು ಮುಂದಿಟ್ಟರು.

3. ನಮ್ಮ ಭವಿಷ್ಯವು ಹಂಚಿಕೆಯಾಗಿರುವುದರಿಂದ, ಆ ಭವಿಷ್ಯವನ್ನು ರೂಪಿಸುವ ಹಕ್ಕನ್ನು ಕೂಡ ಹಂಚಿಕೊಳ್ಳಬೇಕು – ಧ್ವನಿಯಿಂದ ಪ್ರಭಾವದವರೆಗೆ, ಸವಲತ್ತಿನಿಂದ ಪಾಲುದಾರಿಕೆಯವರೆಗೆ – ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿಗಳು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಪ್ರಧಾನ ಮಂತ್ರಿಯವರ ಆರಂಭಿಕ ಭಾಷಣವನ್ನು ಇಲ್ಲಿ ವೀಕ್ಷಿಸಬಹುದು here.

4. ಬ್ರಿಕ್ಸ್ ಸಹಕಾರದ ಮುಂದಿನ ಹಂತದ ಹಂಚಿಕೆಯ ಆದ್ಯತೆಗಳು, ಬದ್ಧತೆ ಮತ್ತು ದಿಕ್ಕನ್ನು ನಿರ್ಧರಿಸುವ ‘ನವದೆಹಲಿ ಬ್ರಿಕ್ಸ್ ನಾಯಕರ ಘೋಷಣೆ’ಯ ಅಂಗೀಕಾರದೊಂದಿಗೆ ಗೋಷ್ಠಿಯು ಮುಕ್ತಾಯಗೊಂಡಿತು. ಘೋಷಣೆಯನ್ನು ಇಲ್ಲಿ ವೀಕ್ಷಿಸಬಹುದು. here.

 

*****