ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಅಭಿವೃದ್ಧಿ ಪಯಣವು ಕೇಳದ, ಕಾಣದ ಅಥವಾ ವಂಚಿತರನ್ನು ಹೇಗೆ ಮುಖ್ಯವಾಹಿನಿಗೆ ತರುತ್ತಿದೆ ಎಂಬುದನ್ನು ಪ್ರಮುಖವಾಗಿ ಬಿಂಬಿಸುವ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರಕ್ಕೆ ಪ್ರಧಾನಮಂತ್ರಿಯವರು ಹೆಚ್ಚಿನ ಒತ್ತು ನೀಡುತ್ತಿರುವುದರ ಮೇಲೆ ಗಮನ ಸೆಳೆದಿರುವ ಶ್ರೀ ಕೋವಿಂದ್ ಅವರು ಪರಿಧಿಯು ಈಗ ಭಾರತದ ಅಭಿವೃದ್ಧಿ ಮಹತ್ವಾಕಾಂಕ್ಷೆಯ ಕೇಂದ್ರಭಾಗದತ್ತ ಚಲಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ ತನ್ನ ‘X’ ಪೋಸ್ಟ್ ನಲ್ಲಿ:
“ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ @ramnathkovind ಅವರು ತಮ್ಮ ಲೇಖನದಲ್ಲಿ ಭಾರತದ ಅಭಿವೃದ್ಧಿ ಕಥೆಯು ಕೇಳದ, ಕಾಣದ ಅಥವಾ ವಂಚಿತರನ್ನು ಹೆಚ್ಚಾಗಿ ಮುಖ್ಯವಾಹಿನಿಗೆ ತರುತ್ತಿದೆ ಎಂದು ಬರೆದಿದ್ದಾರೆ.
ಪ್ರಧಾನಮಂತ್ರಿ @narendramodi ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹೆಚ್ಚಿನ ಗಮನಹರಿಸಿರುವುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ ಮತ್ತು ಪರಿಧಿಯು ಈಗ ಭಾರತದ ಅಭಿವೃದ್ಧಿ ಮಹತ್ವಾಕಾಂಕ್ಷೆಯ ಕೇಂದ್ರಕ್ಕೆ ಚಲಿಸುತ್ತಿದೆ.’’
*****
Former President Shri @ramnathkovind writes that India's development story is increasingly bringing those who were unheard, unseen or underserved into the mainstream.
— PMO India (@PMOIndia) September 17, 2026
He highlights PM @narendramodi's focus on Sabka Saath, Sabka Vikas and says the periphery is now moving to the… pic.twitter.com/grHuWNmsQv