Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿವಾದಗಳ ಬದಲಿಗೆ ಸಂವಾದ ಮತ್ತು ವಿಶ್ವಾಸವು ಕೇಂದ್ರ-ರಾಜ್ಯಗಳ ಸಂಬಂಧವನ್ನು ಹೇಗೆ ಬಲಪಡಿಸುತ್ತಿದೆ ಎಂಬುದನ್ನು ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಾದಗಳ ಬದಲಿಗೆ ಸಂವಾದ ಮತ್ತು ವಿಶ್ವಾಸವು ಕೇಂದ್ರ-ರಾಜ್ಯಗಳ ಬಾಂಧವ್ಯವನ್ನು ಹೇಗೆ ಬಲಪಡಿಸುತ್ತಿದೆ ಹಾಗೂ ಅಭಿವೃದ್ಧಿಯು ಪ್ರಗತಿಯ ಹೊಸ ಹಾದಿಗಳನ್ನು ಹೇಗೆ ತೆರೆಯುತ್ತಿದೆ ಎಂಬುದನ್ನು ವಿವರಿಸುವ ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರ ಲೇಖನವೊಂದನ್ನು ಇಂದು ಹಂಚಿಕೊಂಡಿದ್ದಾರೆ. ಕಳೆದ ದಶಕದಲ್ಲಿ ಸಾಧ್ಯವಾದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಬದಲಾವಣೆ, ನಾವು ಕ್ರಮಿಸಿರುವ ದೂರ ಮತ್ತು ದೃಢ ನಂಬಿಕೆಯೊಂದಿಗೆ ನಾವು ಸಾಧಿಸಿರುವುದನ್ನು ಈ ಲೇಖನ ತಿಳಿಸುತ್ತದೆ.

ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ವಿವಾದಗಳ ಬದಲಿಗೆ ಮಾತುಕತೆ, ನಂಬಿಕೆಯು ಕೇಂದ್ರ-ರಾಜ್ಯ ಸಂಬಂಧಗಳನ್ನು ಬಲಪಡಿಸುತ್ತಿದೆ ಮತ್ತು ಅಭಿವೃದ್ಧಿಯು ಪ್ರಗತಿಯ ಹೊಸ ಹಾದಿಗಳನ್ನು ತೆರೆಯುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಶ್ರೀ @himantabiswa ಅವರು ತಮ್ಮ ಇತ್ತೀಚಿನ ಲೇಖನದಲ್ಲಿ ಕಳೆದ ದಶಕದಲ್ಲಿ ಸಾಕಾರಗೊಂಡ ಸಹಕಾರಿ ಒಕ್ಕೂಟ ವ್ಯವಸ್ಥೆಯ ಬದಲಾವಣೆಯನ್ನು ವಿವರಿಸಿದ್ದಾರೆ. ನಾವೆಷ್ಟು ದೂರ ಸಾಗಿ ಬಂದಿದ್ದೇವೆ ಮತ್ತು ದೃಢ ನಂಬಿಕೆಯೊಂದಿಗೆ ಏನನ್ನು ಸಾಧಿಸಿದ್ದೇವೆ ಎಂಬುದನ್ನು ಅವಲೋಕಿಸುವ ಉತ್ತಮ ಲೇಖನ!”

 

*****