Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಸ್ತರಣೆಯಲ್ಲಿರುವ ಅವಕಾಶಗಳು ಭಾರತೀಯರಿಗೆ ದೊಡ್ಡ ಕನಸುಗಳನ್ನು ನನಸಾಗಿಸಲು ಹೇಗೆ ಅನುವು ಮಾಡಿಕೊಡುತ್ತವೆ ಎಂಬುದನ್ನು ಬಿಂಬಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಶ್ರೀಮತಿ ಪಿ.ವಿ. ಸಿಂಧು ಅವರ ಲೇಖನವನ್ನು ಹಂಚಿಕೊಂಡಿದ್ದಾರೆ. ಕಳೆದ 12 ವರ್ಷಗಳಲ್ಲಿ ಹೊಸ ಪೀಳಿಗೆಯ ಭಾರತೀಯರಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಅವಕಾಶಗಳು ಮತ್ತು ಮಾರ್ಗಗಳನ್ನು ಹೇಗೆ ವಿಸ್ತರಿಸಲಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಭಾರತದಲ್ಲಿ ಎಂದಿಗೂ ಪ್ರತಿಭೆಯ ಕೊರತೆಯಿಲ್ಲ ಮತ್ತು ವಿಸ್ತರಣೆಯ ಅವಕಾಶಗಳು ಭಾರತೀಯರಿಗೆ ದೊಡ್ಡ ಕನಸುಗಳನ್ನು ಕಾಣಲು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಲು ಹೇಗೆ ಅನುವು ಮಾಡಿಕೊಡುತ್ತವೆ ಎಂಬುದನ್ನು ಲೇಖನವು ಒತ್ತಿಹೇಳುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನ ಮಂತ್ರಿ ಕಾರ್ಯಾಲಯವು ಎಕ್ಸ್ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ:

“ಭಾರತದಲ್ಲಿ ಎಂದಿಗೂ ಪ್ರತಿಭೆಯ ಕೊರತೆಯಿಲ್ಲ. ದೊಡ್ಡ ಕನಸುಗಳನ್ನು ಸಾಕಾರಗೊಳಿಸುವ ಅವಕಾಶಗಳು ಮತ್ತು ಮಾರ್ಗಗಳು ಹೆಚ್ಚಾಗಿ ಕಾಣೆಯಾಗಿದ್ದವು.

ಕಳೆದ 12 ವರ್ಷಗಳು ಇದನ್ನು ಹೇಗೆ ಬದಲಾಯಿಸಿವೆ ಎಂಬುದನ್ನು @Pvsindhu1 ತನ್ನ ಒಳನೋಟವುಳ್ಳ ಲೇಖನದಲ್ಲಿ, ಹೊಸ ಪೀಳಿಗೆಯ ಭಾರತೀಯರಿಗೆ ದೊಡ್ಡ ಕನಸುಗಳನ್ನು ಕಾಣಲು ಮಾತ್ರವಲ್ಲದೆ, ಆ ಕನಸುಗಳನ್ನು ನನಸಾಗಿಸಲು ಅನುವು ಮಾಡಿಕೊಟ್ಟಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.”

 

*****