Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶುಭಾಶಯಗಳು, ಪ್ರೀತಿ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಜನ್ಮದಿನದಂದು ದೇಶಾದ್ಯಂತದ ಜನರಿಂದ ಪಡೆದ ಶುಭಾಶಯಗಳು, ಪ್ರೀತಿ ಮತ್ತು ಆಶೀರ್ವಾದಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿಯೊಂದು ಪ್ರೀತಿಯ ಮಾತುಗಳನ್ನೂ ತಾವು ಆಳವಾಗಿ ಗೌರವಿಸುವುದಾಗಿ ಹಾಗೂ ಅದು ಜನರಿಗೆ ಸೇವೆ ಸಲ್ಲಿಸಲು ತಮಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ದಿನವಿಡೀ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಎಲ್ಲರನ್ನೂ ಅವರು ಶ್ಲಾಘಿಸಿದ್ದಾರೆ. ‘ವಿಕಸಿತ ಭಾರತ’ವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಪ್ರಧಾನ ಮಂತ್ರಿಯವರು ಕರೆ ನೀಡಿದ್ದಾರೆ.

ಶ್ರೀ ಮೋದಿ ಅವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಎಲ್ಲೆಡೆಯಿಂದ ಹರಿದು ಬಂದಿರುವ ಶುಭಾಶಯಗಳು, ಪ್ರೀತಿ ಮತ್ತು ಆಶೀರ್ವಾದಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.

ಪ್ರತಿಯೊಂದು ಪ್ರೀತಿಯ ಮಾತುಗಳು ನನಗೆ ಅತ್ಯಂತ ಪ್ರಿಯವಾದವು ಮತ್ತು ನಮ್ಮ ಜನರಿಗೆ ಸೇವೆ ಮಾಡಲು ನನಗೆ ಹೊಸ ಶಕ್ತಿಯನ್ನು ನೀಡುತ್ತವೆ.

ದಿನವಿಡೀ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರನ್ನೂ ನಾನು ಶ್ಲಾಘಿಸುತ್ತೇನೆ.

ನಾವು ಒಟ್ಟಾಗಿ ವಿಕಸಿತ ಭಾರತವನ್ನು ನಿರ್ಮಿಸುವುದನ್ನು ಮುಂದುವರಿಸೋಣ.

 

*****