ಪಿಎಂಇಂಡಿಯಾ
ಶ್ರೀ ಅಮಿತಾಭ್ ಕಾಂತ್ ಅವರು ಬರೆದಿರುವ ದೊಡ್ಡ ಕನಸುಗಳ ಪ್ರಾಮುಖ್ಯತೆ, ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಸುಧಾರಣೆಗಳ ಪಾತ್ರ ಸೇರಿದಂತೆ ಪ್ರಧಾನಮಂತ್ರಿಯವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಪ್ರತಿಬಿಂಬಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಮೂಲಭೂತ ಸೌಕರ್ಯಗಳಂತಹ ವಲಯಗಳಲ್ಲಿನ ಫಲಿತಾಂಶಗಳನ್ನು ಸುಧಾರಿಸುವಲ್ಲಿ ‘ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮ’ ಬೀರಿರುವ ಪ್ರಭಾವವನ್ನೂ ಈ ಲೇಖನ ಪ್ರಮುಖವಾಗಿ ವಿವರಿಸಿದೆ. ಜೊತೆಗೆ, ನಾಗರಿಕರು ಮತ್ತು ಉದ್ಯಮಗಳಿಗೆ ಭಾರತದಲ್ಲಿ ಕಾರ್ಯನಿರ್ವಹಣೆಯನ್ನು ಸುಲಭ, ಸರಳ ಮತ್ತು ಹೆಚ್ಚು ದಕ್ಷವಾಗಿಸುವ ನಿಟ್ಟಿನಲ್ಲಿ ವಿವಿಧ ಸುಧಾರಣೆಗಳು ಹೇಗೆ ಕೊಡುಗೆ ನೀಡಿವೆ ಎಂಬುದನ್ನೂ ಇದು ತಿಳಿಸಿದೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಹೀಗಿದೆ:
ಪ್ರಧಾನಮಂತ್ರಿ @narendramodi ಅವರೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಹಾಗೂ ಪ್ರಧಾನಮಂತ್ರಿಗಳ ಕಾರ್ಯಶೈಲಿ, ದೊಡ್ಡ ಕನಸು ಕಾಣುವ ಮಹತ್ವ ಮತ್ತು ಸುಧಾರಣೆಗಳು ಹೇಗೆ ಪರಿವರ್ತನೆಗೆ ಚಾಲನೆ ನೀಡುತ್ತಿವೆ ಎಂಬುದನ್ನು ವಿವರಿಸಿರುವ ಶ್ರೀ @amitabhk87 ಅವರು ಬರೆದಿರುವ ಲೇಖನವಿದು.
ಅದರ ಜೊತೆಗೆ, ‘ಆಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮ’ವು ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಮೂಲಸೌಕರ್ಯಗಳ ಸುಧಾರಣೆಗೆ ಹೇಗೆ ನೆರವಾಗಿದೆ ಎಂಬುದನ್ನೂ ಅವರು ಲೇಖನದಲ್ಲಿ ವಿವರಿಸಿದ್ದಾರೆ; ಜೊತೆಗೆ, ನಾಗರಿಕರು ಮತ್ತು ಉದ್ಯಮಗಳಿಗೆ ಭಾರತದಲ್ಲಿ ವ್ಯವಹಾರ ನಡೆಸುವುದನ್ನು ಸುಲಭ, ಸರಳ ಮತ್ತು ಹೆಚ್ಚು ದಕ್ಷವಾಗಿಸಿರುವ ಸುಧಾರಣೆಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ.
*****
An article by Shri @amitabhk87 in which he reflects on his experience of working with PM @narendramodi, including the Prime Minister's working style, the importance of dreaming big and how reforms are driving transformation.
— PMO India (@PMOIndia) September 18, 2026
He also outlines how the Aspirational Districts… pic.twitter.com/btoy3Jd5gw