Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮರುಬಳಕೆಯ ಮತ್ತು ಸ್ಪರ್ಧಾತ್ಮಕ ಜವಳಿ ಉದ್ಯಮವನ್ನು ರೂಪಿಸುವ ಉಪಕ್ರಮಗಳ ಕುರಿತಾದ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಜವಳಿ ಮರುಬಳಕೆ, ಕಡಿಮೆ ತ್ಯಾಜ್ಯ ಮತ್ತು ಕಡಿಮೆ ಮಾಲಿನ್ಯದ ಸ್ವಚ್ಛ ಉತ್ಪಾದನೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆಯ ಉಪಕ್ರಮಗಳು ಹೇಗೆ ವರ್ತುಲ (ತ್ಯಾಜ್ಯ ಕಡಿತದೊಂದಿಗೆ ಮರುಬಳಕೆಯಾಗಬಲ್ಲ) ಮತ್ತು ಸ್ಪರ್ಧಾತ್ಮಕ ಜವಳಿ ಉದ್ಯಮವನ್ನು ನಿರ್ಮಿಸಲು ಪೂರಕ ಎಂಬುದನ್ನು ವಿವರಿಸುವ ಶ್ರೀ ಗಿರಿರಾಜ್ ಸಿಂಗ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಸುಸ್ಥಿರತೆಯು ಬಹಳ ಹಿಂದಿನಿಂದಲೂ ಭಾರತದ ನೈತಿಕ‌ಪ್ರಜ್ಞೆಯೊಂದಿಗೆ ಬೆಸೆದಿದೆ ಮತ್ತು ಈಗ ನಮ್ಮ ಜವಳಿ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

ಸುಸ್ಥಿರತೆಯು ಬಹಳ ಹಿಂದಿನಿಂದಲೂ ಭಾರತದ ನೈತಿಕ ಮೌಲ್ಯದ ಅವಿಭಾಜ್ಯ ಭಾಗವಾಗಿದೆ. ಇದು ಈಗ ನಮ್ಮ ಜವಳಿ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತಿದೆ.

ಕೇಂದ್ರ ಸಚಿವರಾದ ಶ್ರೀ @girirajsinghbjp ಅವರು ಈ ಲೇಖನದಲ್ಲಿ, ವಸ್ತ್ರಗಳ ಮರುಬಳಕೆ, ಸ್ವಚ್ಛ ಉತ್ಪಾದನೆ ಮತ್ತು ಹಸಿರು ತಂತ್ರಜ್ಞಾನಗಳನ್ನಾಧರಿಸಿದ ಉಪಕ್ರಮಗಳು ಇನ್ನಷ್ಟು ವರ್ತುಲಾವೃತ್ತದ ಮತ್ತು ಸ್ಪರ್ಧಾತ್ಮಕ ಜವಳಿ ಉದ್ಯಮವನ್ನು ನಿರ್ಮಿಸಲು ಹೇಗೆ ನೆರವಾಗಲಿವೆ ಎಂಬುದನ್ನು ವಿವರಿಸಿದ್ದಾರೆ.

 

*****