ಪಿಎಂಇಂಡಿಯಾ
ಮಹಿಳೆಯರ ಸಾಂಡಾ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ನವೋರೆಮ್ ರೋಶಿಬಿನಾ ದೇವಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದರು.
ಸತತ ಮೂರು ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಅವರ ಸ್ಥಿರತೆ, ಧೈರ್ಯ ಮತ್ತು ದೃಢನಿಶ್ಚಯವು ನಿಜಕ್ಕೂ ಶ್ಲಾಘನೀಯ ಎಂದು ಅವರು ಬಣ್ಣಿಸಿದರು. ಅವರುಗಳ ಮುಂದಿನ ಎಲ್ಲಾ ಪ್ರಯತ್ನಗಳಿಗೂ ಶ್ರೀ ಮೋದಿ ಅವರು ಶುಭ ಹಾರೈಸಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ‘ಎಕ್ಸ್’ ತಾಣದಲ್ಲಿ ಹೀಗೆ ಸಂದೇಶ ಹಂಚಿಕೊಂಡಿದೆ:
“ಮಹಿಳೆಯರ ಸಾಂಡಾ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ನವೋರೆಮ್ ರೋಶಿಬಿನಾ ದೇವಿ ಅವರಿಗೆ ಅಭಿನಂದನೆಗಳು. ಇದು ಗಮನಾರ್ಹ ಸಾಧನೆ… ಸತತ 3 ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದಿರುವುದು. ಅವರ ಸ್ಥಿರತೆ, ಧೈರ್ಯ ಮತ್ತು ದೃಢನಿಶ್ಚಯವು ನಿಜಕ್ಕೂ ಶ್ಲಾಘನೀಯ.
ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****
Congratulations to Naorem Roshibina Devi on winning the Silver Medal in the Women’s Sanda 60kg event. This is a noteworthy achievement…winning medals in 3 consecutive Asian Games. Her consistency, courage and determination are truly commendable.
— PMO India (@PMOIndia) September 24, 2026
Best wishes for all future… pic.twitter.com/07liuWPiEA