ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಜೀವನದ ನಾಲ್ಕು ಗುರಿಗಳನ್ನು ಸಾಧಿಸಲು ಉತ್ತಮ ಆರೋಗ್ಯವೇ ಮೂಲಾಧಾರ ಎಂದು ಪ್ರತಿಪಾದಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“सुखोपविष्टास्ते तत्र पुण्यां चक्रुः कथामिमाम् |
धर्मार्थकाममोक्षाणामारोग्यं मूलमुत्तमम्।।”
ಶಾಂತಚಿತ್ತರಾಗಿ ಕುಳಿತಿದ್ದ ಮಹರ್ಷಿಗಳು ಈ ಪವಿತ್ರ ಕಥೆಯನ್ನು ವಿವರಿಸಿದರು. ಅದರ ಪ್ರಕಾರ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಜೀವನದ ನಾಲ್ಕು ಗುರಿಗಳನ್ನು ಸಾಧಿಸಲು ಉತ್ತಮ ಆರೋಗ್ಯವೇ ಮುಖ್ಯ ಆಧಾರವಾಗಿದೆ.
*****
सुखोपविष्टास्ते तत्र पुण्यां चक्रुः कथामिमाम् |
— Narendra Modi (@narendramodi) September 28, 2026
धर्मार्थकाममोक्षाणामारोग्यं मूलमुत्तमम्।। pic.twitter.com/oaazf0gZWh