Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯಶಸ್ಸನ್ನು ಆಹ್ವಾನಿಸುವ ಆರು ಗುಣಲಕ್ಷಣಗಳನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಶ್ರದ್ಧೆ, ಧೈರ್ಯ, ತಾಳ್ಮೆ, ಕಾರ್ಯ ಸಾಮರ್ಥ್ಯ, ಜ್ಞಾನ ಮತ್ತು ಶೌರ್ಯ – ಈ ಆರು ಗುಣಲಕ್ಷಣಗಳ ಮಹತ್ವವನ್ನು ತಿಳಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಹಂಚಿಕೊಂಡಿದ್ದಾರೆ. ಈ ಗುಣಲಕ್ಷಣಗಳು ವ್ಯಕ್ತಿಯಲ್ಲಿ ಇದ್ದಾಗ ದೈವಿಕ ನೆರವು ಕೂಡ ಅವರ ನೆರವಿಗೆ ಬರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿಯವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು-

“उद्यमः साहसं धैर्यं बुद्धिः शक्तिः पराक्रमः।

षडेते यत्र वर्तन्ते तत्र दैवं सहायकृत्॥”

ಶ್ರದ್ಧೆ, ಧೈರ್ಯ, ತಾಳ್ಮೆ, ಕ್ರಿಯೆಯ ಸಾಮರ್ಥ್ಯ, ಜ್ಞಾನ ಮತ್ತು ಶೌರ್ಯ – ಈ ಆರು ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗೆ ಸಹಾಯವನ್ನು ನೀಡಲು ದೇವರೇ ಇರುತ್ತಾನೆ ಎಂದು ಸುಭಾಷಿತವು ತಿಳಿಸುತ್ತದೆ.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಬರೆದಿದ್ದಾರೆ;

“उद्यमः साहसं धैर्यं बुद्धिः शक्तिः पराक्रमः।

षडेते यत्र वर्तन्ते तत्र दैवं सहायकृत्॥”

 

*****