Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದ ಪುರುಷರ 4×400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದ ಧರ್ಮವೀರ್ ಚೌಧರಿ, ಮನು ಟಿ.ಎಸ್, ಜಯ್ ಕುಮಾರ್ ಮತ್ತು ವಿಶಾಲ್ ಟಿ ಕೆ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಕ್ರೀಡಾಕೂಟದ ಪುರುಷರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಧರ್ಮವೀರ್ ಚೌಧರಿ, ಮನು ಟಿ ಎಸ್, ಜಯ್ ಕುಮಾರ್ ಮತ್ತು ವಿಶಾಲ್ ಟಿ ಕೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಆ ತಂಡವು ಅತ್ಯುತ್ತಮ ಸಮಯ ಪಾಲನೆಯೊಂದಿಗೆ ಪದಕವನ್ನು ಗೆದ್ದಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್‌ ಜನಪ್ರಿಯತೆಯನ್ನು ವರ್ಧಿಸಲು ಈ ಯಶಸ್ಸು ಪೂರಕ ಎಂದು ಶ್ರೀ ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ

ಪ್ರಧಾನಮಂತ್ರಿ ಕಾರ್ಯಾಲಯದ ಎಕ್ಸ್‌ ಪೋಸ್ಟ್‌ ಹೀಗಿದೆ:

“ನಿಜಕ್ಕೂ ಅದ್ಭುತ! 

ಪುರುಷರ 4×400 ಮೀಟರ್ ರಿಲೇಯಲ್ಲಿ ಅತ್ಯುತ್ತಮ ಸಮಯ ಸಾಧನೆಯೊಂದಿಗೆ ಕಂಚಿನ ಪದಕ ಜಯಿಸಿರುವ ಧರ್ಮವೀರ್ ಚೌಧರಿ, ಮನು ಟಿ.ಎಸ್, ಜಯ್ ಕುಮಾರ್ ಮತ್ತು ವಿಶಾಲ್ ಟಿ ಕೆ ಅವರಿಗೆ ಅಭಿನಂದನೆಗಳು. ಅವರ ಈ ಯಶಸ್ಸು ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್‌ ಜನಪ್ರಿಯತೆ ವರ್ಧಿಸಲು ಕೊಡುಗೆ ನೀಡಲಿ: ಪ್ರಧಾನಮಂತ್ರಿ @narendramodi”

 

*****