ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2026ರ ಏಷ್ಯನ್ ಗೇಮ್ಸ್‌ನ ಮಹಿಳಾ ತಂಡದ ಗಾಲ್ಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅದಿತಿ ಅಶೋಕ್, ಪ್ರಣವಿ ಶರತ್ ಉರ್ಸ್ ಮತ್ತು ದೀಕ್ಷಾ ದಾಗರ್ ಅವರನ್ನು ಅಭಿನಂದಿಸಿದ್ದಾರೆ.
ಅವರ ಈ ಯಶಸ್ಸು ಕ್ರೀಡೆಯ ಮೇಲಿರುವ ಅವರ ದೃಢ ಸಂಕಲ್ಪ ಮತ್ತು ಉತ್ಸಾಹವನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಶ್ರೀ ಮೋದಿ ಅವರು ಅದಿತಿ ಅಶೋಕ್, ಪ್ರಣವಿ ಶರತ್ ಅರಸ್ ಮತ್ತು ದೀಕ್ಷಾ ದಾಗರ್ ಅವರಿಗೆ ನಿರಂತರ ಯಶಸ್ಸನ್ನು ಹಾರೈಸಿದರು ಹಾಗೂ ಮುಂದಿನ ದಿನಗಳಲ್ಲಿ ಅವರು ಯಶಸ್ಸಿನ ಹೊಸ ಶಿಖರಗಳನ್ನು ಏರಲಿ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರ ಕಚೇರಿಯು ‘ಎಕ್ಸ್’ ನಲ್ಲಿ ಹೀಗೆ ಬರೆದಿದೆ:
“ನಿನ್ನೆ ನಡೆದ 2026ರ ಏಷ್ಯನ್ ಗೇಮ್ಸ್‌ನ ಮಹಿಳಾ ತಂಡದ ಗಾಲ್ಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅದಿತಿ ಅಶೋಕ್, ಪ್ರಣವಿ ಶರತ್ ಅರಸ್ ಮತ್ತು ದೀಕ್ಷಾ ದಾಗರ್ ಅವರಿಗೆ ಅಭಿನಂದನೆಗಳು. ಈ ಯಶಸ್ಸು ಕ್ರೀಡೆಯ ಮೇಲಿರುವ ಅವರ ದೃಢ ಸಂಕಲ್ಪ ಮತ್ತು ಉತ್ಸಾಹವನ್ನು ತೋರಿಸುತ್ತದೆ. ಅವರು ಮುಂದಿನ ದಿನಗಳಲ್ಲಿ ಯಶಸ್ಸಿನ ಹೊಸ ಶಿಖರಗಳನ್ನು ಏರುತ್ತಲೇ ಇರಲಿ: ಪ್ರಧಾನಮಂತ್ರಿ @narendramodi“
*****
Kudos to Aditi Ashok, Pranavi Sharath Urs and Diksha Dagar on winning the Silver Medal in the Women’s Team Golf event at the Asian Games 2026 yesterday. This success highlights their determination and passion for the sport. May they continue to attain new heights of success in the times to come: PM @narendramodi
— PMO India (@PMOIndia) October 4, 2026