Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಅಭಿವೃದ್ಧಿ ಪಯಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮನಸ್ಥಿತಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂಬ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಅಭಿವೃದ್ಧಿಯ ಪಯಣವು ಮನೋಭಾವದಲ್ಲಿನ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ ಎಂಬ ಕುರಿತು ಎಂ. ವೆಂಕಯ್ಯ ನಾಯ್ಡು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕವಾದ ‘ಚಲ್ತಾ ಹೈ’ (ಹೀಗೆಯೇ ನಡೆಯುತ್ತದೆ) ಎಂಬ ನಿರ್ಲಕ್ಷ್ಯದ ಧೋರಣೆಯಿಂದ ಹೊರಬಂದು, ‘ಬದಲ್ ಸಕ್ತಾ ಹೈ’ (ಬದಲಾವಣೆ ಸಾಧ್ಯವಿದೆ) ಎಂಬ ದೃಢ ನಂಬಿಕೆ ಮತ್ತು ಆಶಾವಾದದ ಮನೋಭಾವದತ್ತ ಭಾರತ ಸಾಗಿರುವುದನ್ನು ಲೇಖನದಲ್ಲಿ ವಿವರಿಸಲಾಗಿದೆ.

ಈ ಬದಲಾವಣೆಯು ಆಡಳಿತ ಮತ್ತು ಅಭಿವೃದ್ಧಿಯ ಹಲವಾರು ಕ್ಷೇತ್ರಗಳಲ್ಲಿ ಪ್ರತಿಫಲಿಸುತ್ತದೆ. ಬ್ಯಾಂಕಿಂಗ್ ವಲಯದಲ್ಲಿನ ಸುಧಾರಣೆಗಳು, ಡಿಜಿಟಲ್ ಪಾವತಿಗಳ ತ್ವರಿತ ವಿಸ್ತರಣೆ ಮತ್ತು ಬಡತನ ನಿವಾರಣೆಯ ಪ್ರಯತ್ನಗಳು ನಿರಂತರ ಮತ್ತು ದೃಢಸಂಕಲ್ಪದ ಮೂಲಕ ದೀರ್ಘಕಾಲದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿವೆ.

ಶ್ರೀ ಮೋದಿ ಅವರು ತಮ್ಮ X ಪೋಸ್ಟ್ ನಲ್ಲಿ  ಹೀಗೆ ಮಾಡಿದ್ದಾರೆ;

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ PM @narendramodi’s journey ಪಯಣವು ಭಾರತವನ್ನು ‘ಚಲ್ತಾ ಹೈ’ (ಹೀಗೆಯೇ ನಡೆಯುತ್ತದೆ) ಎಂಬ ಧೋರಣೆಯಿಂದ ‘ಬದಲ್ ಸಕ್ತಾ ಹೈ’ (ಬದಲಾವಣೆ ಸಾಧ್ಯ) ಎಂಬ ದೃಢ ಮನೋಭಾವದತ್ತ ಕೊಂಡೊಯ್ದಿದೆ ಎಂದು ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಲೇಖನ ಬರೆದಿದ್ದಾರೆ. ಬ್ಯಾಂಕಿಂಗ್ ಸುಧಾರಣೆಗಳು, ಡಿಜಿಟಲ್ ಪಾವತಿ ವ್ಯವಸ್ಥೆಯ ವಿಸ್ತರಣೆ ಮತ್ತು ಬಡತನ ನಿವಾರಣೆ ಸೇರಿ ಹಿಂದೆ ಪರಿಹರಿಸಲು ಕಷ್ಟವೆಂದು ಭಾವಿಸಲಾಗಿದ್ದ ಹಲವು ಸವಾಲುಗಳನ್ನು ದೃಢಸಂಕಲ್ಪದಿಂದ ಎದುರಿಸಿ, ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ವಿಕಸಿತ ಭಾರತ’ದತ್ತ ಭಾರತದ ಪಯಣವನ್ನು ರೂಪಿಸುತ್ತಿರುವ ಈ ಮನಸ್ಥಿತಿಯ ಕುರಿತಾದ ಲೇಖನವನ್ನು ತಪ್ಪದೇ ಓದಬೇಕು.

https://indianexpress.com/article/opinion/columns/from-chalta-hai-to-badal-sakta-hai-changing-the-way-india-thinks-10909840/

 

*****