ಪಿಎಂಇಂಡಿಯಾ
ಪ್ರಧಾನಮಂತ್ರಿಯವರ 25 ವರ್ಷಗಳ ನಾಯಕತ್ವವು ಭಾರತದ ಕೈಗಾರಿಕೆ, ಉದ್ಯಮಶೀಲತೆ ಮತ್ತು ಉತ್ಪಾದನೆಗೆ ಪರಿಸರವನ್ನು ಹೇಗೆ ಬಲಪಡಿಸಲು ಸಹಾಯ ಮಾಡಿದೆ ಎಂಬುದನ್ನು ಉಲ್ಲೇಖಿಸುವ ಶ್ರೀ ಉದಯ್ ಕೋಟಕ್ ಅವರ ಲೇಖನವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಸುಧಾರಣೆಗಳು, ಮೂಲಸೌಕರ್ಯ ಮತ್ತು ಉತ್ಪಾದನೆ, ಅರೆವಾಹಕಗಳು, ರಕ್ಷಣೆ ಮತ್ತು ಆಳವಾದ ತಂತ್ರಜ್ಞಾನದಲ್ಲಿನ ಹೊಸ ಉಪಕ್ರಮಗಳು ಹೊಸ ಕೈಗಾರಿಕಾ ಸಾಮರ್ಥ್ಯಗಳನ್ನು ಹೇಗೆ ನಿರ್ಮಿಸುತ್ತಿವೆ, ಹಾಗೂ ಭಾರತೀಯ ವ್ಯವಹಾರಗಳನ್ನು ಜಾಗತಿಕವಾಗಿ ವಿಸ್ತರಿಸಲು ಮತ್ತು ಸ್ಪರ್ಧಿಸಲು ವಿಕಸಿತ ಭಾರತ ಪ್ರೋತ್ಸಾಹಿಸುತ್ತಿದೆ ಎಂದು ಶ್ರೀ ಕೋಟಕ್ ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“ಪ್ರಧಾನಮಂತ್ರಿ @narendramodi ಅವರ 25 ವರ್ಷಗಳ ನಾಯಕತ್ವವು ಭಾರತದ ಕೈಗಾರಿಕೆ, ಉದ್ಯಮಶೀಲತೆ ಮತ್ತು ಉತ್ಪಾದನೆಗೆ ಪರಿಸರವನ್ನು ಬಲಪಡಿಸಲು ಸಹಾಯ ಮಾಡಿದೆ, ಸುಧಾರಣೆಗಳು, ಮೂಲಸೌಕರ್ಯ ಮತ್ತು ಉತ್ಪಾದನೆ, ಅರೆವಾಹಕಗಳು, ರಕ್ಷಣೆ ಮತ್ತು ಆಳವಾದ ತಂತ್ರಜ್ಞಾನದಲ್ಲಿನ ಹೊಸ ಉಪಕ್ರಮಗಳು ಹೊಸ ಕೈಗಾರಿಕಾ ಸಾಮರ್ಥ್ಯಗಳನ್ನು ನಿರ್ಮಿಸುತ್ತಿವೆ ಎಂದು ಶ್ರೀ @udaykotak ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.
ಭಾರತೀಯ ವ್ಯವಹಾರಗಳು ಜಾಗತಿಕವಾಗಿ ಬೆಳೆಯಲು ಮತ್ತು ಸ್ಪರ್ಧಿಸಲು ವಿಕಸಿತ ಭಾರತ ಪ್ರೋತ್ಸಾಹಿಸುತ್ತಿದೆ. ಭಾರತದ ಮುಂದಿನ ಹಂತದ ಕೈಗಾರಿಕಾ ಬೆಳವಣಿಗೆಯ ಕುರಿತು ಚಿಂತನಶೀಲ ದೃಷ್ಟಿಕೋನ ಇದಾಗಿದೆ.”
*****
PM @narendramodi's 25 years of leadership have helped strengthen India's environment for industry, entrepreneurship and manufacturing, writes Shri @udaykotak. Reforms, infrastructure and new initiatives in manufacturing, semiconductors, defence and deep technology are building new industrial capabilities. Viksit Bharat is also encouraging Indian businesses to grow and compete globally. A thoughtful perspective on India's next phase of industrial growth. https://t.co/PNJLm7Kw8h
— PMO India (@PMOIndia) October 7, 2026