ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 9, 2026ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಸಂಜೆ ಸುಮಾರು 4:30ಕ್ಕೆ ನಡೆಯಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕುರಿತ ಇಲಾಖೆಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದೇಶಿಸಿ ಮಾತನಾಡಲಿದ್ದಾರೆ.
ಅಕ್ಟೋಬರ್ 8 ಮತ್ತು 9, 2026 ರಂದು ನಡೆಯುತ್ತಿರುವ ಈ ಎರಡು ದಿನಗಳ ಇಲಾಖೆಯ ಸಮಾವೇಶವು, ಎಲ್ಲಾ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು, ರಾಷ್ಟ್ರೀಯ ಆದ್ಯತೆಗಳ ಸಾಮೂಹಿಕ ಜವಾಬ್ದಾರಿಯನ್ನು ಉತ್ತೇಜಿಸಲು ಮತ್ತು ಕೇಂದ್ರ ಮತ್ತು ರಾಜ್ಯಗಳ ನಿಕಟ ಸಹಯೋಗದ ಮೂಲಕ ಫಲಿತಾಂಶಗಳನ್ನು ತ್ವರಿತಗೊಳಿಸಲು ಪ್ರಧಾನಮಂತ್ರಿ ಅವರು ರೂಪಿಸಿರುವ ಇಲಾಖೆಯ ಸಮಾವೇಶಗಳ ಸರಣಿಯಲ್ಲಿ ಇದು ಎರಡನೆಯದಾಗಿದೆ.
ಈ ಸಮಾವೇಶವು ನಾಲ್ಕು ವಿಷಯಗಳ ಮೇಲೆ ಗಮನ ಹರಿಸಲಿದೆ:
ಇಲಾಖೆಯ ಸಮಾವೇಶದ ಮಾದರಿಯು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರರನ್ನು ಒಗ್ಗೂಡಿಸಿ, ವಲಯದ ಆದ್ಯತೆಗಳ ಬಗ್ಗೆ ಚರ್ಚಿಸಲು, ಉತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳಲು, ಅನುಷ್ಠಾನದ ಸವಾಲುಗಳನ್ನು ಪರಿಹರಿಸಲು ಮತ್ತು ಸುಧಾರಿತ ಆಡಳಿತ ಹಾಗೂ ಸೇವಾ ವಿತರಣೆಗಾಗಿ ಕಾಲಮಿತಿಯ ಕ್ರಮಗಳ ಬಗ್ಗೆ ಒಮ್ಮತಕ್ಕೆ ಬರಲು ಈ ವೇದಿಕೆ ಕಲ್ಪಿಸುತ್ತದೆ.
*****